ಮಹಿಳೆಯರಿಗೆ ವರ್ಷಕ್ಕೆ 30 ಸಾವಿರ ರೂ. ನೀಡಲು ಜಾರ್ಖಂಡ್ ಕ್ಯಾಬಿನೆಟ್ ಅನುಮೋದನೆ
ಜಾರ್ಖಂಡ್ ಮುಖ್ಯಮಂತ್ರಿ ಮೈಯಾನ್ ಸಮ್ಮಾನ್ ಯೋಜನೆ(ಜೆಎಂಎಂಎಸ್ಐ) ಅಡಿಯಲ್ಲಿ ರಾಜ್ಯ ಸರ್ಕಾರ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುತ್ತಿದ್ದು, ಇದೀಗ ಅದನ್ನು 2500 ರೂಪಾಯಿ ಹೆಚ್ಚಿಸಲಾಗುತ್ತಿದೆ.
ರಾಂಚಿ: ಪ್ರಸ್ತುತ ಮಹಿಳೆಯರಿಗೆ ನೀಡುತ್ತಿರುವ ವಾರ್ಷಿಕ 12,000 ರೂ. ಆರ್ಥಿಕ ನೆರವನ್ನು 30,000 ರೂ.ಗೆ ಹೆಚ್ಚಿಸಲು ಜಾರ್ಖಂಡ್ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಜಾರ್ಖಂಡ್ ಮುಖ್ಯಮಂತ್ರಿ ಮೈಯಾನ್ ಸಮ್ಮಾನ್ ಯೋಜನೆ(ಜೆಎಂಎಂಎಸ್ಐ) ಅಡಿಯಲ್ಲಿ ರಾಜ್ಯ ಸರ್ಕಾರ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುತ್ತಿದ್ದು, ಇದೀಗ ಅದನ್ನು 2500 ರೂಪಾಯಿ ಹೆಚ್ಚಿಸಲಾಗುತ್ತಿದೆ.
“ಮೈಯಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ ಆರ್ಥಿಕ ಸಹಾಯವನ್ನು 1,000 ರೂ.ನಿಂದ 2,500 ರೂ.ಗೆ ಹೆಚ್ಚಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ. ಇದನ್ನು ಡಿಸೆಂಬರ್ 2024 ರಿಂದ ಯೋಜನೆಯ 50 ಲಕ್ಷ ಫಲಾನುಭವಿಗಳಿಗೆ ನೀಡಲಾಗುವುದು. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ 9,000 ಕೋಟಿ ಹೊರೆಯಾಗಲಿದೆ' ಎಂದು ಕ್ಯಾಬಿನೆಟ್ ಕಾರ್ಯದರ್ಶಿ ವಂದನಾ ದಾಡೆಲ್ ಅವರು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರಿಗೆ ವರ್ಷಕ್ಕೆ 25,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ.