ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Madhya Pradesh: ಎಕ್ಸ್ ಪ್ರೆಸ್ ವೇನಲ್ಲಿ ಮಹಿಳೆಯೊಂದಿಗೆ ರಾಜಕಾರಣಿ ಅಶ್ಲೀಲ ವರ್ತನೆ; ವಿಡಿಯೋ ವೈರಲ್

ಅಂದಹಾಗೆ, ಈ ವಿಡಿಯೋದಲ್ಲಿರುವ ರಾಜಕಾರಣಿ ಹೆಸರು ಮನೋಹರಲಾಲ್ ಧಕಡ್. ಅವರ ಪತ್ನಿ ಬಿಜೆಪಿ ಬೆಂಬಲಿತ ರಾಜಕಾರಣಿಯಾಗಿದ್ದಾರೆ.

Dhakad
Nagaraja AB
Updated On : 25 May 2025, 9:29 am

ಮಂದಸೌರ್: ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ರಾಜಕಾರಣಿಯೊಬ್ಬರು ಎಕ್ಸ್ ಪ್ರೆಸ್ ವೇನಲ್ಲಿ ಸಾರ್ವಜನಿಕವಾಗಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ಈ ವಿಡಿಯೋದಲ್ಲಿರುವ ರಾಜಕಾರಣಿ ಹೆಸರು ಮನೋಹರಲಾಲ್ ಧಕಡ್. ಅವರ ಪತ್ನಿ ಬಿಜೆಪಿ ಬೆಂಬಲಿತ ರಾಜಕಾರಣಿಯಾಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಬಿಜೆಪಿ ಅವರಿಂದ ಅಂತರ ಕಾಯ್ದುಕೊಂಡಿದೆ.

ಮೇ 13 ರಂದು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನ ಹೈ-ಸೆಕ್ಯುರಿಟಿ ಕಾರಿಡಾರ್‌ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಸಿಸಿವಿಟಿ ಕ್ಯಾಮೆರಾಗಳು ಸಂಪೂರ್ಣ ಕೃತ್ಯವನ್ನು ಸೆರೆಹಿಡಿದಿವೆ. ಮನೋಹರಲಾಲ್ ಧಕಡ್ ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲಿ ಮಹಿಳೆಯೊಂದಿಗೆ ಲೈಂಗಿಕವಾಗಿ ಅಶ್ಲೀಲವಾಗಿ ವರ್ತಿಸುತ್ತಿರುವುದು ವಿಡಿಯೋದಲ್ಲಿದೆ.

Advertisement

Advertisement

ವೀಡಿಯೊದಲ್ಲಿ ಕಂಡುಬರುವ ಬಿಳಿ ಕಾರು - ಧಕಡ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ವೈರಲ್ ಆದ ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296, 285, ಮತ್ತು 3(5) ಅಡಿಯಲ್ಲಿ ಧಕಡ್ ಮತ್ತು ಸಹ-ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Also Read

ಪಹಲ್ಗಾಮ್ ದಾಳಿಯ ಮೃತರ ವಿಧವೆಯರು ಉಗ್ರರಲ್ಲಿ ಕೈಮುಗಿದು ಬೇಡುವ ಬದಲು ಪ್ರತಿದಾಳಿ ಮಾಡಬೇಕಿತ್ತು: ಬಿಜೆಪಿ ಸಂಸದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement