ಜರ್ಮನ್ ಶೆಫರ್ಡ್ 
ದೇಶ

ಹೃದಯಸ್ಪರ್ಶಿ ವೀಡಿಯೊ: ಬಾಲ್ಕನಿಯಿಂದ ಜಿಗಿದು ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಿದ ಜರ್ಮನ್ ಶೆಫರ್ಡ್; Viral Video!

ಜರ್ಮನ್ ಶೆಫರ್ಡ್ ನಾಯಿ ಮನೆಯ ಬಾಲ್ಕನಿಯಲ್ಲಿ ಶಾಂತವಾಗಿ ಕುಳಿತು ರಸ್ತೆಯಲ್ಲಿ ಓಡಾಡುವ ಜನರನ್ನು ನೋಡುತ್ತಿರುವುದನ್ನು ಕಾಣಬಹುದು.

ಉತ್ತರಾಖಂಡದ ಋಷಿಕೇಶದಿಂದ ಹೃದಯಸ್ಪರ್ಶಿ ವೀಡಿಯೊವೊಂದು ವೈರಲ್ ಆಗಿದೆ. ಜರ್ಮನ್ ಶೆಫರ್ಡ್ (German Shepherd) ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಬಾಲ್ಕನಿಯಿಂದ ಹಾರಿರುವುದನ್ನು ಕಾಣಬಹುದು. ಈ ಘಟನೆ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಅಲ್ಲದೆ ಜನರು ನಾಯಿಯ ತ್ವರಿತ ಪ್ರತಿಕ್ರಿಯೆ ಮತ್ತು ರಕ್ಷಣಾತ್ಮಕ ಸ್ವಭಾವವನ್ನು ಶ್ಲಾಘಿಸುತ್ತಿದ್ದಾರೆ.

ಈ ವೈರಲ್ ವೀಡಿಯೊ ವಸತಿ ಪ್ರದೇಶದಲ್ಲಿ ನಡೆದಿರುವುದಾಗಿ ಎಂದು ವರದಿಯಾಗಿದೆ. ವೀಡಿಯೊದಲ್ಲಿ, ಜರ್ಮನ್ ಶೆಫರ್ಡ್ ನಾಯಿ ಮನೆಯ ಬಾಲ್ಕನಿಯಲ್ಲಿ ಶಾಂತವಾಗಿ ಕುಳಿತು ರಸ್ತೆಯಲ್ಲಿ ಓಡಾಡುವ ಜನರನ್ನು ನೋಡುತ್ತಿರುವುದನ್ನು ಕಾಣಬಹುದು. ನಂತರ ಕೆಲವು ಮಕ್ಕಳು ರಸ್ತೆ ದಾಟುತ್ತಿದ್ದು ಬೀದಿ ನಾಯಿ (Stray Dog) ಕೂಡ ಅವರ ಹಿಂದೆ ಓಡುತ್ತದೆ. ಇದನ್ನು ನೋಡಿದ ಜರ್ಮನ್ ಶೆಫರ್ಡ್ ಏನೂ ಯೋಚಿಸದೆ ಬಾಲ್ಕನಿಯಿಂದ ಹಾರಿ ಬೀದಿ ನಾಯಿಯ ಕಡೆಗೆ ಓಡುತ್ತದೆ. ಇದರಿಂದ ಹೆದರಿದ ಬೀದಿ ನಾಯಿ ಮಕ್ಕಳಿಂದ ದೂರ ಓಡಿ ಹೋಗುತ್ತದೆ.

@gharkekalesh ಹ್ಯಾಂಡಲ್‌ನಿಂದ ಈ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು ಶೀರ್ಷಿಕೆಯಲ್ಲಿ, ಋಷಿಕೇಶದಲ್ಲಿ ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಮತ್ತೊಂದು ನಾಯಿ 'Super Hero'ನಂತೆ ಹಾರಿದೆ ಎಂದು ಬರೆದಿದ್ದಾರೆ. ಜರ್ಮನ್ ಶೆಫರ್ಡ್ ನಾಯಿಯನ್ನು ನೆಟಿಜನ್‌ಗಳು ತೀವ್ರವಾಗಿ ಹೊಗಳುತ್ತಿದ್ದಾರೆ. ಕೆಲವರು ಪ್ರೀತಿಯಿಂದ 'ದೋಗೇಶ್ ಭಾಯ್' ಎಂದು ಕರೆಯುತ್ತಿದ್ದಾರೆ.

ದೇಶದಲ್ಲಿರುವ ಆಶ್ರಯ ಮನೆಗಳಿಗೆ ಬೀದಿ ನಾಯಿಗಳನ್ನು ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ವೀಡಿಯೊ ಕಾಣಿಸಿಕೊಂಡಿದೆ. ಜನರು, ವಿಶೇಷವಾಗಿ ಮಕ್ಕಳು, ರೇಬೀಸ್‌ನಂತಹ ಅಪಾಯಗಳಿಂದ ರಕ್ಷಿಸಲ್ಪಡುವಂತೆ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಸಂತಾನಹರಣ ಮಾಡಿ ಮತ್ತು ಆಶ್ರಯ ಮನೆಗಳಲ್ಲಿ ಇಡಲು ನ್ಯಾಯಾಲಯ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT