ಯಾತ್ರಿಕರು 
ದೇಶ

ಮಣಿಮಹೇಶ ಯಾತ್ರೆ: 10 ಯಾತ್ರಿಕರು ಸಾವು, ಎಂಟು ಮಂದಿ ನಾಪತ್ತೆ, 5,000 ಭಕ್ತರ ಸ್ಥಳಾಂತರ

ಭರ್ಮೋರ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸುಮಾರು 5,000 ಭಕ್ತರನ್ನು ಕಲ್ಸುಯಿನ್‌ನಿಂದ ನೂರ್ಪುರ್ ಮತ್ತು ಪಠಾಣ್‌ಕೋಟ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಚಂಡೀಗಢ: ಭಾರೀ ಮಳೆ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ ಸೋಮವಾರ ಸ್ಥಗಿತಗೊಂಡಿದ್ದ ಮಣಿಮಹೇಶ ಯಾತ್ರೆಯ ವೇಳೆ ಹತ್ತು ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಕಾಣೆಯಾಗಿದ್ದಾರೆ.

ಭರ್ಮೋರ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸುಮಾರು 5,000 ಭಕ್ತರನ್ನು ಕಲ್ಸುಯಿನ್‌ನಿಂದ ನೂರ್ಪುರ್ ಮತ್ತು ಪಠಾಣ್‌ಕೋಟ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಏತನ್ಮಧ್ಯೆ, ಪಾಂಗ್ ಅಣೆಕಟ್ಟಿನ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಿರುವುದರಿಂದ ಧರ್ಮಶಾಲಾ ಮತ್ತು ಮೆಕ್ಲಿಯೋಡ್‌ಗಂಜ್ ಅಪಾಯದಲ್ಲಿವೆ. ಭೂಕುಸಿತದಿಂದಾಗಿ ಕಿರಾತ್‌ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯೂ ಮತ್ತೆ ಸ್ಥಗಿತಗೊಂಡಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು, ಸ್ವಯಂಸೇವಕರು, ಎನ್‌ಸಿಸಿ ಕೆಡೆಟ್‌ಗಳು, ಸ್ಥಳೀಯ ನಿವಾಸಿಗಳು ಮತ್ತು ನಾಗರಿಕ ಅಧಿಕಾರಿಗಳನ್ನು ಒಳಗೊಂಡ ಏಳು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಕೇಂದ್ರದಿಂದ ಕಲ್ಸುಯಿನ್ ತಲುಪಲು ಸುಮಾರು 14 ಕಿ.ಮೀ. ಪಾದಯಾತ್ರೆ ಮಾಡಿದ್ದ ಭಕ್ತರನ್ನು ನಂತರ 39 ಬಸ್‌ಗಳು ಮತ್ತು 25 ಟ್ಯಾಕ್ಸಿಗಳ ಮೂಲಕ ಚಂಬಾ ಹಾಗೂ ನೂರ್ಪುರಕ್ಕೆ ಸ್ಥಳಾಂತರಿಸಲಾಯಿತು. ಉಳಿದ ಯಾತ್ರಿಕರನ್ನು ಸ್ಥಳಾಂತರಿಸಲು ಅಧಿಕಾರಿಗಳು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಇನ್ನೂ 40 ಬಸ್‌ಗಳನ್ನು ಕೋರಲಾಗಿದೆ.

ಸ್ಥಳಾಂತರಗೊಂಡವರಿಗೆ ಸಹಾಯ ಮಾಡಲು, ಚಂಬಾದಲ್ಲಿ ಆಹಾರ ಮತ್ತು ಆಶ್ರಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ, ಕಲ್ಸುಯಿ, ಸಿಕ್ಕಿಬಿದ್ದ ಭಕ್ತರಿಗೆ ಊಟ ಒದಗಿಸಲು ಧಾರ್ವಾಲಾ ಮತ್ತು ದಖೋಗ್‌ಗಳಲ್ಲಿ ಸಮುದಾಯ ಅಡುಗೆಮನೆಗಳನ್ನು(ಲಂಗಾರ್‌ಗಳು) ಸ್ಥಾಪಿಸಲಾಗಿದೆ.

ಕಲ್ಸುಯಿ-ರಖ್ ರಸ್ತೆಯಿಂದ ಅವಶೇಷಗಳನ್ನು ತೆರವುಗೊಳಿಸಲಾಗಿದ್ದರೂ, ಭಾರೀ ವಾಹನಗಳು ಹಾದುಹೋಗಲು ಸಾಧ್ಯವಾಗುತ್ತಿಲ್ಲ.

ಭಾರೀ ಮಳೆ ಮತ್ತು ನಂತರದ ಹಠಾತ್ ಪ್ರವಾಹದಿಂದಾಗಿ, ರಸ್ತೆಗಳು ಕೊಚ್ಚಿಹೋಗಿ, ಸಂಪರ್ಕ ಕಡಿತಗೊಂಡಿದ್ದು, ಮಣಿಮಹೇಶ ಯಾತ್ರೆಗೆ ಹೋಗುವ ದಾರಿಯಲ್ಲಿ ಹತ್ತು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಕಾಣೆಯಾಗಿದ್ದಾರೆ.

ಪಾಂಗ್ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆಯಾದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಭರ್ಮೌರ್, ಮಣಿಮಹೇಶ ಮತ್ತು ಚಂಬಾ ಜಿಲ್ಲೆಯ ಇತರ ಪ್ರದೇಶಗಳು ಹಾಗೂ ಕಾಂಗ್ರಾ ಜಿಲ್ಲೆಯ ಫತೇಪುರ್ ಮತ್ತು ಮಾಂಡ್‌ ಸೇರಿದಂತೆ ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಆದಾಗ್ಯೂ, ಪ್ರತಿಕೂಲ ಹವಾಮಾನ ಪರಿಸ್ಥಿತಿ ಅವರ ಹೆಲಿಕಾಪ್ಟರ್ ಭರ್ಮೌರ್‌ನಲ್ಲಿ ಲ್ಯಾಂಡ್ ಆಗದಂತೆ ತಡೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Amritsar: ಉಗ್ರರ ದಾಳಿ ಸಂಚು ವಿಫಲ; ISI ಜೊತೆಗೆ ನಂಟು ಹೊಂದಿದ್ದ ಇಬ್ಬರ ಬಂಧನ; ರಾಕೆಟ್ ಚಾಲಿತ ಗ್ರೆನೇಡ್ ವಶಕ್ಕೆ!

ವ್ಲಾಡಿಮಿರ್ ಕ್ರಾಮ್ನಿಕ್ ವಂಚನೆ ಆರೋಪ: ಗ್ರ್ಯಾಂಡ್ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಆತ್ಮಹತ್ಯೆ; ನಿಹಾಲ್ ಸರಿನ್ ಆಕ್ರೋಶ!

ಮಾನ್ಯ ವೀಸಾ ಹೊಂದಿದ್ದರೂ ಹಿಂದಿ ವಿದ್ವಾಂಸೆ ಫ್ರಾನ್ಸೆಸ್ಕಾ ಓರ್ಸಿನಿಗೆ ಭಾರತ ಪ್ರವೇಶಕ್ಕೆ ನಿರಾಕರಣೆ!

ಸೊಸೆ ಜೊತೆ ತಂದೆ ಅಕ್ರಮ ಸಂಬಂಧ: ಮಗನ ಕೊಲೆ ಆರೋಪ; ತಂದೆ ಮಾಜಿ DGP ಮುಸ್ತಫಾ, ತಾಯಿ, ಪತ್ನಿ ವಿರುದ್ಧ FIR!

India 'Proxy war': ಪಾಕಿಸ್ತಾನದ ಆರೋಪಕ್ಕೆ ಅಪ್ಘಾನಿಸ್ತಾನ ತಿರುಗೇಟು! ಹೇಳಿದ್ದೇನು? Video

SCROLL FOR NEXT