ಯುವತಿಯರ ಮಸ್ತ್ ಡ್ಯಾನ್ಸ್  
ದೇಶ

'Badi Mushkil' ಹಾಡಿಗೆ ಯುವತಿಯರ ಮಸ್ತ್ ಡ್ಯಾನ್ಸ್ : ವಿಡಿಯೋಗೆ 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆ, ಇದಕ್ಕೆ ಈತನೇ ಕಾರಣ!

ಇದು ನೆಟ್ಟಿಗರನ್ನು ಆಕರ್ಷಿಸಿದ್ದು, ಬಹುತೇಕ ನೆಟ್ಟಿಗರು ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್‌ನ ಸೂಪರ್ ಹಿಟ್ 'ಬಡಿ ಮುಷ್ಕಿಲ್‌' ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಅವರಿಂದ ಅಲ್ಲ. ಬದಲಾಗಿ ಶೋ ಕದ್ದ ಕ್ಯಾಮರಾ ಮ್ಯಾನ್ ನಿಂದಲೇ ಹೆಚ್ಚಿನ ವೈರಲ್ ಆಗಿದೆ.

ಹೌದು, ಯುವತಿಯರು ಹಾಡಿಗೆ ತಕ್ಕಂತೆ ಡ್ಯಾನ್ಸ್ ಮಾಡುತ್ತಿದ್ದರೆ ಅವರನ್ನು ಕ್ಯಾಮರಾ ಮ್ಯಾನ್ ಸೆರೆ ಹಿಡಿಯುತ್ತಿರುತ್ತಾನೆ. ಯುವತಿಯರು ಹೆಜ್ಜೆ ಹಾಕಿದ್ದಂತೆ ಆತನು ಕೂಡಾ ಹೆಜ್ಜೆ ಹಾಕುತ್ತಾನೆ. ಸ್ವಲ್ಪವೂ ಹೆಚ್ಚು ಕಡಿಮೆ ಆಗದಂತೆ ಥೇಟ್ ಅವರಂತೆಯೇ ಡ್ಯಾನ್ಸ್ ಮಾಡಿದ್ದಾನೆ.

ಇದು ನೆಟ್ಟಿಗರನ್ನು ಆಕರ್ಷಿಸಿದ್ದು, ಬಹುತೇಕ ನೆಟ್ಟಿಗರು ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಯುಜೊ ಫಿಲ್ಮ್‌ ಖಾತೆಯಿಂದ ಹಂಚಿಕೊಂಡಿರುವ ವೀಡಿಯೊ ಈಗಾಗಲೇ ಸುಮಾರು 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಯುವತಿಯರಿಗಿಂತ ಕ್ಯಾಮರಾ ಮ್ಯಾನ್ ಚೆನ್ನಾಗಿ ನೃತ್ಯ ಮಾಡಿರುವುದಾಗಿ ಬಹುತೇಕ ಮಂದಿ ಹೇಳಿದ್ದಾರೆ.

ಇನ್ನೂ ಕೆಲವರು ಇಡೀ ಡ್ಯಾನ್ಸ್ ಶೋ ಅನ್ನು ಕ್ಯಾಮರಾ ಮ್ಯಾನ್ ಕದ್ದಿರುವುದಾಗಿ ಹೇಳುತ್ತಿದ್ದಾರೆ. ಕ್ಯಾಮರಾ ಮ್ಯಾನ್ ಪ್ರದರ್ಶನ ಮತ್ತೊಂದು ಲೆವೆಲ್ ನಲ್ಲಿದ್ದು, ಯುವತಿಯರಿಂಗ ಚೆನ್ನಾಗಿದೆ ಎಂದು ಮತ್ತೋರ್ವರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕೊಪ್ಪಳದ ಗಂಗಾವತಿಯಲ್ಲಿ ಹರಿಯಿತು ನೆತ್ತರು: BJP ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಹತ್ಯೆ

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ

SCROLL FOR NEXT