ಶಶಿ ತರೂರ್ - ಕೆ ಮರಳೀಧರನ್ 
ದೇಶ

'ಅವರು ಯಾರು, ಪಕ್ಷದಲ್ಲಿ ಅವರ ಸ್ಥಾನವೇನು?': ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ವಿರುದ್ಧ ಶಶಿ ತರೂರ್ ವಾಗ್ದಾಳಿ

ಮೊದಲು ದೇಶ ಮುಖ್ಯ ಮತ್ತು ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳು ಎಂದು ತರೂರ್ ಹೇಳಿದ ಒಂದು ದಿನದ ನಂತರ ಮುರಳೀಧರನ್ ಅವರ ಪ್ರತಿಕ್ರಿಯೆ ಬಂದಿತ್ತು.

ನವದೆಹಲಿ: ಇತ್ತೀಚೆಗಷ್ಟೇ ತಮ್ಮ ವಿರುದ್ಧ ಕಟುವಾಗಿ ಟೀಕಿಸಿದ್ದ ಕೇರಳ ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ವಿರುದ್ಧ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದು, ಇಂತಹ ಹೇಳಿಕೆಗಳನ್ನು ನೀಡುವ ಜನರು ಯಾರು ಮತ್ತು ಅವರ ಪಕ್ಷದಲ್ಲಿ ಯಾವ ಸ್ಥಾನವನ್ನು ಹೊಂದಿದ್ದಾರೆ ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.

ಮುರಳೀಧರನ್ ಭಾನುವಾರ ಮತ್ತೆ ತರೂರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಾಯಿಸುವವರೆಗೆ ರಾಜ್ಯ ರಾಜಧಾನಿಯಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಅವರನ್ನು (ಶಶಿ ತರೂರ್) ಆಹ್ವಾನಿಸುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರೂ ಆಗಿರುವ ಶಶಿ ತರೂರ್ ಅವರನ್ನು ಇನ್ಮುಂದೆ 'ನಮ್ಮಲ್ಲಿ ಒಬ್ಬರು' ಎಂದು ಸಹ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಹೇಳಿಕೆಗಳ ಬಗ್ಗೆ ಕೇಳಿದಾಗ ಸುದ್ದಿಗಾರರಿಗೆ ಉತ್ತರಿಸಿದ ತರೂರ್, 'ಮೊದಲನೆಯದಾಗಿ, ಇದನ್ನು ಹೇಳಲು ಅವರೂ ಒಂದು ಆಧಾರವನ್ನು ಹೊಂದಿರಬೇಕು. ಇದನ್ನೆಲ್ಲ ಹೇಳಲು ಅವರು ಯಾರು? ಪಕ್ಷದಲ್ಲಿ ಅವರ ಸ್ಥಾನವೇನು? ಎಂಬುದನ್ನು ನಾನು ತಿಳಿಯ ಬಯಸುತ್ತೇನೆ' ಎಂದು ಹೇಳಿದರು.

'ತರೂರ್ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವವರೆಗೆ, ತಿರುವನಂತಪುರದಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನಾವು ಅವರನ್ನು ಆಹ್ವಾನಿಸುವುದಿಲ್ಲ. ಅವರು ನಮ್ಮೊಂದಿಗಿಲ್ಲ. ಆದ್ದರಿಂದ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸುವ ಪ್ರಶ್ನೆಯೇ ಬರುವುದಿಲ್ಲ' ಎಂದು ಮುರಳೀಧರನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.

ಮೊದಲು ದೇಶ ಮುಖ್ಯ ಮತ್ತು ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳು ಎಂದು ತರೂರ್ ಹೇಳಿದ ಒಂದು ದಿನದ ನಂತರ ಮುರಳೀಧರನ್ ಅವರ ಪ್ರತಿಕ್ರಿಯೆ ಬಂದಿತ್ತು.

'ದೇಶ ಮತ್ತು ಅದರ ಗಡಿಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸುವ ತಮ್ಮ ನಿಲುವಿನಿಂದಾಗಿ ಬಹಳಷ್ಟು ಜನರು ನನ್ನನ್ನು ತೀವ್ರವಾಗಿ ಟೀಕಿಸಿದ್ದಾರೆ. ಆದರೆ, ನಾನು ನನ್ನ ನಿಲುವಿಗೆ ಬದ್ಧನಾಗಿರುತ್ತೇನೆ. ಏಕೆಂದರೆ, ಇದು ದೇಶಕ್ಕೆ ಸರಿಯಾದ ವಿಷಯ ಎಂದು ನಾನು ನಂಬುತ್ತೇನೆ ಎಂದು ಶಶಿ ತರೂರ್ ಶನಿವಾರ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಇತರ ಪಕ್ಷಗಳೊಂದಿಗೆ ಸಹಕರಿಸಲು ಕರೆ ನೀಡಿದಾಗ, ನಮ್ಮ ಪಕ್ಷ ಕೂಡ ಅದನ್ನು ವಿಶ್ವಾಸದ್ರೋಹವೆಂದು ಭಾವಿಸುತ್ತವೆ ಮತ್ತು ಅದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ತರೂರ್ ಹೇಳಿದ್ದರು.

ಮುಖ್ಯಮಂತ್ರಿ ಹುದ್ದೆಗೆ ಯುಡಿಎಫ್‌ನ ಅತ್ಯಂತ ಆದ್ಯತೆಯ ಆಯ್ಕೆ ಎಂದು ಸೂಚಿಸುವ ಸಮೀಕ್ಷೆಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಮುರಳೀಧರನ್ ಈ ಹಿಂದೆ ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. 'ಮೊದಲು ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ನಿರ್ಧರಿಸಬೇಕು' ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

SCROLL FOR NEXT