ಸಂಗ್ರಹ ಚಿತ್ರ 
ದೇಶ

LOC ಬಳಿ ಭಾರತಕ್ಕೆ ನುಸುಳಲು ಉಗ್ರರು ಸಜ್ಜಾಗಿ ನಿಂತಿದ್ದಾರೆ: BSF ಎಚ್ಚರಿಕೆ

ಹಿಮಪಾತ ಆರಂಭಕ್ಕೂ ಮುನ್ನ ಗಡಿ ನುಸುಳುವ ಪ್ರಯತ್ನಗಳು ನಡೆಯುತ್ತಿರುತ್ತವೆ. ನವೆಂಬರ್ ವರೆಗೂ ಉಗ್ರರ ಒಳನುಸುಳುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗಡಿ ಬಳಿ ಹೆಚ್ಚಿನ ಉಗ್ರರು ಸಜ್ಜಾಗಿ ನಿಂತಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಶ್ರೀನಗರ: ಕಾಶ್ಮೀರ ಕಣಿವೆಯೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಸಜ್ಜಾಗಿ ನಿಂತಿತ್ತು, ಅವಕಾಶಕ್ಕಾಗಿ ಕಾಯುತ್ತಿದ್ದಾರೆಂದು ಬಿಎಸ್‌ಎಫ್ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಎಫ್ ಹಿರಿಯ ಅಧಿಕಾರಿ ಅಶೋಕ್ ಯಾದವ್ ಅವರು, ಚಳಿಗಾಲ ಆರಂಭವಾಗುವ ಮೊದಲು ಕಣಿವೆಯೊಳಗೆ ಉಗ್ರರು ನುಸುಳಲು ಹೆಚ್ಚಿನ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಹಿಮಪಾತ ಆರಂಭಕ್ಕೂ ಮುನ್ನ ಗಡಿ ನುಸುಳುವ ಪ್ರಯತ್ನಗಳು ನಡೆಯುತ್ತಿರುತ್ತವೆ. ನವೆಂಬರ್ ವರೆಗೂ ಉಗ್ರರ ಒಳನುಸುಳುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗಡಿ ಬಳಿ ಹೆಚ್ಚಿನ ಉಗ್ರರು ಸಜ್ಜಾಗಿ ನಿಂತಿದ್ದಾರೆಂದು ತಿಳಿಸಿದ್ದಾರೆ.

ಬಂಡಿಪೋರಾ ಮತ್ತು ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚಿನ ಉಗ್ರರು ನಿಂತಿದ್ದು, ಒಳನುಸುಳಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಭದ್ರತೆ ಬಿಗಿಯಾಗಿದ್ದು, ಭದ್ರತಾಪಡೆಗಳು ಉಗ್ರರ ಪ್ರಯತ್ನಗಳನ್ನು ವಿಫಲಗೊಳ್ಳುವಂತೆ ಮಾಡುತ್ತಿದ್ದಾರೆ. ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆಂದು ಹೇಳಿದ್ದಾರೆ.

ಸೇನೆ ಮತ್ತು ಬಿಎಸ್‌ಎಫ್ ಜಾಗರೂಕರಾಗಿದ್ದು, ಕಣ್ಗಾವಲು ಉಪಕರಣಗಳ ಸಹಾಯದಿಂದ ಎಲ್‌ಒಸಿಯಲ್ಲಿ ಉತ್ತಮವಾಗಿ ಪ್ರಾಬಲ್ಯ ಸಾಧಿಸುತ್ತಿವೆ. ಸೇನೆಯ ಜೊತೆಗೆ ಎಲ್‌ಸಿಯಲ್ಲಿ ಉತ್ತಮ ಪ್ರಾಬಲ್ಯ ಸಾಧಿಸುತ್ತಿದ್ದೇವೆ.

ಈ ವರ್ಷ ಇಲ್ಲಿಯವರೆಗೆ ಭದ್ರತಾ ಪಡೆಗಳು ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿವೆ. ಹೊಸ ವಿಧಾನ ಮತ್ತು ಹೊಸ ಕಣ್ಗಾವಲು ಉಪಕರಣಗಳಿಂದಾಗಿ ಉಗ್ರರ ನುಸುಳುವಿಕೆ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 42 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

ಬಿಹಾರ: ನ. 20ಕ್ಕೆ ನೂತನ ಸಿಎಂ ಪದ ಗ್ರಹಣ, ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗಿ!

ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್: ಸಿಎಂ ಸಿದ್ದರಾಮಯ್ಯ ಓಟಕ್ಕೆ 'ಬಂಡೆ' ಬ್ರೇಕ್! KN ರಾಜಣ್ಣ ಕಮ್ ಬ್ಯಾಕ್?

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ

ಮೊಹಮ್ಮದ್ ಶಮಿ ವಾಪಸ್ ಕರೆ ತನ್ನಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ ಗೌತಮ್ ಗಂಭೀರ್‌ಗೆ ಗಂಗೂಲಿ!

SCROLL FOR NEXT