ರತನ್ ಟಾಟಾ  online desk
ದೇಶ

ರತನ್ ಟಾಟಾ ಅವರ ಕೊನೆಯ, ಅತ್ಯಂತ ನೆಚ್ಚಿನ ಯೋಜನೆ ಯಾವುದಾಗಿತ್ತು ಗೊತ್ತೇ?

ಆ ಯೋಜನೆ ಜುಲೈ ತಿಂಗಳಲ್ಲಿ ಜಾರಿಗೆ ಬಂದಿದ್ದು, ಮುಂಬೈ ನ ಮಹಾಲಕ್ಷ್ಮಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮುಂಬೈ: ಕೈಗಾರಿಕೋದ್ಯಮಿ ರತನ್ ಟಾಟಾ ತಮ್ಮ ಅನಾರೋಗ್ಯಕ್ಕೂ ಕೆಲವೇ ದಿನಗಳ ಹಿಂದೆ ತಮ್ಮ ನೆಚ್ಚಿನ ಯೋಜನೆಯೊಂದನ್ನು ಜಾರಿಗೆ ತರುವ ಕನಸು ಹೊಂದಿದ್ದರು.

ಆ ಯೋಜನೆ ಜುಲೈ ತಿಂಗಳಲ್ಲಿ ಜಾರಿಗೆ ಬಂದಿದ್ದು, ಮುಂಬೈ ನ ಮಹಾಲಕ್ಷ್ಮಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ರತನ್ ಟಾಟಾ, 200 ಪ್ರಾಣಿಗಳಿಗೆ ಚಿಕಿತ್ಸೆ ನೀಡಬಹುದಾದ 5 ಮಹಡಿಗಳ ಪ್ರಾಣಿ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಸುಮಾರು 165 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆಯ ನಿರ್ಮಾಣವಾಗಿದ್ದು, ಬ್ರಿಟಿಷ್ ಪಶುವೈದ್ಯ ಥಾಮಸ್ ಹೀತ್ಕೋಟ್ ನೇತೃತ್ವದಲ್ಲಿ ಆಸ್ಪತ್ರೆ ನಡೆಯುತ್ತಿದೆ.

ಈ ಯೋಜನೆಯನ್ನು 2017 ರಲ್ಲಿ ಘೋಷಿಸಲಾಯಿತು ಮತ್ತು ನವಿ ಮುಂಬೈನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದಾಗ್ಯೂ, ಸಾಕು ಪ್ರಾಣಿ ಪೋಷಕರಿಗೆ ಪ್ರಯಾಣ ತೊಡಕಾಗಿರುತ್ತದೆ ಎಂದು ಭಾವಿಸಿದ ಟಾಟಾ, ಆಸ್ಪತ್ರೆಯನ್ನು ಕೇಂದ್ರ ಸ್ಥಳಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡರು.

98,000 ಚದರ ಅಡಿಗಳಲ್ಲಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಈ ಆಸ್ಪತ್ರೆಯಲ್ಲಿ 24x7 ತುರ್ತು ಚಿಕಿತ್ಸೆ ಸೌಲಭ್ಯವನ್ನು ಹೊಂದಿದೆ. ತೀವ್ರವಾಗಿ ಅನಾರೋಗ್ಯ ಮತ್ತು ಗಾಯಗೊಂಡ ಪ್ರಾಣಿಗಳಿಗೆ ಜೀವ ಬೆಂಬಲದೊಂದಿಗೆ ICUಗಳು ಮತ್ತು HDUಗಳು, ಮುಂದುವರಿದ ರೋಗನಿರ್ಣಯದ ಇಮೇಜಿಂಗ್ ಸೇವೆಗಳು, ಶಸ್ತ್ರಚಿಕಿತ್ಸಾ ಘಟಕಗಳು, ವಿಶೇಷ ಚಿಕಿತ್ಸೆ (ಡರ್ಮಟಾಲಜಿ, ದಂತ, ನೇತ್ರಶಾಸ್ತ್ರ, ಇತ್ಯಾದಿ), ಆಂತರಿಕ ರೋಗಶಾಸ್ತ್ರ ಪ್ರಯೋಗಾಲಯ ಮತ್ತು ಒಳರೋಗಿಗಳ ವಾರ್ಡ್‌ಗಳನ್ನು ಹೊಂದಿದೆ.

ನಿರ್ದೇಶಕರ ಮಂಡಳಿಯಲ್ಲಿ ರತನ್ ಟಾಟಾ ಅವರ ಕಚೇರಿಯ ಜನರಲ್ ಮ್ಯಾನೇಜರ್ ಶಂತನು ನಾಯ್ಡು ಇದ್ದು, ಆತ ಮೊಟೊಪಾವ್ಸ್ ಎಂಬ ಸ್ಟಾರ್ಟಪ್ ನ್ನು ಸ್ಥಾಪಿಸಿದ್ದಾರೆ. ಇದು ನಾಯಿಗಳಿಗೆ ಪ್ರತಿಫಲಿತ ಕಾಲರ್‌ಗಳನ್ನು ರಾತ್ರಿಯಲ್ಲಿ ವಾಹನಗಳಿಗೆ ಗೋಚರಿಸುವಂತೆ ಮಾಡುತ್ತದೆ.

ಜಾಯಿಂಟ್ ಬದಲಿಗಾಗಿ ಮಿನ್ನೇಸೋಟ ವಿಶ್ವವಿದ್ಯಾನಿಲಯಕ್ಕೆ ತಮ್ಮ ಸಾಕು ಪ್ರಾಣಿಯನ್ನು ಕರೆದೊಯ್ಯಬೇಕಾಯಿತು ಎಂದು ಟಾಟಾ ವಿವರಿಸಿದ್ದರು. "ಆದರೆ ನಾನು ತುಂಬಾ ತಡವಾಗಿ ಬಂದಿದ್ದೇನೆ ಎಂದು ಹೇಳಿದ್ದರು. ಆ ಅನುಭವವು ವಿಶ್ವ ದರ್ಜೆಯ ಪಶುವೈದ್ಯಕೀಯ ಆಸ್ಪತ್ರೆಯನ್ನು ಮಾಡುವುದಕ್ಕೆ ಇರುವ ಸಾಧ್ಯತೆಗಳನ್ನು ಅನ್ವೇಷಿಸಲು ನನಗೆ ಅನುವು ಮಾಡಿಕೊಟ್ಟಿತು" ಎಂದು ರತನ್ ಟಾಟಾ ನೆನಪಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT