ದೆಹಲಿ ಕೋರ್ಟ್ online desk
ದೇಶ

ಪತ್ನಿಗೆ ಮಾಸಿಕ 5 ಲಕ್ಷ ರೂ ಜೀವನಾಂಶ ನೀಡುವಂತೆ ಪತಿಗೆ ದೆಹಲಿ ಕೋರ್ಟ್ ಆದೇಶ!

ಅಷ್ಟೇ ಅಲ್ಲದೇ ಪತಿಯ ಮನೆಯಲ್ಲಿದ್ದ ಸಾಮಾಜಿಕ ಸ್ತರದ ಪ್ರಕಾರವೇ ಜೀವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ದೆಹಲಿಯ ಕೌಟುಂಬಿಕ ನ್ಯಾಯಾಲಯವೊಂದು ವ್ಯಕ್ತಿಯೋರ್ವನಿಗೆ ಆತನ ಪತ್ನಿಗೆ ಮಧ್ಯಂತರ ಜೀವನಾಂಶವಾಗಿ 5 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಆದೇಶ ನೀಡಿದೆ.

ಪ್ರತ್ಯೇಕಗೊಂಡ ನಂತರ ನೀಡುವ ಆರ್ಥಿಕ ನೆರವು ಕೇವಲ ಜೀವನಾಂಶ ಮಾತ್ರವಷ್ಟೇ ಅಲ್ಲದೇ ಘನತೆಗೆ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಜೀವಿಸುವುದೆಂದರೆ ಕೇವಲ ಪ್ರಾಣಿಯಂತೆ ಬದುಕುವುದು ಅಲ್ಲ. ಆ ವ್ಯಕ್ತಿ ಜೀವಂತವೇ ಇದ್ದಿಲ್ಲ ಎಂಬಂತೆ ವರ್ತಿಸುವುದಲ್ಲ. ನಿರ್ವಹಣೆಯು ಕೇವಲ ಜೀವನಾಧಾರಕ್ಕಿಂತ ಹೆಚ್ಚಾಗಿರುತ್ತದೆ. ಪತ್ನಿ ಎಂಬಾಕೆ ಘನತೆಯೊಂದಿಗೆ ಜೀವಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಪತಿಯ ಮನೆಯಲ್ಲಿದ್ದ ಸಾಮಾಜಿಕ ಸ್ತರದ ಪ್ರಕಾರವೇ ಜೀವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದೇ ವೇಳೇ ತಾನು ದುಬೈ ನಲ್ಲಿ ವಾಸಿಸುತ್ತಿರುವುದನ್ನು ಆತನನ್ನು ಬಾಧ್ಯತೆಯಿಂದ ರಕ್ಷಿಸಲು ಪರಿಗಣಿಸಬೇಕೆಂಬ ವ್ಯಕ್ತಿಯ ಮನವಿಯನ್ನು ತಿರಸ್ಕರಿಸಿರುವ ಕೋರ್ಟ್, "ಸಬಲ ಪತಿ" ಪತ್ನಿಯ ಜೀವನವನ್ನು ನಿರ್ವಹಿಸುವ ತನ್ನ ಶಾಸನಬದ್ಧ ಕರ್ತವ್ಯದಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಥವಾ ಆಕೆಯನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

'ಹಸಿರು ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ, ರಸ್ತೆ ಕಸ ಗುಡಿಸಿ ಬನ್ನಿ': ಸಂಚಾರ ನಿಯಮ ಉಲ್ಲಂಘಿಸಿ ದರ್ಪ ತೋರಿದ ಚಾಲಕನಿಗೆ ಹೈಕೋರ್ಟ್‌ ಶಿಕ್ಷೆ!

ಉಪಚುನಾವಣೆ ಗೆಲ್ಲುವ ಉಮೇದು: ಪ್ರಚಾರದಲ್ಲಿ ನಿರತರಾದ ಸಿಎಂ -ಡಿಸಿಎಂ; ನಿಯಂತ್ರಣ ಕಳೆದುಕೊಂಡ ಆಡಳಿತ ಯಂತ್ರ!

'ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ: ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ, 2028 ರಲ್ಲಿ ಸರ್ಕಾರ ರಚಿಸ್ತಿವಿ'

SCROLL FOR NEXT