ಶ್ರೀನಗರದ ಲಾಲ್ ಚೌಕ 
ದೇಶ

ಭಾರತ-ಪಾಕ್ ಕದನ ವಿರಾಮ: ಜಮ್ಮು-ಕಾಶ್ಮೀರ ಸಹಜ ಸ್ಥಿತಿಯತ್ತ; ಸ್ಥಳೀಯ ನಿವಾಸಿಗಳು ಹೇಳಿದ್ದು ಏನು?

ನಿನ್ನೆ ಸಂಜೆ ಭಾರೀ ಸ್ಫೋಟಗಳು ಕೇಳಿಬಂದವು, ಬಹುಶಃ ಡ್ರೋನ್‌ಗಳು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಿದ್ದು, ಜನರಲ್ಲಿ ಭಯ ಕಾಡುತಿತ್ತು. ಕಳೆದ ರಾತ್ರಿ ಶಾಂತಯುತವಾಗಿತ್ತು.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜನರು ಭಾನುವಾರ ಬೆಳಗ್ಗೆ ಶಾಂತಯುತವಾಗಿ ಎಚ್ಚರಗೊಂಡರು. ಹಿಂದಿನ ದಿನದಂತೆ ಭಾರೀ ಸ್ಪೋಟಗಳು, ಸೈರನ್ ಗಳು ಮತ್ತು ಸ್ಫೋಟಗಳ ಶಬ್ದ ಅವರನ್ನು ಪೀಡಿಸಲಿಲ್ಲ. ಕದನ ವಿರಾಮ ಉಲ್ಲಂಘನೆ ಅಥವಾ ಡ್ರೋನ್ ದೃಶ್ಯಗಳ ಬಗ್ಗೆ ಯಾವುದೇ ಹೊಸ ವರದಿಗಳಿಲ್ಲದೆ ಸಹಜ ಪರಿಸ್ಥಿತಿ ಕಂಡುಬಂದಿದೆ.

ಮಾರುಕಟ್ಟೆಯಲ್ಲಿ ಗರಿಗೆದರಿದ ಚಟುವಟಿಕೆ:

ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿನ ಮಾರುಕಟ್ಟೆಗಳು ಮತ್ತೆ ಚಟುವಟಿಕೆಯಿಂದ ಕೂಡಿದ್ದವು, ಜನರು ಡ್ರೋನ್ ದಾಳಿಯ ಭಯವಿಲ್ಲದೆ ಶಾಪಿಂಗ್ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

"ನಿನ್ನೆ ಸಂಜೆ ಶ್ರೀನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಸ್ಫೋಟದ ನಂತರ ತಕ್ಷಣವೇ ಕತ್ತಲೆಯಾದ ಕಾರಣ ನನ್ನ ಮಕ್ಕಳು ಭಯಭೀತರಾಗಿದ್ದರು" ಇವೆಲ್ಲಾ ಸಾಮಾನ್ಯ ಎಂದು ನನ್ನ ಮಕ್ಕಳಿಗೆ ಮನವರಿಕೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಶ್ರೀನಗರದ ಹೊರವಲಯದ ನಿವಾಸಿ ಮುಷ್ತಾಕ್ ಅಹ್ಮದ್ ಹೇಳಿದರು.

ನಿನ್ನೆ ಸಂಜೆ ಭಾರೀ ಸ್ಫೋಟಗಳು ಕೇಳಿಬಂದವು, ಬಹುಶಃ ಡ್ರೋನ್‌ಗಳು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಿದ್ದು, ಜನರಲ್ಲಿ ಭಯ ಕಾಡುತಿತ್ತು. ಕಳೆದ ರಾತ್ರಿ ಶಾಂತಯುತವಾಗಿತ್ತು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಇದ್ದು, ಉಭಯ ರಾಷ್ಟ್ರಗಳು ತಮ್ಮ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಶ್ರೀನಗರ ನಿವಾಸಿ ಮೆಹರಾಜ್-ಉದ್-ದಿನ್ ಹೇಳಿದ್ದಾರೆ.

ಕದನ ವಿರಾಮಕ್ಕೆ ಕಣಿವೆ ಜನರ ಸ್ವಾಗತ:

ಜಮ್ಮು ಮತ್ತು ಕಾಶ್ಮೀರದ ಜನರು ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಶಾಂತಿ ನೆಲೆಸಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಯುದ್ಧವು ಎಂದಿಗೂ ಪರಿಹಾರವಲ್ಲ, ಮತ್ತು ಯಾರೂ ಶಾಂತಿಯನ್ನು ಇಷ್ಟಪಡುವುದಿಲ್ಲ ಎಂದು ಉರಿಯ ಗಡಿ ಪ್ರದೇಶದ ನಿವಾಸಿ ಸೈಯದ್ ಮುಸ್ತಫಾ ಹೇಳಿದರು.

ಉರಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಲಾರಂಭಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೂಲಸೌಕರ್ಯವನ್ನು ಗುರಿಯಾಗಿಸಲು ಭಾರತ ಆಪರೇಷನ್ ಸಿಂಧೂರ್ ಪ್ರಾರಂಭಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡಿತ್ತು. ಬಳಿಕ ಉರಿ ಪಾಕ್ ಸೈನಿಕರ ಶೆಲ್ ದಾಳಿಗೆ ಹೆಚ್ಚು ಹಾನಿಯಾಗಿತ್ತು.

ಕಳೆದ ಐದು ದಿನಗಳಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿ:

ಕಳೆದ ಐದು ದಿನಗಳಲ್ಲಿ ಪಾಕಿಸ್ತಾನಿ ಸೈನಿಕರ ದಾಳಿಯಲ್ಲಿ 100 ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ. ಕಳೆದ ರಾತ್ರಿ ಯಾವುದೇ ಶೆಲ್ ದಾಳಿ ನಡೆಯಲಿಲ್ಲ ಎಂದು ಉರಿಯ ಪರನ್‌ಪೀಲ್ ಗ್ರಾಮದ ನಿವಾಸಿ ಮುಸ್ತಫಾ ಹೇಳಿದರು.

ನಿನ್ನೆ ಬೆಳಿಗ್ಗೆ ಶೆಲ್‌ಗಳು ಬಿದ್ದಿವೆ. ಗ್ರಾಮದಲ್ಲಿರುವ ಮುಸ್ತಫಾ ಅವರ ಸಹೋದರಿಯ ಎರಡು ಅಂತಸ್ತಿನ ಕಾಂಕ್ರೀಟ್ ಮನೆ ನಿನ್ನೆ ಪಾಕಿಸ್ತಾನಿ ಸೈನಿಕರ ಶೆಲ್ ದಾಳಿಯಲ್ಲಿ ಹಾನಿಯಾಗಿದೆ. ಪ್ರಮುಖ ಉರಿ ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆಯಲಾರಂಭಿಸಿವೆ. ಪಾಕಿಸ್ತಾನಿ ಸೈನಿಕರ ನಿರಂತರ ಶೆಲ್ ದಾಳಿಯಿಂದಾಗಿ ಉರಿ ಮಾರುಕಟ್ಟೆಯನ್ನು ಕಳೆದ ಕೆಲವು ದಿನಗಳಿಂದ ಮುಚ್ಚಲಾಗಿತ್ತು ಮತ್ತು ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಈಗ ಗಡಿ ಕದನ ವಿರಾಮದಿಂದ ಸಹಜ ಪರಿಸ್ಥಿತಿಯಿದೆ. ಅಂಗಡಿಗಳು ತೆರೆದಿದ್ದು, ಜನರು ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ ಎಂದು ಉರಿ ಪಟ್ಟಣದ ಅಬ್ದುಲ್ ಕಯೂಮ್ ಗನೈ ಹೇಳಿದರು.

ಬೆರಳೆಣಿಕೆಯಷ್ಟು ಜನರು ಮಾತ್ರ ಉರಿಯಲ್ಲಿ ಉಳಿದುಕೊಂಡಿದ್ದಾರೆ ಮತ್ತು ಸುಮಾರು 10,000 ಜನರಿರುವ ಗಡಿ ಪ್ರದೇಶವು ನಿರ್ಜನವಾಗಿದೆ. "ಈಗ ಉರಿ ಮಾರುಕಟ್ಟೆಯಲ್ಲಿ ಜನರ ಗದ್ದಲವಿದೆ. ಏಕೆಂದರೆ ಜನರು ನಿಧಾನವಾಗಿ ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸುತ್ತಾರೆ" ಎಂದು ಅವರು ಹೇಳಿದರು.

ಪೊಂಚ್, ರಜೌರಿಯಲ್ಲಿ ಯಾವುದೇ ಶೆಲ್ ದಾಳಿ ನಡೆದಿಲ್ಲ: ಪೂಂಚ್ ಮತ್ತು ರಾಜೌರಿಯ ಗಡಿ ಜಿಲ್ಲೆಗಳಲ್ಲಿ ಕಳೆದ ರಾತ್ರಿ ಪಾಕಿಸ್ತಾನದ ಕಡೆಯಿಂದ ಯಾವುದೇ ಶೆಲ್ ದಾಳಿ ನಡೆದಿಲ್ಲ ಮತ್ತು ಸುಮಾರು ಒಂದು ವಾರದ ನಂತರ ಅವರು ಶಾಂತಿಯುತವಾಗಿ ರಾತ್ರಿಯನ್ನು ಕಳೆದಿದ್ದಾರೆ. ಕದನ ವಿರಾಮ ಜಾರಿಯಾಗಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವು ಎಂದು ಪೂಂಚ್ ಪಟ್ಟಣದ ನಿವಾಸಿ ಅಬ್ದುಲ್ ಅಹದ್ ಹೇಳಿದರು.

ಗಡಿಯಲ್ಲಿ ಕನಿಷ್ಠ 24 ಜನರ ಸಾವು:

ಪೂಂಚ್ ಮತ್ತು ರಜೌರಿ ಜಿಲ್ಲೆಗಳು ಪಾಕಿಸ್ತಾನಿ ಸೈನಿಕರ ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾಗಿದ್ದವು ಮತ್ತು ನಿನ್ನೆಯಷ್ಟೇ ಪಾಕಿಸ್ತಾನಿ ಸೈನಿಕರ ಶೆಲ್ ದಾಳಿಯಲ್ಲಿ ಸರ್ಕಾರಿ ಅಧಿಕಾರಿ, ಸೇನಾ ಜೆಸಿಒ ಮತ್ತು ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಭಾರತವು "ಆಪರೇಷನ್ ಸಿಂದೂರ್" ಅನ್ನು ಪ್ರಾರಂಭಿಸಿದಾಗಿನಿಂದ J&K ನಲ್ಲಿನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನಿ ಪಡೆಗಳ ಮಾರ್ಟರ್ ಮತ್ತು ಫಿರಂಗಿ ಶೆಲ್ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT