ಭೋಪಾಲ್: ದೂರ್ತ ವ್ಯಕ್ತಿಯೋರ್ವ ಆಸ್ಪತ್ರೆಯ ಶವಾಗಾರದಲ್ಲೇ ಮಹಿಳೆಯ ಶವದ ಮೇಲೆ ಅತ್ಯಾಚಾರ ಮಾಡಿರುವ ಪೈಶಾಚಿಕ ಘಟನೆ ಮಧ್ಯ ಪ್ರದೇಶದಲ್ಲಿ ವರದಿಯಾಗಿದೆ.
ವಿಚಿತ್ರವಾದರೂ ಇದು ಸತ್ಯ.. ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ 25 ವರ್ಷದ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಮಹಿಳೆಯ ಮೃತದೇಹದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ಘಟನೆ ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದಿದ್ದರೂ ಈ ಘೋರ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಇತ್ತೀಚೆಗೆ ಪತ್ತೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ, ಮಹಿಳೆಯ ಶವವನ್ನು ಆಸ್ಪತ್ರೆಯ ಶವಾಗಾರದೊಳಗೆ ಸ್ಟ್ರೆಚರ್ ಮೇಲೆ ಇರಿಸಲಾಗಿತ್ತು. ಈ ವೇಳೆ ಆಸ್ಪತ್ರೆಯೊಳಗೆ ನುಗ್ಗಿದ ದುಷ್ಕರ್ಮಿ ಮಹಿಳೆಯ ಶವವನ್ನು ಎಳೆದುಕೊಂಡು ಹೋಗಿ ಆ ಹೆಣದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ.
ಆರೋಪಿಯನ್ನು ಭೌರಘಾಟ್ ಪ್ರದೇಶದ ತಂಗಿಯಾಪತ್ ಗ್ರಾಮದ 25 ವರ್ಷದ ನೀಲೇಶ್ ಭಿಲಾಲ ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಯ ಕೃತ್ಯ ವ್ಯಾಪಕ ವೈರಲ್ ಆಗುತ್ತಿದೆ.
ಮರಣೋತ್ತರ ಪರೀಕ್ಷೆ ಇಡಲಾಗಿದ್ದ ಮೃತದೇಹ
ಮೂಲಗಳ ಪ್ರಕಾರ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆ ಇಡಲಾಗಿತ್ತು. ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿ ಮಹಿಳೆಯ ಶವವನ್ನು ಸಿಸಿಟಿವಿ ಕ್ಯಾಮೆರಾಗೆ ಕಾಣದಂತೆ ಎಳೆದೊಯ್ದಿದ್ದಾನೆ. ಬಳಿಕ ಶವದ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮತ್ತೆ ಅದೇ ಸ್ಟ್ರೆಚರ್ ಮೇಲೆ ಮಲಗಿಸಿ ಪರಾರಿಯಾಗಿದ್ದಾನೆ.
ಈ ವರ್ಷ ಅಕ್ಟೋಬರ್‌ನಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ವೈದ್ಯಕೀಯ ಅಧಿಕಾರಿಯೊಬ್ಬರು. ಡಾ. ಆದಿಯಾ ದಾವರ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ನಂತರ, ನಿಲೇಶ್ ಭಿಲಾಲ ಎಂಬ ಯುವಕನನ್ನು ಬಂಧಿಸಲಾಗಿದೆ.