ನವದೆಹಲಿ: ಅಕ್ಟೋಬರ್ 5 ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಅವರ ತಾಯಿ ಕಮಲ್ ಗವಾಯಿ ಹೇಳಿದ್ದಾರೆ.
ವಿವಾದಾತ್ಮಕ ಸುದ್ದಿಗಳ ಸೃಷ್ಟಿ ಮತ್ತು ಆರೋಪ, ದೋಷಣೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ಅವರು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 5 ರ ಕಾರ್ಯಕ್ರಮಕ್ಕೆ ಕೆಲವರು ನನ್ನನ್ನು ಆಹ್ವಾನಿಸಿದ್ದರು. ಹೀಗಾಗಿ ಎಲ್ಲರನ್ನು ಸ್ವಾಗತಿಸಿದ್ದೆ. ಆದರೆ ಕಾರ್ಯಕ್ರಮದ ಸುದ್ದಿ ಪ್ರಕಟವಾದ ತಕ್ಷಣ ಅನೇಕ ಜನರು ನನ್ನ ಮಾತ್ರವಲ್ಲದೇ ನನ್ನ ದಿವಂಗತ ಪತಿ ದಾದಾಸಾಹೇಬ್ ಗವಾಯಿ (ಮಾಜಿ ಬಿಹಾರ ರಾಜ್ಯಪಾಲ ಆರ್ ಎಸ್ ಗವಾಯಿ) ವಿರುದ್ಧ ಟೀಕೆ ಮತ್ತು ಆರೋಪಗಳನ್ನು ಮಾಡಲು ಪ್ರಾರಂಭಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ನಾವು ಅಂಬೇಡ್ಕರ್ ಅವರ ಸಿದ್ಧಾಂತದಂತೆ ಬದುಕಿದ್ದೇವೆ. ದಾದಾಸಾಹೇಬ್ ಗವಾಯಿ ಅವರು ತಮ್ಮ ಜೀವನವನ್ನು ಅಂಬೇಡ್ಕರ್ ಚಳುವಳಿಗೆ ಮುಡಿಪಾಗಿಟ್ಟಿದ್ದರು. ವಿಭಿನ್ನ ವಿಚಾರಧಾರೆಯ ವೇದಿಕೆಯಲ್ಲಿ ನಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುವುದೂ ಮುಖ್ಯವಾಗಿರುತ್ತದೆ ಅದಕ್ಕೆ ಧೈರ್ಯ ಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ತನ್ನ ಪತಿ ಉದ್ದೇಶಪೂರ್ವಕವಾಗಿ ಸಿದ್ಧಾಂತ ವಿರೋಧಿ ಚಂದಾದಾರರಾಗಿರುವ ಸಂಘಟನೆಗಳ ಕಾರ್ಯಕ್ರಮಗಳಿಗೆ ಹಾಜರಾಗಿ ವಂಚಿತ ವರ್ಗಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು. ಅವರು ಆರ್‌ಎಸ್‌ಎಸ್‌ನ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು ಆದರೆ ಅದರ ಹಿಂದುತ್ವವನ್ನು ಎಂದಿಗೂ ಸ್ವೀಕರಿಸಲಿಲ್ಲ .'ನಾನು ವೇದಿಕೆಯಲ್ಲಿದ್ದರೆ (ಅಕ್ಟೋಬರ್ 5 ರ ಆರ್‌ಎಸ್‌ಎಸ್ ಸಮಾರಂಭದಲ್ಲಿ), ನಾನು ಅಂಬೇಡ್ಕರ್ ಸಿದ್ಧಾಂತವನ್ನು ಮುಂದಿಡುತ್ತಿದ್ದೆ,' ಎಂದು ಅವರು ತಿಳಿಸಿದ್ದಾರೆ.
ಒಂದು ಕಾರ್ಯಕ್ರಮದಿಂದ ನಾನು ಮತ್ತು ನನ್ನ ದಿವಂಗತ ಪತಿಯನ್ನು ನಿಂದಿಸಲಾಗುತ್ತಿದೆ.ಟೀಕೆಗಳು ವ್ಯಕ್ತವಾಗುತ್ತಿವೆ. ಹಾಗಾಗೀ ತುಂಬಾ ದು:ಖವಾಗಿದ್ದು ಸಂಘದ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸುವ ಮೂಲಕ ಇದೆಲ್ಲವನ್ನು ಕೊನೆಗೊಳಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.