ಮಲ್ಲಿಕಾರ್ಜುನ ಖರ್ಗೆ 
ದೇಶ

ಪ್ರಧಾನಿ ಮೋದಿಯ 'ಮುಜ್ರಾ' ಹೇಳಿಕೆ ಬಿಹಾರಕ್ಕೆ ಮಾಡಿದ ಅವಮಾನ: ಖರ್ಗೆ ವಾಗ್ದಾಳಿ

ವಿರೋಧ ಪಕ್ಷಗಳ ನಾಯಕರ ವಿರುದ್ಧ 'ಮುಜ್ರಾ' ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಹೇಳಿಕೆ ನೀಡುವ ಮೂಲಕ ಬಿಹಾರವನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

ಸಸಾರಾಮ್: ವಿರೋಧ ಪಕ್ಷಗಳ ನಾಯಕರ ವಿರುದ್ಧ 'ಮುಜ್ರಾ' ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಹೇಳಿಕೆ ನೀಡುವ ಮೂಲಕ ಬಿಹಾರವನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

ಶುಕ್ರವಾರ ಬಿಹಾರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಇಂಡಿಯಾ ಕೂಟವು ಮುಸ್ಲಿಂ ಮತ ಬ್ಯಾಂಕ್ ಅಡಿಯಾಳಾಗಿದ್ದು, ಅದರ ಮುಂದೆ 'ಮುಜ್ರಾ' (ನೃತ್ಯ) ಮಾಡುತ್ತಿದೆ ಎಂದು ಟೀಕಿಸಿದ್ದರು. ಇಂದು ಸಸಾರಂ ಲೋಕಸಭಾ ಕ್ಷೇತ್ರದ ಮಹಾಘಟಬಂಧನ್ ಅಭ್ಯರ್ಥಿ ಮನೋಜ್ ಕುಮಾರ್ ಪರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ವಿರೋಧ ಪಕ್ಷದ ನಾಯಕರಿಗೆ ಪ್ರಧಾನಿ ಮೋದಿಯವರು ಬಳಸಿದ ಪದ, ಬಿಹಾರ ಮತ್ತು ಅದರ ಮತದಾರರಿಗೆ ಮಾಡಿದ ಅವಮಾನ ಎಂದರು.

"ಪ್ರಧಾನಿ ಮೋದಿ ತನನ್ನು 'ತೀಶಮಾರ್ಖನ್ ಎಂದು ಪರಿಗಣಿಸಿದ್ದಾರೆ. ಅವರು ತಪ್ಪು ಅಭಿಪ್ರಾಯದಲ್ಲಿದ್ದಾರೆ. ಜನರು ನಿಜವಾದ 'ತೀಶಮಾರ್ಖನ್. ಸರ್ವಾಧಿಕಾರಿಯಾಗಿರುವ ಅವರು, ಮೂರನೇ ಅವಧಿಗೆ ಪ್ರಧಾನಿಯಾದರೆ, ಜನರು ಏನನ್ನೂ ಹೇಳಲು ಬಿಡುವುದಿಲ್ಲ ಅಷ್ಟೇ ಎಂದರು. ಈ ಚುನಾವಣೆ ರಾಹುಲ್ ವರ್ಸಸ್ ಮೋದಿ ಅಲ್ಲ, ಜನರು ವರ್ಸಸ್ ಮೋದಿ ಚುನಾವಣೆಯಾಗಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಗೌರವಿಸುತ್ತೇನೆ. ಆದರೆ, ಮೋದಿ ಕಾಂಗ್ರೆಸ್ ನಾಯಕರನ್ನು ಗೌರವಿಸುವುದಿಲ್ಲ. ಅವರು ಶ್ರೀಮಂತರನ್ನು ಮಾತ್ರ ತಬ್ಬಿಕೊಳ್ಳುತ್ತಾರೆಯೇ ಹೊರತು ಬಡವರನ್ನಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.

ಜೂನ್ 1 ರಂದು ಸಸಾರಾಮ್, ನಳಂದಾ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರ್ರಾ, ಬಕ್ಸರ್, ಕರಕಟ್ ಮತ್ತು ಜೆಹಾನಾಬಾದ್ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ