ಚಲಿಸುತ್ತಿರುವ ರೈಲಿನಲ್ಲಿ ಪೂಜೆ ಮಾಡಿದ ಪ್ರಯಾಣಿಕರು 
ದೇಶ

ಹನಿಮೂನ್ ಆಯ್ತು, ಈಗ ರೈಲಿನಲ್ಲೇ ಪೂಜೆ-ಪುನಸ್ಕಾರ; Video ವೈರಲ್, ಇಲಾಖೆ ಸ್ಪಷ್ಟನೆ! ಏನಿದು ಸಲೂನ್ ಕೋಚ್?

ರೈಲು ಬೋಗಿಯ ನೆಲದ ಮೇಲೆ ಪೂಜಾರಿ ಕುಳಿತು ಪೂಜೆ ನಡೆಸುತ್ತಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಉಡುಪು ಧರಿಸಿದ್ದ ಹಲವಾರು ಭಕ್ತರು ಪೂಜೆಯಲ್ಲಿ ಭಾಗವಹಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ನವದೆಹಲಿ: ರೈಲಿನ ಬೋಗಿಯನ್ನು ಹನಿಮೂನ್ ಕೊಠಡಿಯಂತೆ ಸಿಂಗರಿಸಿದ್ದ ವಿಡಿಯೋ ವೈರಲ್ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹುದೇ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಚಲಿಸುತ್ತಿದ್ದ ರೈಲಿನೊಳಗೆ ಧಾರ್ಮಿಕ ಪೂಜೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲು ಬೋಗಿಗಳಲ್ಲಿ ಇಂತಹ ಧಾರ್ಮಿಕ ವಿಧಿವಿಧಾನಗಳಿಗೆ ಅನುಮತಿ ಇದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎಕ್ಸ್ (X)ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ರೈಲು ಬೋಗಿಯ ನೆಲದ ಮೇಲೆ ಪೂಜಾರಿ ಕುಳಿತು ಪೂಜೆ ನಡೆಸುತ್ತಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಉಡುಪು ಧರಿಸಿದ್ದ ಹಲವಾರು ಭಕ್ತರು ಪೂಜೆಯಲ್ಲಿ ಭಾಗವಹಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ರೈಲ್ವೇ ಇಲಾಖೆ ಸ್ಪಷ್ಟನೆ

ಇನ್ನು ಈ ವಿಡಿಯೊ ವೈರಲ್ ಆದ ಬಳಿಕ ಉತ್ತರ ರೈಲ್ವೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ಈ ಪೂಜೆ ಸಾಮಾನ್ಯ ಪ್ರಯಾಣಿಕರು ಪ್ರಯಾಣಿಸುವ ಬೋಗಿಯಲ್ಲಿ ನಡೆದಿಲ್ಲ. ಬದಲಾಗಿ, ಖಾಸಗಿಯಾಗಿ ಬುಕ್ ಮಾಡಲಾಗಿದ್ದ ವಿಶೇಷ ಸಲೂನ್ ಕೋಚ್‌ನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದೆ.

ಉತ್ತರ ರೈಲ್ವೆಯ ಪ್ರಕಾರ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಮೂಲಕ ಖಾಸಗಿಯವರು ಈ ಸಲೂನ್ ಕೋಚ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಮುಂಗಡ ಬುಕ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೋಚ್‌ನಲ್ಲಿ ಪೂಜೆ ನಡೆಸಲಾಗಿದೆ ಎಂದು ಹೇಳಿದೆ.

ಉತ್ತರ ರೈಲ್ವೆ ನೀಡಿರುವ ಮಾಹಿತಿಯಂತೆ, ಈ ಸಲೂನ್ ಕೋಚ್ ಅನ್ನು ಜುಲೈ 8ರಂದು ಐಆರ್‌ಸಿಟಿಸಿ ಮೂಲಕ ಬುಕ್ ಮಾಡಲಾಗಿತ್ತು.

ವಾಣಿಜ್ಯ ಬುಕ್ಕಿಂಗ್‌ಗಾಗಿ 3,08,580 ಮುಂಗಡವಾಗಿ ಪಾವತಿಸಲಾಗಿತ್ತು. ಈ ವಿಶೇಷ ಕೋಚ್ ಅನ್ನು ಜುಲೈ 10ರಂದು ದೆಹಲಿ (ಎನ್‌ಡಿಎಲ್‌ಎಸ್)ಯಿಂದ ಮುಂಬೈ ಬಾಂದ್ರಾ ಟರ್ಮಿನಸ್ (ಬಿಡಿಟಿಎಸ್)ಗೆ ಏಕಮುಖ ಪ್ರಯಾಣ ನಡೆಸಿದ 12926 ಪಶ್ಚಿಮ ಎಕ್ಸ್‌ಪ್ರೆಸ್ ರೈಲಿಗೆ ಜೋಡಿಸುವಂತೆ ನಿಗದಿಪಡಿಸಲಾಗಿತ್ತು ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.

ರೈಲು ಬೋಗಿಯೊಳಗಿನ ಪೂಜೆಯ ವಿಡಿಯೊ ವೈರಲ್ ಆದ ಬಳಿಕ ಉಂಟಾದ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ಈ ಸ್ಪಷ್ಟನೆ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟಕ್ಕೂ ಏನಿದು ಸಲೂನ್ ಕೋಚ್?

ಸಲೂನ್ ಕೋಚ್ ಎನ್ನುವುದು ಸಾಮಾನ್ಯ ಬೋಗಿಯಲ್ಲ. ಇದು ಉನ್ನತ ಅಧಿಕಾರಿಗಳು, ಗಣ್ಯರು ಹಾಗೂ ವಿಶೇಷ ಅತಿಥಿಗಳ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಐಷಾರಾಮಿ ಖಾಸಗಿ ರೈಲು ಬೋಗಿಯಾಗಿದೆ. ನಿಗದಿತ ಶುಲ್ಕ ಪಾವತಿಸಿ ಖಾಸಗಿ ಬುಕ್ಕಿಂಗ್ ಮೂಲಕವೂ ಇಂತಹ ಕೋಚ್‌ಗಳನ್ನು ಬಳಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!