ಮಾಧವಿ ಲತಾ 
ದೇಶ

ಹೈದರಾಬಾದ್‌: ಮುಸ್ಲಿಂ ಮತದಾರರ ಐಡಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ, ಕೇಸ್ ದಾಖಲು

ಹೈದರಾಬಾದ್‌ನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಮಾಧವಿ ಲತಾ ಅವರು ಮತಗಟ್ಟೆಗೆ ಭೇಟಿ ನೀಡಿದಾಗ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ವಿಡಿಯೋ ವೈರಲ್.

ಹೈದರಾಬಾದ್‌: ಹೈದರಾಬಾದ್‌ನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಮಾಧವಿ ಲತಾ ಅವರು ಮತಗಟ್ಟೆಗೆ ಭೇಟಿ ನೀಡಿದಾಗ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ವಿಡಿಯೋ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಬಿಜೆಪಿ ಅಭ್ಯರ್ಥಿಯು ಮತಗಟ್ಟೆಯೊಳಗಿದ್ದ ಮುಸ್ಲಿಂ ಮಹಿಳೆಯರನ್ನು ಬುರ್ಖಾ ತೆಗೆಸಿ, ಮತದಾರರ ಗುರುತಿನ ಚೀಟಿ ತೋರಿಸುವಂತೆ ಕೇಳುತ್ತಿರುವುದನ್ನು ಕಾಣಬಹುದು.

ವಿಡಿಯೋ ಕುರಿತು ಎಎನ್‌ಐ ಜತೆ ಮಾತನಾಡಿದ ಬಿಜೆಪಿ ನಾಯಕಿ ಮಾಧವಿ, ಮಹಿಳೆಯರ ಗುರುತನ್ನು ಮಾತ್ರ ಪರಿಶೀಲಿಸಿದ್ದೇನೆ ಮತ್ತು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

"ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಮುಖವಾಡಗಳಿಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ. ನಾನು ಪುರುಷ ಅಲ್ಲ, ನಾನು ಮಹಿಳೆ ಮತ್ತು ಬಹಳ ವಿನಮ್ರತೆಯಿಂದ ನಾನು ಅವರನ್ನು ವಿನಂತಿಸಿದ್ದೇನೆ. ಗುರುತಿನ ಚೀಟಿ ಪರಿಶೀಲಿಸಿರುವುದನ್ನೇ ವಿವಾದ ಮಾಡಲು ಬಯಸಿದರೆ, ಅವರು ಭಯಪಡುತ್ತಿದ್ದಾರೆ ಎಂದರ್ಥ ಎಂದಿದ್ದಾರೆ.

ಇದಕ್ಕೂ ಮುನ್ನ ಲತಾ ಅವರು ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿದ್ದರು.

"ಪೊಲೀಸ್ ಸಿಬ್ಬಂದಿ ತುಂಬಾ ದಡ್ಡರಂತೆ ಕಾಣುತ್ತಾರೆ. ಅವರು ಸಕ್ರಿಯವಾಗಿಲ್ಲ ... ಅವರು ಏನನ್ನೂ ಪರಿಶೀಲಿಸುತ್ತಿಲ್ಲ. ಹಿರಿಯ ನಾಗರಿಕ ಮತದಾರರು ಇಲ್ಲಿಗೆ ಬರುತ್ತಾರೆ. ಆದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ" ಎಂದು ಬಿಜೆಪಿ ನಾಯಕಿ ಆರೋಪಿಸಿದ್ದರು.

ಮುಸ್ಲಿಂ ಮತದಾರರ ಐಡಿ ಪರಿಶೀಲಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮಾಧವಿ ಲತಾ ಅವರ ವಿರುದ್ಧ ಮಲಕಪೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT