ನವದೆಹಲಿ: ಭಾರತೀಯ ವಾಯುಪಡೆಗೆ 97 ಎಲ್‌ಸಿಎ ಮಾರ್ಕ್ 1ಎ ಫೈಟರ್ ಜೆಟ್‌ಗಳ ಖರೀದಿಸುವ ರೂ. 62,000 ಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ಸ್ವದೇಶಿ ನಿರ್ಮಿತ ಯುದ್ಧ ವಿಮಾನಗಳಿಗಾಗಿ 113 GE-404 ಇಂಜಿನ್ ಪೂರೈಸಲು ಅಮೆರಿಕಾದ GE ಸಂಸ್ಥೆಯೊಂದಿಗೆ ಸುಮಾರು $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುವ ಸನ್ನಿಹದಲ್ಲಿದೆ.
ಭಾರತೀಯ ವಾಯುಪಡೆಯಿಂದ ಆರ್ಡರ್ ಮಾಡಿದ ಆರಂಭಿಕ 83 LCA ಮಾರ್ಕ್ 1A ಫೈಟರ್ ಜೆಟ್‌ಗಳಿಗೆ 99 GE-404 ಇಂಜಿನ್ ಗಳಿಗಾಗಿ ಭಾರತೀಯ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಈಗಾಗಲೇ ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈಗ ಹೆಚ್ಚುವರಿಯಾಗಿ 113 ಇಂಜಿನ್ ಖರೀದಿಸಲಾಗುತ್ತಿದೆ. 97 LCAಗಳಿಗೆ ಅಮೆರಿಕದ GE ಸಂಸ್ಥೆಯಿಂದ 113 GE-404 ಇಂಜಿನ್ ಖರೀದಿಸಲು ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ.
ಈ ವರ್ಷದ ಸೆಪ್ಟೆಂಬರ್ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ರಕ್ಷಣಾ ಅಧಿಕಾರಿಗಳು ANI ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಒಪ್ಪಂದವು ಹೆಚ್ ಎಎಲ್ ಗೆ ನಿರಂತರವಾಗಿ 212 GE-404 ಇಂಜಿನ್ ಅಗತ್ಯ ಪೂರೈಸಲು ನೆರವಾಗಲಿದೆ.
2029-30 ರ ಅಂತ್ಯದ ವೇಳೆಗೆ ಮೊದಲ 83 ವಿಮಾನಗಳನ್ನು ಮತ್ತು 2033-34 ರ ವೇಳೆಗೆ ಮುಂದಿನ ಹಂತದ ವಿಮಾನಗಳನ್ನು ಪೂರೈಸಲು HAL ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಭಾರತ ಜೊತೆಗಿನ ತನ್ನ ಒಪ್ಪಂದದ ಅನ್ವಯ ಅಮೆರಿಕದ GE ಇನ್ನು ಮುಂದೆ ತಿಂಗಳಿಗೆ ಎರಡು ಇಂಜಿನ್ ಗಳನ್ನು ಪೂರೈಸುವ ನಿರೀಕ್ಷೆಯಿದೆ.