"Weak Congress governments threw country into fire of Naxalism...": PM Modi in Jharkhand 
ದೇಶ

ಬಜೆಟ್‌ನ ಶೇ.15 ರಷ್ಟು ಹಣವನ್ನು ಕಾಂಗ್ರೆಸ್ ಮುಸ್ಲಿಮರಿಗೆ ಹಂಚಿಕೆ ಮಾಡಲಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ ತನ್ನ ಹಿಂದಿನ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರದ ಬಜೆಟ್‌ನ ಶೇ. 15 ರಷ್ಟು ಹಣವನ್ನು ಹಂಚಿಕೆ ಮಾಡಲು ಬಯಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ನಾಸಿಕ್: ಕಾಂಗ್ರೆಸ್ ತನ್ನ ಹಿಂದಿನ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರದ ಬಜೆಟ್‌ನ ಶೇ. 15 ರಷ್ಟು ಹಣವನ್ನು ಹಂಚಿಕೆ ಮಾಡಲು ಬಯಸಿತ್ತು ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ಅಥವಾ ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಅವಕಾಶ ನೀಡುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.

ಇಂದು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಿಂಪಲ್ಗಾಂವ್ ಬಸವಂತ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಧರ್ಮದ ಆಧಾರದ ಮೇಲೆ ಬಜೆಟ್ ಅನ್ನು ವಿಭಜಿಸುವುದು ಅಪಾಯಕಾರಿ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಧರ್ಮ ಆಧಾರಿತ ಮೀಸಲಾತಿಯನ್ನು ದೃಢವಾಗಿ ವಿರೋಧಿಸಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಟ್ಟು ಬಜೆಟ್‌ನಲ್ಲಿ ಶೇ 15ರಷ್ಟು ಹಣವನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಲು ಯೋಜನೆ ರೂಪಿಸಿತ್ತು ಎಂದು ಮೋದಿ ಆರೋಪಿಸಿದರು.

"ನಾನು(ಗುಜರಾತ್‌ನ) ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಈ ಪ್ರಸ್ತಾವನೆ ತಂದಿತ್ತು. ಬಿಜೆಪಿ ಈ ಕ್ರಮವನ್ನು ಬಲವಾಗಿ ವಿರೋಧಿಸಿತು ಮತ್ತು ಆದ್ದರಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ಈ ಪ್ರಸ್ತಾವನೆಯನ್ನು ಮತ್ತೆ ಜಾರಿಗೆ ತರಲು ಬಯಸಿದೆ" ಎಂದು ಪ್ರಧಾನಿ ಹೇಳಿದರು.

ಅಂಬೇಡ್ಕರ್ ಅವರು ಧರ್ಮ ಆಧಾರಿತ ಮೀಸಲಾತಿಯನ್ನು ಬಲವಾಗಿ ವಿರೋಧಿಸಿದ್ದರು. ಆದರೆ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ/ಒಬಿಸಿಗಳ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ನೀಡಲು ಬಯಸುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: 'ಹನುಮಾನ್‌ ಜಿ ಮಹಾನ್'.. ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

SCROLL FOR NEXT