ಸಾಂಕೇತಿಕ ಚಿತ್ರ 
ದೇಶ

ಈಗ, ಬಿಹಾರದಲ್ಲಿ ಪ್ರಿಯಕರನ ಸಹಾಯದಿಂದ ಪತಿ ಹತ್ಯೆ ಮಾಡಿದ ಪತ್ನಿ, ಬಂಧನ

"ಜೂನ್ 25 ರಂದು ಮಹಿಳೆಯನ್ನು ಬಂಧಿಸಲಾಗಿದೆ ಮತ್ತು ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಸಂಚನ್ನು ಮಹಿಳೆ ಮತ್ತು ಅವಳ ಪ್ರೇಮಿ ಇಬ್ಬರೂ ಕಾರ್ಯಗತಗೊಳಿಸಿದ್ದಾರೆ"

ಔರಂಗಾಬಾದ್: ಮೇಘಾಲಯದ ಹನಿಮೂನ್ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಬಿಹಾರದ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜೂನ್ 25 ರಂದು ಬಂದೇಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೌನಾ ಗ್ರಾಮದ ಹೊಲದಲ್ಲಿ ಪತಿ ಬಿಕ್ಕುವಿನ ಶವ ಪತ್ತೆಯಾದ ನಂತರ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ದೌದ್‌ನಗರ(ಔರಂಗಾಬಾದ್) ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(SDPO) ಕುಮಾರ್ ರಿಷಿರಾಜ್, "ಜೂನ್ 21 ರಂದು ಪತ್ತೆಯಾಗಿರುವ ಶವದಲ್ಲಿ ಗಾಯದ ಗುರುತುಗಳಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆ ಮತ್ತು ಮೃತ ಕುಟುಂಬ ಸದಸ್ಯರ ಹೇಳಿಕೆಗಳ ಪ್ರಕಾರ ಬಿಕ್ಕುವನ್ನು ಕೊಲೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

ಮೃತನ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ತನಿಖಾ ತಂಡಕ್ಕೆ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

"ಜೂನ್ 25 ರಂದು ಮಹಿಳೆಯನ್ನು ಬಂಧಿಸಲಾಗಿದೆ ಮತ್ತು ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಸಂಚನ್ನು ಮಹಿಳೆ ಮತ್ತು ಅವಳ ಪ್ರೇಮಿ ಇಬ್ಬರೂ ಕಾರ್ಯಗತಗೊಳಿಸಿದ್ದಾರೆ" ಎಂದು SDPO ತಿಳಿಸಿದ್ದಾರೆ.

ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆ ಪ್ರಿಯಕರನನ್ನು ಬಂಧಿಸಲು ಶೋಧ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video