ಮನೋಜ್ ಮುಕುಂದ್ ನರವಾಣೆ  
ದೇಶ

ನನ್ನ ಆತ್ಮಚರಿತ್ರೆ ಇನ್ನೂ ಪ್ರಕಟವಾಗಿಲ್ಲ: ಪ್ರಕಾಶಕರ ಬೆಂಬಲಕ್ಕೆ ನಿಂತ ಮಾಜಿ ಸೇನಾ ಮುಖ್ಯಸ್ಥ ನರವಾಣೆ

ಪೆಂಗ್ವಿನ್ ಬಿಡುಗಡೆ ಮಾಡಿದ ಹೇಳಿಕೆಯನ್ನು ಹಂಚಿಕೊಂಡ ಜನರಲ್ ನರವಾಣೆ, "ಇದು ಪುಸ್ತಕದ ಸ್ಥಿತಿ" ಎಂದಷ್ಟೇ ಹೇಳಿದ್ದಾರೆ.

ನವದೆಹಲಿ: ತಮ್ಮ ಆತ್ಮಚರಿತ್ರೆ ತೀವ್ರ ವಿವಾದಕ್ಕೆ ಕಾರಣವಾದ ನಂತರ ಮೌನ ಮುರಿದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು, ತಮ್ಮ ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ(PRHI) ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ ಎಂಬ ನಿಲುವನ್ನು ಅನುಮೋದಿಸಿದ್ದಾರೆ.

ಪೆಂಗ್ವಿನ್ ಬಿಡುಗಡೆ ಮಾಡಿದ ಹೇಳಿಕೆಯನ್ನು ಹಂಚಿಕೊಂಡ ಜನರಲ್ ನರವಾಣೆ, "ಇದು ಪುಸ್ತಕದ ಸ್ಥಿತಿ" ಎಂದಷ್ಟೇ ಹೇಳಿದ್ದಾರೆ. ಆತ್ಮಚರಿತ್ರೆಯ ಅನಧಿಕೃತ ಪ್ರತಿಗಳ ಪ್ರಸರಣದ ಕುರಿತು ರಾಜಕೀಯ ವಿವಾದದ ನಡುವೆ ಪ್ರಕಾಶಕರ ಸ್ಪಷ್ಟೀಕರಣವನ್ನು ಮಾಜಿ ಸೇನಾ ಮುಖ್ಯಸ್ಥ ಬೆಂಬಲಿಸಿದ್ದಾರೆ.

ಇದಕ್ಕೂ ಮುನ್ನ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯ ಏಕೈಕ ಪ್ರಕಾಶನ ಹಕ್ಕುಗಳನ್ನು ಹೊಂದಿದೆ ಎಂದು ಪುನರುಚ್ಚರಿಸಿದೆ ಮತ್ತು ಪುಸ್ತಕವು ಇನ್ನೂ ಪ್ರಕಟವಾಗಿಲ್ಲ ಎಂದು ಪ್ರತಿಪಾದಿಸಿದೆ.

ಪುಸ್ತಕದ ಯಾವುದೇ ಆವೃತ್ತಿ, ಅದು ಮುದ್ರಿತವಾಗಲಿ ಅಥವಾ ಡಿಜಿಟಲ್ ಆಗಿರಲಿ, ಇಲ್ಲಿಯವರೆಗೆ ಪ್ರಕಟವಾಗಿಲ್ಲ ಅಥವಾ ಸಾರ್ವಜನಿಕರಿಗೆ ವಿತರಿಸಲಾಗಿಲ್ಲ ಎಂದು ಪ್ರಕಾಶಕರು ಸ್ಪಷ್ಟಪಡಿಸಿದ್ದಾರೆ.

ಪುಸ್ತಕ ಪ್ರಕಟಣೆ ರಕ್ಷಣಾ ಸಚಿವಾಲಯದಿಂದ ಇನ್ನೂ ಕಡ್ಡಾಯ ಅನುಮತಿ ಪಡೆಯದಿದ್ದರೂ, ಆತ್ಮಚರಿತ್ರೆಯ ಪಿಡಿಎಫ್ ಆವೃತ್ತಿಗಳು ಪ್ರಸಾರವಾಗುತ್ತಿವೆ ಎಂಬ ವರದಿಗಳ ನಂತರ ಈ ಸ್ಪಷ್ಟೀಕರಣ ನೀಡಲಾಗಿದೆ.

ಪ್ರಸ್ತುತ ಚಲಾವಣೆಯಲ್ಲಿರುವ ಯಾವುದೇ ಪ್ರತಿಗಳು ಅನಧಿಕೃತವಾಗಿವೆ ಮತ್ತು ಅಧಿಕೃತ ಬಿಡುಗಡೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಪ್ರಕಾಶನ ಸಂಸ್ಥೆ ಹೇಳಿದೆ.

ಡಿಜಿಟಲ್ ಮತ್ತು ಇತರ ರೂಪಗಳಲ್ಲಿ ಪುಸ್ತಕವನ್ನು ಅಕ್ರಮವಾಗಿ ಪ್ರಸಾರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅವಿಶ್ವಾಸ ನಿರ್ಣಯ ಚರ್ಚೆಯಾಗೋವರೆಗೂ ನಾನು ಸದನವನ್ನು ಪ್ರವೇಶಿಸಲ್ಲ, ಸ್ಪೀಕರ್ ಸ್ಥಾನದಲ್ಲಿ ಕೂರಲ್ಲ: ಓಂ ಬಿರ್ಲಾ ಪ್ರತಿಜ್ಞೆ

ರಾಹುಲ್ ಗಾಂಧಿಯನ್ನೇ ಪದಚ್ಯುತಿಗೊಳಿಸುವ ಸಮಯ ಬಂದಿದೆ: ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಕಿಡಿ

T20 ವಿಶ್ವಕಪ್ 2026: ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಪತನ; USAಗೆ 191 ರನ್ ಗುರಿ ನೀಡಿದ ಪಾಕಿಸ್ತಾನ!

T20 ವಿಶ್ವಕಪ್ 2026: ಇಂಡೋ-ಪಾಕ್ ಪಂದ್ಯದಲ್ಲಿ ಜಯ್ ಶಾ, ಮೊಹ್ಸಿನ್ ನಖ್ವಿ ಮುಖಾಮುಖಿ? ಮಾಹಿತಿ ಇಲ್ಲ ಎಂದ ಶ್ರೀಲಂಕಾ

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ: ಭಾರತಕ್ಕೆ ಎಷ್ಟನೇ ಸ್ಥಾನ? ಅತ್ಯಂತ ಭ್ರಷ್ಟ ದೇಶ ಯಾವುದು?

SCROLL FOR NEXT