ನೆತನ್ಯಾಹು, ರತನ್ ಟಾಟಾ 
ದೇಶ

ರತನ್ ಟಾಟಾ ಭಾರತದ ಹೆಮ್ಮೆಯ ಪುತ್ರ: ಇಸ್ರೇಲ್ ಪ್ರಧಾನಿ ನೆತನ್ಯಾಹು ಸಂತಾಪ

ನನ್ನ ಗೆಳೆಯ ಹಾಗು ಪ್ರಧಾನಿ ನರೇಂದ್ರ ಮೋದಿ ಅವರೇ, ರತನ್ ಟಾಟಾರ ನಿಧನಕ್ಕೆ ನಾನು ಮತ್ತು ಇಸ್ರೇಲ್‌ ಜನರು ಶೋಕ ವ್ಯಕ್ತಪಡಿಸುತ್ತಿದ್ದೇವೆ. ಅವರು ಭಾರತದ ಹೆಮ್ಮೆಯ ಪುತ್ರ. ಉಭಯ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಗೆ ಕೆಲಸ ಮಾಡಿದ ಚಾಂಪಿಯನ್.

ನವದೆಹಲಿ: ಭಾರತೀಯ ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂತಾಪ ಸೂಚಿಸಿದ್ದಾರೆ. ಇಸ್ರೇಲ್ ಮತ್ತು ಭಾರತದ ನಡುವಿನ ಸ್ನೇಹಕ್ಕಾಗಿ ಅವರನ್ನು ಚಾಂಪಿಯನ್ ಎಂದು ಕರೆದಿದ್ದಾರೆ.

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ 86 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿ ಫೋಸ್ಟ್ ಮಾಡಿರುವ ನೆತನ್ಯಾಹು, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ರತನ್ ಟಾಟಾ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದ್ದಾರೆ.

ನನ್ನ ಗೆಳೆಯ ಹಾಗು ಪ್ರಧಾನಿ ನರೇಂದ್ರ ಮೋದಿ ಅವರೇ, ರತನ್ ಟಾಟಾರ ನಿಧನಕ್ಕೆ ನಾನು ಮತ್ತು ಇಸ್ರೇಲ್‌ ಜನರು ಶೋಕ ವ್ಯಕ್ತಪಡಿಸುತ್ತಿದ್ದೇವೆ. ಅವರು ಭಾರತದ ಹೆಮ್ಮೆಯ ಪುತ್ರ. ಉಭಯ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಗೆ ಕೆಲಸ ಮಾಡಿದ ಚಾಂಪಿಯನ್ ಎಂದು ತಿಳಿಸಿದ್ದಾರೆ. ಇದೇ ವೇಳೆ, ಟಾಟಾ ಅವರ ಕುಟುಂಬಕ್ಕೆ ತಮ್ಮ ಸಂತಾಪಗಳನ್ನು ತಿಳಿಸುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ರತನ್ ಟಾಟಾ ನಮ್ಮ ದೇಶದ ನಿಜವಾದ ಗೆಳೆಯ ಎಂದು ಕಳೆದ ಗುರುವಾರ ಸಿಂಗಾಪುರ ಪ್ರಧಾನಿ ಲಾರೆನ್ಸ್‌ ವಾಂಗ್ ಬಣ್ಣಿಸಿದ್ದರು. ಅದೇ ರೀತಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರಾನ್ ಸಂತಾಪ ವ್ಯಕ್ತಪಡಿಸುತ್ತಾ, ರತನ್ ಟಾಟಾ ಅವರು ನಾವೀನ್ಯತೆ ಮತ್ತು ಕೈಗಾರಿಕೋತ್ಪಾದನೆಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸುತ್ತಾ, ಭಾರತ-ಫ್ರಾನ್ಸ್‌ ನಡುವಿನ ಸಂಬಂಧ ಬಲಪಡಿಸುವಲ್ಲಿ ಅವರ ಪಾತ್ರವನ್ನು ಸ್ಮರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT