ರಾಜ್ ಕೋಟ್ ಬಸ್ ಅಪಘಾತ 
ದೇಶ

Horrific video: ಸಿಗ್ನಲ್ ನಲ್ಲಿ ಭೀಕರ ಅಪಘಾತ; ವಾಹನಗಳಿಗೆ ಬಸ್ ಢಿಕ್ಕಿ, 4 ಮಂದಿ ಸಾವು!

ಬಸ್ ಚಾಲಕ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಲು ವಿಫಲವಾಗಿದ್ದು, ಬಸ್ ನೋಡ ನೋಡುತ್ತಲೇ ಮುಂದಿದ್ದ ವಾಹನಗಳ ಮೇಲೆ ಹರಿದಿದೆ.

ರಾಜ್ ಕೋಟ್: ಗುಜರಾತ್‌ನಲ್ಲಿ ಬುಧವಾರ ಬೆಳಗ್ಗೆ ಭೀಕರ ಅಪಘಾತವಾಗಿದ್ದು, ವೇಗವಾಗಿ ಬಂದ ಬಸ್ ಸಿಗ್ನಲ್ ನಲ್ಲಿದ್ದ ಹಲವು ವಾಹನಗಳ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ಕು ಮಂದಿ ಭೀಕರವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗುಜರಾತ್‌ನ ರಾಜ್‌ಕೋಟ್ ನಗರದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ಥಳೀಯ ಪುರಸಭೆ ನಿರ್ವಹಿಸುತ್ತಿದ್ದ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಲವಾರು ವಾಹನಗಳು ಮತ್ತು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಬಸ್ ಚಾಲಕನನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ರಾಜ್‌ಕೋಟ್ ನಗರದ ಇಂದಿರಾ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಬಸ್ ಚಾಲಕ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಲು ವಿಫಲವಾಗಿದ್ದು, ಬಸ್ ನೋಡ ನೋಡುತ್ತಲೇ ಮುಂದಿದ್ದ ವಾಹನಗಳ ಮೇಲೆ ಹರಿದಿದೆ. ಬಳಿಕ ಮುಂದೆ ಸಾಗಿ ಡಿವೈಡರ್ ಢಿಕ್ಕಿಯಾಗಿ ನಿಂತಿದೆ. ಅಷ್ಟು ಹೊತ್ತಿಗಾಗಲೇ ಬಸ್ ನಡಿಗೆ ಹಲವಾರು ವಾಹನ ಚಾಲಕರು ಮತ್ತು ಪಾದಾಚಾರಿಗಳು ಸಿಲುಕಿ ಹಾಕಿಕೊಂಡಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಉಪ ಆಯುಕ್ತ (ವಲಯ -2), ಜಗದೀಶ್ ಬಂಗಾರ್ವಾ, “ಈ ಅಪಘಾತದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು. ಇತರ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಗಾಯಗೊಂಡಿದ್ದಾರೆ. ಮೃತರನ್ನು ರಾಜು ಗಿಡಾ, ಸಂಗೀತಾ ನೇಪಾಳಿ, ಕಿರಣ್ ಕಕ್ಕಡ್ ಮತ್ತು ಚಿನ್ಮಯ್ ಭಟ್ ಎಂದು ಗುರುತಿಸಲಾಗಿದೆ. ಗಾಯಾಳುಗಳು ಸೂರಜ್ ರಾವಲ್, ವಿಶಾಲ್ ಮಕ್ವಾನಾ ಮತ್ತು ವಿರಾಜ್ಬಾ ಖಾಚರ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾವು ಗಾಂಧಿಗ್ರಾಮ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ದಾಖಲಿಸಿದ್ದೇವೆ. ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಯಾಂತ್ರಿಕ ತಪಾಸಣೆ ನಡೆಸುವಂತೆ ನಾವು ಆರ್‌ಟಿಒಗೆ ವಿನಂತಿಸಿದ್ದೇವೆ. ಚಾಲಕ ಮದ್ಯ ಅಥವಾ ಮಾದಕ ವಸ್ತುಗಳ ಪ್ರಭಾವದಲ್ಲಿದ್ದಾರೆಯೇ ಎಂದು ನಿರ್ಧರಿಸಲು ನಾವು ಅವರ ರಕ್ತದ ಮಾದರಿಯನ್ನು ಸಹ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೆ "ಪ್ರಾಥಮಿಕ ವರದಿಯ ಪ್ರಕಾರ, ಚಾಲಕನಿಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ವಾಹನದ ಯಾಂತ್ರಿಕ ತಪಾಸಣೆ ಮತ್ತು ಚಾಲಕನ ವಿಷವೈದ್ಯಶಾಸ್ತ್ರ ಪರೀಕ್ಷೆಗಳು ಸೇರಿದಂತೆ ಅಧಿಕಾರಿಗಳು ಸಮಗ್ರ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬಸ್‌ನ ವಿವರವಾದ ಪರೀಕ್ಷೆಯನ್ನು ನಡೆಸುತ್ತಿದೆ. ನಾವು ಕಾರಣವನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಡಿಸಿಪಿ ಹೇಳಿದರು.

ಕೋಪಗೊಂಡ ಗುಂಪೊಂದು ಬಸ್ ಚಾಲಕ ಶಿಶುಪಾಲ್ಸಿನ್ಹ್ ರಾಣಾ ಅವರನ್ನು ಥಳಿಸಿ ಗಾಯಗೊಳಿಸಿದೆ. ನಂತರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜನಸಮೂಹವು ಬಸ್ ಅನ್ನು ಸಹ ಧ್ವಂಸಗೊಳಿಸಿದೆ ಎಂದು ತಿಳಿಸಿದರು.

ರಾಜ್‌ಕೋಟ್‌ನಲ್ಲಿ ಸಿಟಿ ಬಸ್ ಮತ್ತು ಬಿಆರ್‌ಟಿಎಸ್ ಸೇವೆಗಳನ್ನು ನಿರ್ವಹಿಸುವ ರಾಜ್‌ಕೋಟ್ ರಾಜ್‌ಪಥ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಪರೇಶ್ ಅಧಿಯಾ ಮಾತನಾಡಿ, "ಕಂಡಕ್ಟರ್ ಹೇಳಿಕೆಯ ಪ್ರಕಾರ, ಬ್ರೇಕ್ ವೈಫಲ್ಯ ಕಂಡುಬಂದಿದೆ ಮತ್ತು ಚಾಲಕನಿಗೆ ಬಸ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾವು ಆರ್‌ಟಿಒ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು. ಅಂತೆಯೇ ರಾಜ್‌ಕೋಟ್ ಪುರಸಭೆಯು ಈ ಘಟನೆಯಲ್ಲಿ ಮೃತರಿಗೆ 15 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT