ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಎಕ್ಸ್‌ಪ್ರೆಸ್ ಗ್ರೂಪ್‌ ಸಂಸ್ಥಾಪಕ ರಾಮನಾಥ್ ಗೋಯೆಂಕಾ ಸೊಸೆ ಸರೋಜ್ ಗೋಯೆಂಕಾ ನಿಧನ

ಎಕ್ಸ್‌ಪ್ರೆಸ್ ಗ್ರೂಪ್‌ ಸಂಸ್ಥಾಪಕ ಮತ್ತು ಖ್ಯಾತ ಭಾರತೀಯ ಪತ್ರಿಕೋದ್ಯಮಿ ರಾಮನಾಥ್ ಗೋಯೆಂಕಾ ಅವರ ಏಕೈಕ ಪುತ್ರ ದಿವಂಗತ ಭಗವಾನ್ ದಾಸ್ ಗೋಯೆಂಕಾ ಅವರ ಪತ್ನಿ ಸರೋಜ್ ಗೋಯೆಂಕಾ ಅವರು ಚೆನ್ನೈನಲ್ಲಿ ನಿಧನ.

ಸರೋಜ್ ಗೋಯೆಂಕಾ
Lingaraj Badiger
Updated On : 24 May 2024, 3:45 pm

ಚೆನ್ನೈ: ಎಕ್ಸ್‌ಪ್ರೆಸ್ ಗ್ರೂಪ್‌ ಸಂಸ್ಥಾಪಕ ಮತ್ತು ಖ್ಯಾತ ಭಾರತೀಯ ಪತ್ರಿಕೋದ್ಯಮಿ ರಾಮನಾಥ್ ಗೋಯೆಂಕಾ ಅವರ ಏಕೈಕ ಪುತ್ರ ದಿವಂಗತ ಭಗವಾನ್ ದಾಸ್ ಗೋಯೆಂಕಾ ಅವರ ಪತ್ನಿ ಸರೋಜ್ ಗೋಯೆಂಕಾ ಅವರು ಶುಕ್ರವಾರ ಬೆಳಗ್ಗೆ ಚೆನ್ನೈನಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಸರೋಜ್ ಗೋಯೆಂಕಾ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್ ಸೊಂತಾಲಿಯಾ ಅವರ ಸೋದರತ್ತೆ (ಸೋದರ ಮಾವನ ಹೆಂಡತಿ).

ಆಗಸ್ಟ್ 31, 1929 ರಂದು ಜನಿಸಿದ ಸರೋಜ್ ಗೋಯೆಂಕಾ ಅವರು ಪ್ರಮುಖ ಉದ್ಯಮಿ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನ ದಿವಂಗತ ಶ್ರೇಯನ್ಸ್ ಪ್ರಸಾದ್ ಜೈನ್ ಅವರ ಮಗಳಾಗಿದ್ದು, ಅವರು ಎಕ್ಸ್‌ಪ್ರೆಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು.

Advertisement

Advertisement

Also Read

ಒಡಿಶಾ ಸಾಹಿತ್ಯ ಉತ್ಸವ: ಟಿಎನ್ಐಇಯ ಪ್ರಥಮ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ

ಸರೋಜ್ ಗೋಯೆಂಕಾ ಅವರು ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮದುರೈ) ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಎಕ್ಸ್‌ಪ್ರೆಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಮೌಂಟ್ ರೋಡ್‌ನಲ್ಲಿರುವ ಚೆನ್ನೈನ ಪ್ರಸಿದ್ಧ ಎಕ್ಸ್‌ಪ್ರೆಸ್ ಮಾಲ್ ಅನ್ನು ನಿರ್ಮಿಸಿದೆ.

ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸರೋಜ್ ಗೋಯೆಂಕಾ ಅವರು ಡಿಸೆಂಬರ್ 2015 ರಲ್ಲಿ ಚೆನ್ನೈ ಭಾರಿ ಪ್ರವಾಹಕ್ಕೆ ತುತ್ತಾದಾಗ ಆಗಿನ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.

1998 ರಲ್ಲಿ, ಸರೋಜ್ ಗೋಯೆಂಕಾ ಅವರು 10 ಎಕರೆ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದು, ಅದರಲ್ಲಿ ಈಗ ಅಂಗವಿಕಲರನ್ನು ನೋಡಿಕೊಳ್ಳುವ ಸ್ವಾಮಿ ದಯಾನಂದ ಕೃಪಾ ಮನೆ ಇದೆ.

ಸರೋಜ್ ಗೋಯೆಂಕಾ ಅವರು ತಮ್ಮ ಮೂವರು ಪುತ್ರಿಯರಾದ ಆರತಿ ಅಗರ್ವಾಲ್, ರಿತು ಗೋಯೆಂಕಾ ಮತ್ತು ಕವಿತಾ ಸಿಂಘಾನಿಯಾ ಅವರನ್ನು ಅಗಲಿದ್ದಾರೆ. ಈ ಮೂವರು ಎಕ್ಸ್‌ಪ್ರೆಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement