ಮದುವೆ (ಸಂಗ್ರಹ ಚಿತ್ರ) 
ದೇಶ

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಹುಡುಗರು ಮತ್ತು ಹುಡುಗಿಯರು ಓಡಿಹೋಗುತ್ತಾರೆ. ಪೋಷಕರು ನಂತರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುವ ಪ್ರಕರಣಗಳಿವೆ.

ಚಂಡೀಗಢ: ಪ್ರೀತಿ ನೆಪನೀಡಿ ತಂದೆತಾಯಿಗೆ ಹೇಳದೇ ಓಡಿ ಹೋಗಿ ಮದುವೆಯಾಗುವ ಮಕ್ಕಳ ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಬೇಕು ಎಂದು ಹರ್ಯಾಣ ಬಿಜೆಪಿ ಶಾಸಕರೊಬ್ಬರು ಆಗ್ರಹಿಸಿದ್ದಾರೆ.

ಹರಿಯಾಣದ ಸಫಿಡಾನ್ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕುಮಾರ್ ಗೌತಮ್ ಮಂಗಳವಾರ ಮದುವೆಗೆ ಮುನ್ನ ಪೋಷಕರ ಅನುಮತಿ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರಬೇಕು ಎಂದು ಕರೆ ನೀಡಿದ್ದಾರೆ. 'ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದು ಅಗತ್ಯವಾಗಿದೆ ಎಂದು ಹೇಳಿದರು.

ಹರಿಯಾಣ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಾಮ್ ಕುಮಾರ್ ಗೌತಮ್, 'ಹುಡುಗರು ಮತ್ತು ಹುಡುಗಿಯರು ಓಡಿಹೋಗುತ್ತಾರೆ. ಪೋಷಕರು ನಂತರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುವ ಪ್ರಕರಣಗಳಿವೆ. ಸರ್ಕಾರಕ್ಕೆ ನನ್ನ ವಿನಂತಿಯೆಂದರೆ ಮದುವೆಗೆ ಮುನ್ನ ಹುಡುಗರು ಮತ್ತು ಹುಡುಗಿಯರು ಪೋಷಕರ ಅನುಮತಿ ಕಡ್ಡಾಯವಾಗಿರುವ ಕಾನೂನನ್ನು ಮಾಡಬೇಕು" ಎಂದು ಹೇಳಿದರು.

ಇದೇ ವೇಳೆ ಭೂ ಸಂಗ್ರಹಣಾ ದರಗಳ ವಿಷಯವನ್ನು ಸಹ ಅವರು ಎತ್ತಿದರು. ಕೆಲವು ಸ್ಥಳಗಳಲ್ಲಿ ಈ ದರಗಳು ಮತ್ತು ಮಾರುಕಟ್ಟೆ ದರಗಳ ನಡುವೆ ದೊಡ್ಡ ಅಂತರವಿದೆ. ಎಲ್ಲಿ ದೊಡ್ಡ ಅಂತರವಿದೆಯೋ, ಅದನ್ನು ಸರಿಪಡಿಸಬೇಕು, ಅದು ಭ್ರಷ್ಟಾಚಾರವನ್ನು ತಡೆಯಲು ಸಹಾಯ ಮಾಡುತ್ತದೆ" ಎಂದು ಆಡಳಿತಾರೂಢ ಬಿಜೆಪಿ ಶಾಸಕ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ 'PPP' ಮಾದರಿಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು: ಸರ್ಕಾರದ ಪ್ರಸ್ತಾವನೆಗೆ ಶಿಕ್ಷಣ ತಜ್ಞರ ಆಕ್ಷೇಪ!

ಬೆಂಗಳೂರಿನ ಮೂಲಸೌಕರ್ಯ ಬಗ್ಗೆ ಟೀಕೆ: ನಾವು ಹೇಗಿದ್ವಿ, ಹೇಗಾದ್ವಿ? ಅನ್ನೋದನ್ನ ಮರೆತು ಮಾತಡ್ತಾರೆ; ಉದ್ಯಮಿ ಗಳಿಗೆ ಡಿಕೆಶಿ ಟಾಂಗ್!

ಬಿಜೆಪಿ ವಿರುದ್ಧ ‘ವೋಟ್ ಚೋರ್ ಗದ್ದಿ ಚೋಡ್ ’: ಪ್ರತಿ ಕ್ಷೇತ್ರದಲ್ಲಿ 2 ಲಕ್ಷ ಸಹಿ ಸಂಗ್ರಹಿಸಲು ಶಿವಕುಮಾರ್ ಟಾರ್ಗೆಟ್!

PAK vs SA: ಸ್ಪಾಟ್ ಫಿಕ್ಸಿಂಗ್ ನಿಂದ ಬ್ಯಾನ್ ಆಗಿದ್ದ ಆಟಗಾರನಿಗೆ ಮತ್ತೆ ಮಣೆ, 38ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಆಸಿಫ್ ಅಫ್ರಿದಿ ಪದಾರ್ಪಣೆ!

ಇಬ್ಬರು ಗಂಡು ಮಕ್ಕಳಿದ್ದರೂ 'ಸೋದರಳಿಯ'ನೊಂದಿಗೆ ಚಕ್ಕಂದ: ಪೊಲೀಸರನ್ನು ಬೆಚ್ಚಿ ಬೀಳಿಸಿದ ಮಹಿಳೆ, ಮಾಡಿದ್ದೇನು ಗೊತ್ತಾ?

SCROLL FOR NEXT