ರೂಬಿ ಹಾಗೂ ಸುರೇಂದ್ರ ಶರ್ಮಾ 
ದೇಶ

ಆಗ್ರಾ: ಸೋನಂ, ಸಿಯಾ ಆಯ್ತು, ಈಗ ರೂಬಿ; ಪತಿಯನ್ನು ಕೊಂದು, ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತು ಹಾಕಿದ್ದ ಮಹಿಳೆಯ ಬಂಧನ!

ತನ್ನ ಪತಿಯನ್ನು ಕೊಂದು ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತುಹಾಕಿ, ಬಳಿಕ ಪತಿ ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ ಮಹಿಳೆಯನ್ನು ಆಗ್ರಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆಗ್ರಾ: ಇತ್ತೀಚಿಗೆ ಹೆಣ್ಣುಮಕ್ಕಳು ತಮ್ಮ ಗಂಡನನ್ನು ಭೀಕರವಾಗಿ ಕೊಲೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಪತಿಯನ್ನು ಕೊಂದು ನಾಟಕವಾಡಿದ ಹಂತಕಿಯರಾದ ಸೋನಂ, ಸಿಯಾ ಘಟನೆ ಮಾಸುವ ಮುನ್ನವೇ ಇದೀಗ ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಚ್ಚಿಬೀಳಿಸುವ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ ಪತಿಯನ್ನು ಕೊಂದು ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತುಹಾಕಿದ್ದ ಮಹಿಳೆಯನ್ನು ಆಗ್ರಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪತಿ ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತು ಹಾಕಿದ್ದ ಮಹಿಳೆ, ಬಳಿಕ ತನ್ನ ಪತಿ ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ ಘಟನೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ರೇಣುಕಾ ಧಾಮ್ ಕಾಲೋನಿಯಲ್ಲಿರುವ ಮನೆಯಲ್ಲಿ ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದ ಸುರೇಂದ್ರ ಶರ್ಮಾ(45) ಅವರ ಮೃತದೇಹವನ್ನು ಪೊಲೀಸರು ಶೌಚಾಲಯದ ನೆಲವನ್ನು ಅಗೆದು ಪತ್ತೆ ಮಾಡಿದ್ದಾರೆ.

ಶರ್ಮಾ ಅವರನ್ನು ಅವರ ಪತ್ನಿ ರೂಬಿ ಶರ್ಮಾ ಕೊಲೆ ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಮಿಷಾ ತಿಳಿಸಿದ್ದಾರೆ. ಅಪರಾಧವನ್ನು ಮರೆಮಾಚಲು ಅವರು ಸ್ನಾನಗೃಹದ ನೆಲದ ಕೆಳಗೆ ಶವವನ್ನು ಹೂತುಹಾಕಿದರು ಮತ್ತು ನಂತರ ಅದನ್ನು ಕಾಂಕ್ರೀಟ್‌ನಿಂದ ಮುಚ್ಚಿದ್ದರು ಎಂದು ಅವರು ಹೇಳಿದ್ದಾರೆ.

ರೂಬಿ ಶರ್ಮಾ ತಮ್ಮ ಪತಿಯ ನಾಪತ್ತೆಯ ಬಗ್ಗೆ ದೂರು ನೀಡಿದ ನಂತರ, ಪೊಲೀಸರು ಆಕೆಯನ್ನು ಪ್ರಶ್ನಿಸಿದ್ದು, ತನಿಖೆಯ ಸಮಯದಲ್ಲಿ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಹಾಗೂ ಕೊಲೆಗೆ ಬಳಸಿದ ವಿಧಾನ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!