ದೀಪಕ್ ಕುಮಾರ್ ಕಶ್ಯಪ್ 
ದೇಶ

ಬಜರಂಗದಳ ಸದಸ್ಯರಿಂದ ಕಿರುಕುಳ: ವೃದ್ಧ ಮುಸ್ಲಿಂ ಅಂಗಡಿ ಮಾಲೀಕನ ರಕ್ಷಣೆ; ಉತ್ತರಾಖಂಡ ಸರ್ಕಾರದ ನಗದು ಬಹುಮಾನ ನಿರಾಕರಿಸಿದ ದೀಪಕ್!

ಜನವರಿ 26ರಂದು ಉತ್ತರಾಖಂಡದ ಕೋಟ್ದ್ವಾರದಲ್ಲಿ ಘಟನೆ ನಡೆದಿತ್ತು. ಕೆಲ ಬಜರಂಗ ದಳ ಕಾರ್ಯಕರ್ತರು ಅಂಗಡಿ ಮಾಲೀಕ ವಕೀಲ್ ಅಹ್ಮದ್ (70) ಅವರನ್ನು ಅಂಗಡಿ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು.

ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಕೋಟ್ದ್ವಾರದಲ್ಲಿ ವೃದ್ಧ ಮುಸ್ಲಿಂ ಅಂಗಡಿ ಮಾಲೀಕನನ್ನು ಬಜರಂಗ ದಳ ಕಾರ್ಯಕರ್ತರ ಕಿರುಕುಳದಿಂದ ರಕ್ಷಿಸಿ, ಕೋಮು ಸೌಹಾರ್ದತೆ ಸಾರಿ ಮೆಚ್ಚುಗೆ ಗಳಿಸಿರುವ ದೀಪಕ್ ಕುಮಾರ್ ಅವರು, ಉತ್ತರಾಖಂಡ ಸರ್ಕಾರ ಘೋಷಿಸಿದ ನಗದು ಬಹುಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ.

ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅಂಸಾರಿ ಅವರು ದೀಪಕ್ ಕುಮಾರ್ ಅವರಿಗೆ ರೂ.2 ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದರು.

ಇದನ್ನು ದೀಪಕ್ ಅವರು ನಿರಾಕರಿಸಿದ್ದು, ಈ ಬಹುಮಾನ ಬಗ್ಗೆ ನನಗೆ ಸೋಶಿಯಲ್ ಮೀಡಿಯಾದ ಮೂಲಕ ತಿಳಿಯಿತು. ರೂ.2 ಲಕ್ಷ ದೊಡ್ಡ ಮೊತ್ತ. ಆದರೆ, ಈ ಹಣವನ್ನು ಅಂಗವಿಕಲರಿಗೆ ಅಥವಾ ಹೆಚ್ಚು ಸಂಕಷ್ಟದಲ್ಲಿರುವವರಿಗೆ ನೀಡಿದರೆ ಅದೇ ನಿಜವಾದ ಪ್ರಶಂಸನೀಯ ಕೆಲಸಕವಾಗುತ್ತದೆ ಎಂದು ಹೇಳಿದ್ದಾರೆ.

ಜನವರಿ 26ರಂದು ಉತ್ತರಾಖಂಡದ ಕೋಟ್ದ್ವಾರದಲ್ಲಿ ಘಟನೆ ನಡೆದಿತ್ತು. ಕೆಲ ಬಜರಂಗ ದಳ ಕಾರ್ಯಕರ್ತರು ಅಂಗಡಿ ಮಾಲೀಕ ವಕೀಲ್ ಅಹ್ಮದ್ (70) ಅವರನ್ನು ಅಂಗಡಿ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು.

“ಬಾಬಾ ಸ್ಕೂಲ್ ಗಾರ್ಮೆಂಟ್ಸ್” ಹೆಸರಿನಲ್ಲಿ ಬಾಬಾ ಎಂಬ ಪದ ಧಾರ್ಮಿಕ ಅರ್ಥ ಹೊಂದಿದ್ದು, ಮುಸ್ಲಿಮರು ಈ ಹೆಸರನ್ನಿಟ್ಟುಕೊಂಡು ಅಂಗಡಿ ನಡೆಸಬಾರದು ಆಕ್ಷೇಪಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ದೀಪಕ್ ಕುಮಾರ್ ಕಶ್ಯಪ್ ಅವರು ಗುಂಪನ್ನು ಎದುರಿಸಿದ್ದರು.

ಘಟನೆ ವೇಳೆ ದೀಪಕ್ ಅವರು ತಮ್ಮನ್ನು ಮೊಹಮ್ಮದ್ ದೀಪಕ್, ನಾನು ಭಾರತೀಯನೆಂದು ಹೇಳಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಸಿದ್ದರು. ದೀಪಕ್‌ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಉತ್ತರಾಖಂಡ ಸಚಿವರು ಸುರೇಂದ್ರ ಸಿಂಗ್ ನೇಗಿ ಮತ್ತು ಹರಕ್ ಸಿಂಗ್ ರಾವತ್ ಅವರು ಬೆಂಬಲ ಸೂಚಿಸಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ