ಬಂಧಿತ ಆರೋಪಿಗಳೊಂದಿಗೆ ಗುಜರಾತ್ ಪೊಲೀಸರು 
ದೇಶ

ಲವ್, ಸೆಕ್ಸ್, ಗರ್ಭಿಣಿಯಾದ 'ಗರ್ಲ್ ಫ್ರೆಂಡ್' ಕೊಂದು ಬಾವಿಗೆ ಎಸೆದ ಪ್ರಿಯಕರ!

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಯುವತಿಯನ್ನುಕೊಲೆ ಮಾಡಿ ಶವವನ್ನು ಗ್ರಾಮದ ಬಾವಿಗೆ ಎಸೆದ ಆರೋಪದ ಮೇಲೆ ಇಬ್ಬರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.

ಕಚ್: ಇತ್ತೀಚಿನ ದಿನಗಳಲ್ಲಿ ಲವ್, ಸೆಕ್ಸ್, ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗರ್ಭಿಣಿಯಾಗಿದ್ದಕ್ಕೆ ನೀನೇ ಕಾರಣ ಎಂದ ಹೇಳಿದ ಗರ್ಲ್ ಫ್ರೆಂಡ್ ನ್ನು ಮದುವೆಯಾಗುವುದಾಗಿ ಸುಳ್ಳು ಹೇಳಿ ಪ್ರಿಯಕರನ್ನೆ ಕೊಂದು ಹಾಕಿದ್ದಾನೆ.

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಯುವತಿಯನ್ನುಕೊಲೆ ಮಾಡಿ ಶವವನ್ನು ಗ್ರಾಮದ ಬಾವಿಗೆ ಎಸೆದ ಆರೋಪದ ಮೇಲೆ ಇಬ್ಬರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ರಾಜೇಶ್ ಎಂಬಾತ ಅದೇ ಗ್ರಾಮದ ಯುವತಿಯೊಂದಿಗೆ ಸುಮಾರು ಒಂದು ವರ್ಷದಿಂದ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಅವಧಿಯಲ್ಲಿ ಇಬ್ಬರೂ ದೈಹಿಕ ಸಂಬಂಧ ಹೊಂದಿದ್ದು, ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದಾಳೆ. ಪ್ರೌಢಾವಸ್ಥೆಗೆ ಬಂದ ನಂತರ, ತನ್ನನ್ನು ಮದುವೆಯಾಗುವಂತೆ ರಾಜೇಶ್ ನನ್ನು ಕೇಳಿದ್ದಾಳೆ. ಅಲ್ಲದೇ ಮದುವೆಯಾಗದಿದ್ದಲ್ಲಿ ಪೊಲೀಸರಿಗ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಕೆಲವು ದಿನಗಳ ಮೊದಲು ರಾಜೇಶ್ ತನ್ನ ಸ್ನೇಹಿತ ರಾಹುಲ್ ಜೊತೆ ಈ ವಿಷಯವನ್ನು ಚರ್ಚಿಸಿದ್ದಾನೆ. ನಂತರ ಇಬ್ಬರು ಸೇರಿ ಯುವತಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ. ಬಳಿಕ ರಾಜೇಶ್ ಸೋಶಿಯಲ್ ಮೀಡಿಯಾ ಮೂಲಕ ಯುವತಿ ಸಂಪರ್ಕಿಸಿದ್ದು, ಮದುವೆಯಾಗುವುದಾಗಿ ನಂಬಿಸಿದ್ದು, ರಾತ್ರಿ ವೇಳೆ ಭೇಟಿಯಾಗುವಂತೆ ತಿಳಿಸಿದ್ದಾನೆ.

ಬಳಿಕ ಆಕೆ ಸ್ಥಳಕ್ಕೆ ತಲುಪಿದಾಗ ಆಕೆಯೊಂದಿಗೆ ಜಗಳವಾಡಿದ್ದು, ಆಕೆಯ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಬಾವಿಗೆ ಎಸೆದಿದ್ದಾನೆ. ಇದಕ್ಕೆ ತನ್ನ ಸ್ನೇಹಿತನಾದ ರಾಹುಲ್ ನೆರವು ಪಡೆದಿದ್ದಾನೆ.

ಯುವತಿ ನಾಪತ್ತೆಯಾಗುತ್ತಿದ್ದಂತೆಯೇ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ವೇಳೆ ಆರೋಪಿ ರಾಜೇಶ್ ತಾನೆೇ ಕೊಲೆ ಮಾಡಿತ್ತು ಎಂದು ಸತ್ಯ ಒಪ್ಪಿಕೊಂಡಿದ್ದಾನೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಕರೆಸಿ, ಹುಡುಕಾಟ ನಡೆಸಿದ್ದು, ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!

ಹೊಸ ಶೇ.10ರಷ್ಟು ಸುಂಕ ಘೋಷಿಸಿದ Donald Trump; ಭಾರತದ ಮೇಲೆ ಪರಿಣಾಮವೇನು?

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI ಮತ್ತು ಟೀಂ ಇಂಡಿಯಾಗೆ ICC ನೆರವು ಆರೋಪಕ್ಕೆ ಖಡಕ್ ಉತ್ತರ

ಸುಪ್ರೀಂ ಕೋರ್ಟ್ ತೀರ್ಪಿಗೆ ಡೋಂಟ್ ಕೇರ್: ಶೇ.10ರಷ್ಟು ಜಾಗತಿಕ ಸುಂಕ ಘೋಷಿಸಿದ Donald Trump, ಭಾರತ ಒಪ್ಪಂದ ವಿಷಯ ಪ್ರಸ್ತಾಪ

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಗೆ ಫೆ.26ವರೆಗೆ ನ್ಯಾಯಾಂಗ ಬಂಧನ

SCROLL FOR NEXT