ಅಗರ್ತಲಾ:ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯಲ್ಲಿ ಬಾಂಗ್ಲಾದೇಶಿ ಸ್ಮಗ್ಲರ್ ನನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿವೆ. ಅಂತಾರಾಷ್ಟ್ರೀಯ ಗಡಿಯ ಎರಡೂ ಕಡೆಯಿಂದ ಕಳ್ಳಸಾಗಾಣಿಕೆದಾರರ ಗುಂಪು ದಾಳಿ ಮಾಡಿದ ನಂತರ ಬಿಎಸ್‌ಎಫ್ ಗುಂಡಿಕ್ಕಿ ಕೊಂದಿದೆ ಎಂದು ಪಡೆ ಶನಿವಾರ ತಿಳಿಸಿದೆ.
ದಾಳಿ ವೇಳೆ BSF ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. 20 ರಿಂದ 25 ಬಾಂಗ್ಲಾದೇಶಿ ದುಷ್ಕರ್ಮಿಗಳ ಗುಂಪು ಕಲಾಂಚೌರಾ ಪೊಲೀಸ್ ಠಾಣೆ ವ್ಯಾಪ್ತಿಯ ಪುತಿಯಾದಲ್ಲಿ ಭಾರತೀಯ ಪ್ರದೇಶವನ್ನು ಪ್ರವೇಶಿಸಿದ್ದು, ಶುಕ್ರವಾರ ಸಂಜೆ ತಡರಾತ್ರಿ ಹಲವಾರು ಭಾರತೀಯ ಸಹಚರರನ್ನು ಭೇಟಿ ಮಾಡಿದೆ.
ಗಡಿ ಭದ್ರತಾ ಪಡೆ ಅವರಿಗೆ ಪ್ರತಿರೋಧ ತೋರುತ್ತಿದ್ದಂತೆಯೇ ಅವರ ಮೇಲೆ ಕಳ್ಳಸಾಗಣೆದಾರರು ದಾಳಿ ಮಾಡಿದ್ದಾರೆ. ಅವರಲ್ಲಿ ಒಬ್ಬರು ಗಾಯಗೊಂಡಿರುವುದಾಗಿ BSF ತಿಳಿಸಿದೆ.
ಕಳ್ಳಸಾಗಣೆದಾರರು ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ಮತ್ತೊಮ್ಮೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದಾಗ, ಸ್ವಯಂ ರಕ್ಷಣೆಗಾಗಿ ಯೋಧರೊಬ್ಬರು ಬಂದೂಕಿನಿಂದ ಒಂದು ಸುತ್ತಿನ ಗುಂಡು ಹಾರಿಸಿದ್ದಾಗ ಓರ್ವ ಕಳ್ಳಸಾಗಣೆದಾರ ಗಾಯಗೊಂಡಿದ್ದು, ಅವರನ್ನು ಬಿಶಾಲ್‌ಗಢ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವನ್ನಪ್ಪಿದ್ದಾನೆ.
ಕಳ್ಳಸಾಗಣೆದಾರನ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ದಾಳಿಯಲ್ಲಿ ಗಾಯಗೊಂಡಿರುವ ಜವಾನ್ ಕೂಡ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು BSF ಹೇಳಿದೆ.