ಹೊಡೆದಾಟದ ದೃಶ್ಯ 
ದೇಶ

ತಪ್ಪಾಗಿ ಮನೆಯ 'ಡೋರ್ ಬೆಲ್' ಮಾಡಿದ್ದಕ್ಕೆ ಕಿರಿಕ್: ಡೆಲಿವರಿ ಏಜೆಂಟ್, ಸೆಕ್ಯೂರಿಟಿ ಗಾರ್ಡ್ ಗಳ ನಡುವೆ ಹೊಡೆದಾಟ; Video ವೈರಲ್

ತಡರಾತ್ರಿ ಬಂದ ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಲು ತಪ್ಪಾಗಿ ಮನೆಯೊಂದರ ಡೋರ್‌ಬೆಲ್ ಒತ್ತಿದ್ದಾನೆ.

ನೋಯ್ಡಾ: ಡೆಲಿವರಿ ಏಜೆಂಟ್ ತಪ್ಪಾಗಿ ಬೇರೆ ಮನೆಯೊಂದರ ಕಾಲಿಂಗ್ ಬೆಲ್ ಒತ್ತಿದ್ದರಿಂದ ಜಗಳ ಶುರುವಾಗಿ ದೊಡ್ಡ ಹೊಡೆದಾಟವೇ ನಡೆದು ಹೋಗಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದ ನಿಂಬಸ್ ಸೊಸೈಟಿಯಲ್ಲಿ ಶನಿವಾರ ಈ ಘಟನೆ ನಡೆದಿದೆ.

ತಡರಾತ್ರಿ ಬಂದ ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಲು ತಪ್ಪಾಗಿ ಮನೆಯೊಂದರ ಡೋರ್‌ಬೆಲ್ ಒತ್ತಿದ್ದಾನೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಮತ್ತು ಡೆಲಿವರಿ ಏಜೆಂಟ್ ನಡುವೆ ಮಾತಿನ ಚಕಮಕಿ ನಡೆದದ್ದು, ಮನೆ ಮಾಲೀಕ ಸೆಕ್ಯೂರಿಟಿ ಗಾರ್ಡ್ ಗಳನ್ನು ಕರೆದಿದ್ದಾನೆ.

ಬಳಿಕ ಸೆಕ್ಯೂರಿಟಿ ಗಾರ್ಡ್ ಗಳು ಹಾಗೂ ಡೆಲಿವರಿ ಏಜೆಂಟ್ ನಡುವೆ ವಾಗ್ವಾದ ನಡೆದಿದೆ.

ಬಳಿಕ ಡೆಲಿವರಿ ಏಜೆಂಟ್ ತನ್ನ ಕಡೆಯವರನ್ನು ಫೋನ್ ಮಾಡಿ ಕರೆದಿದ್ದು, ಎರಡು ಕಡೆಯವರು ಕೋಲು ಮತ್ತು ಕಬ್ಬಿಣದ ರಾಡ್‌ಗಳಿಂದ ಹೊಡೆದಾಡಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜಗಳವಾದ ಸ್ವಲ್ಪ ಸಮಯದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬೈಕ್ ನಲ್ಲಿ ಬಂದವರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಡೆಲಿವರಿ ಏಜೆಂಟ್ ಕಡೆಯ ನಾಲ್ವರು ಹಾಗೂ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆವರೆಗೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಅಬ್ರಹಾಂ ಒಪ್ಪಂದಕ್ಕೆ 'NO' ಎಂದ ಪಾಕಿಸ್ತಾನ, ಟ್ರಂಪ್ ರಾಜತಾಂತ್ರಿಕ ಯತ್ನಕ್ಕೆ ಹಿನ್ನೆಡೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ನನಗೆ 'CM ವಿಜಯ್' ಕಂಡ್ರೆ ಅಸೂಯೆ: ಸಾರ್ವಜನಿಕವಾಗಿ ಸತ್ಯ ಒಪ್ಪಿಕೊಂಡ ಆಂಧ್ರ DCM ಪವನ್ ಕಲ್ಯಾಣ್!

SCROLL FOR NEXT