ಅಪರಾಧ online desk
ದೇಶ

ಪರಸ್ಪರ ಬಡಿದಾಡಿಕೊಂಡು ಸತ್ತ ದಂಪತಿ: ದಿಯೋಘರ್ ನಲ್ಲಿ ಭೀಭತ್ಸ ಘಟನೆ

ಆದಾಗ್ಯೂ, ಸಾವಿನ ಹಿಂದಿನ ನಿಜವಾದ ಕಾರಣವನ್ನು ಸರಿಯಾದ ತನಿಖೆಯ ನಂತರವೇ ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ನವದೆಹಲಿ: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಬುಧವಾರ ದಂಪತಿಗಳ ನಡುವೆ ವೈವಾಹಿಕ ಕಲಹಕ್ಕೆ ಸಂಬಂಧಿಸಿದ ಘರ್ಷಣೆ ಇಬ್ಬರ ಸಾವಿನಲ್ಲಿ ಕೊನೆಗೊಂಡಿದೆ.

ದೇವಘರ್ ಪಟ್ಟಣದ ಬೆಲಾಬಗನ್ ಪ್ರದೇಶದಲ್ಲಿ ಬಾಡಿಗೆಗೆ ವಾಸವಿದ್ದ ರವಿ ಶರ್ಮಾ (30) ಮತ್ತು ಲವ್ಲಿ ಶರ್ಮಾ (24) ಮೃತ ದಂಪತಿಯಾಗಿದ್ದಾರೆ.

"ಪ್ರಾಥಮಿಕ ತನಿಖೆಯ ಪ್ರಕಾರ ಮಂಗಳವಾರ ರಾತ್ರಿ ವೈವಾಹಿಕ ಕಲಹದ ಕಾರಣ ದಂಪತಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಬ್ಬರ ದೇಹಗಳಲ್ಲಿಯೂ ಹರಿತವಾದ ಆಯುಧದಿಂದ ಗಾಯಗಳಾಗಿವೆ... ಸ್ಥಳದಲ್ಲಿ ಚಾಕು ಪತ್ತೆಯಾಗಿದೆ" ಎಂದು ಪಟ್ಟಣ ಪೊಲೀಸ್ ಠಾಣಾಧಿಕಾರಿ ರಾಜೀವ್ ಕುಮಾರ್ ಹೇಳಿದ್ದಾರೆ.

ಆದಾಗ್ಯೂ, ಸಾವಿನ ಹಿಂದಿನ ನಿಜವಾದ ಕಾರಣವನ್ನು ಸರಿಯಾದ ತನಿಖೆಯ ನಂತರವೇ ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.

ರವಿ ಶರ್ಮಾ ಬಿಹಾರದ ಸಿವಾನ್‌ನವರಾಗಿದ್ದರೆ, ಅವರ ಪತ್ನಿ ದಿಯೋಘರ್‌ನ ಜೂನ್ ಪೋಖರ್ ಪ್ರದೇಶದವರು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಹಾರ್ಮುಜ್ ಮತ್ತೆಂದೂ ಹಿಂದಿನ ಸ್ಥಿತಿಗೆ ಮರಳಲ್ಲ, ನೆತನ್ಯಾಹು ಮಾತು ಕೇಳಿದರೆ ಹೊತ್ತಿ ಉರಿಯುತ್ತೀರಿ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ

ಟ್ರಂಪ್ ವಾರ್ನಿಂಗ್ ಬೆನ್ನಲ್ಲೇ ವಸತಿ ಕಟ್ಟಡಕ್ಕೆ ವಾಯುದಾಳಿ: ಇರಾನ್ ನಲ್ಲಿ 13 ಮಂದಿ ಸಾವು!

IPL 2026: ಇಲ್ಲಿಯವರೆಗೂ ನೋಡಿರದ ಆರ್ ಸಿಬಿಯ 'funniest moment': ವಿಡಿಯೋ ವೈರಲ್

“Tuesday, 8:00 P.M. Eastern Time"!: ಇರಾನ್'ಗೆ ಮತ್ತೊಂದು ಎಚ್ಚರಿಕೆ ಕೊಟ್ಟ ಟ್ರಂಪ್, ಸರ್ವನಾಶದ ಸುಳಿವು..!

ಅಮೆರಿಕಾ–ಇರಾನ್ ನಡುವೆ 45 ದಿನಗಳ ಕದನ ವಿರಾಮಕ್ಕೆ ಯತ್ನ: ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್..?

SCROLL FOR NEXT