ಮಹೇಶ್ ಜಿರಾವಾಲಾ 
ದೇಶ

Air India plane crash: ಗುಜರಾತಿ ನಿರ್ದೇಶಕ ಮಹೇಶ್ ಜಿರಾವಾಲಾ ಸಾವು ದೃಢ

ಡಿಎನ್‌ಎ ಪರೀಕ್ಷೆಯ ಫಲಿತಾಂಶ, ಮಹೇಶ್ ಅವರ ಕುಟುಂಬವು ಒದಗಿಸಿದ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತಿದೆ.

ಅಹಮದಾಬಾದ್‌: ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನದ ಭೀಕರ ಅಪಘಾತದ ಕೆಲವು ದಿನಗಳ ನಂತರ ಗುಜರಾತಿ ಚಲನಚಿತ್ರ ನಿರ್ಮಾಪಕ ಮಹೇಶ್ ಕಲವಾಡಿಯಾ(ಮಹೇಶ್ ಜಿರಾವಾಲಾ) ಅವರ ಸಾವು ಅಧಿಕೃತವಾಗಿ ದೃಢಪಟ್ಟಿದೆ.

ಡಿಎನ್‌ಎ ಪರೀಕ್ಷೆಯ ಫಲಿತಾಂಶ, ಮಹೇಶ್ ಅವರ ಕುಟುಂಬವು ಒದಗಿಸಿದ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತಿದೆ. ವಿಮಾನದಲ್ಲಿ ಪತನದಲ್ಲಿ ಮೃತಪಟ್ಟವರಲ್ಲಿ ಅವರೂ ಒಬ್ಬರು ಎಂದು ಖಚಿತಪಡಿಸಲಾಗಿದೆ.

ಏರ್ ಇಂಡಿಯಾ ವಿಮಾನ ಪತನದ ನಂತರ ಮಹೇಶ್ ಅವರು ನಾಪತ್ತೆಯಾಗಿದ್ದು, ಅವರ ಕುಟುಂಬವು ಡಿಎನ್‌ಎ ಮಾದರಿಗಳನ್ನು ನೀಡಿತ್ತು ಮತ್ತು ಅವರ ಮೊಬೈಲ್ ಫೋನ್ ನೆಟ್ ವರ್ಕ್ ಅಪಘಾತ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿ ಕೊನೆಯದಾಗಿ ಪತ್ತೆಯಾಗಿತ್ತು.

ಜೂನ್ 12 ರಂದು ಮಧ್ಯಾಹ್ನ 1:39 ಕ್ಕೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 242 ಜನರಲ್ಲಿ 241 ಜನ ಮತ್ತು ಕೆಳಗಡೆ ಇದ್ದ 29 ಜನ ಸಾವನ್ನಪ್ಪಿದರು.

ನರೋಡಾ ನಿವಾಸಿ, ಸಂಗೀತ ಆಲ್ಬಮ್‌ಗಳ ನಿರ್ದೇಶಕಾರಿಗಿದ್ದ ಮಹೇಶ್ ಕಲಾವಾಡಿಯಾ ಅವರು ಅಂದು ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರನ್ನಾದರೂ ಭೇಟಿಯಾಗಲು ಹೋಗಿರಬಹುದು ಎಂದು ಅವರ ಪತ್ನಿ ಹೇತಲ್ ಹೇಳಿದ್ದಾರೆ.

"ನನ್ನ ಪತಿ ಮಧ್ಯಾಹ್ನ 1:14 ಕ್ಕೆ ನನಗೆ ಕರೆ ಮಾಡಿ ತಮ್ಮ ಸಭೆ ಮುಗಿದಿದೆ ಮತ್ತು ಮನೆಗೆ ಬರುತ್ತಿರುವುದಾಗಿ ಹೇಳಿದ್ದರು. ಆದರೆ, ಅವರು ಹಿಂತಿರುಗದಿದ್ದಾಗ, ನಾನು ಅವರ ಫೋನ್‌ಗೆ ಕರೆ ಮಾಡಿದೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರ ಮೊಬೈಲ್ ಫೋನ್‌ನ ಕೊನೆಯ ಸ್ಥಳವು ಅಪಘಾತದ ಸ್ಥಳದಿಂದ 700 ಮೀಟರ್ ದೂರದಲ್ಲಿ ತೋರಿಸಿದೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT