ಸಾಂದರ್ಭಿಕ ಚಿತ್ರ 
ದೇಶ

ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ: ಮೆಟಾ, ಎಕ್ಸ್, ಗೂಗಲ್, ಸ್ನ್ಯಾಪ್‌ಚಾಟ್‌ಗೆ ಸಂಸದೀಯ ಸಮಿತಿ ಸಮನ್ಸ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ವಿಷಯಗಳ ಕುರಿತು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಕ್ರೋಢೀಕರಿಸಲು ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ವಿಶೇಷವಾಗಿ ಇನ್‌ಸ್ಟಾಗ್ರಾಮ್ ಅನ್ನು ವ್ಯಾಪಕವಾಗಿ ಬಳಸಿಕೊಂಡ ಕೆಲವು ದಿನಗಳ ನಂತರ ಈ ಸಭೆ ಕರೆಯಲಾಗಿದೆ.

ನವದೆಹಲಿ: ಆಗಸ್ಟ್ 3 ರಂದು ಸಾಮಾಜಿಕ ಮತ್ತು ಡಿಜಿಟಲ್ ವೇದಿಕೆಗಳ ನಿಯಂತ್ರಣದ ಕುರಿತು ಚರ್ಚಿಸಲು ಸಂಸದೀಯ ಸಮಿತಿಯು ಮೆಟಾ, ಗೂಗಲ್, ಎಕ್ಸ್ ಮತ್ತು ಸ್ನ್ಯಾಪ್‌ಚಾಟ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (MeitY), ಗೃಹ ಸಚಿವಾಲಯದ ಅಧಿಕಾರಿಗಳ ಸಭೆಗೆ ಆಗಮಿಸುವಂತೆ ಸಮನ್ಸ್ ನೀಡಿದೆ.

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ವಿಷಯಗಳ ಕುರಿತು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಕ್ರೋಢೀಕರಿಸಲು ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು, ವಿಶೇಷವಾಗಿ ಇನ್‌ಸ್ಟಾಗ್ರಾಮ್ ಅನ್ನು ವ್ಯಾಪಕವಾಗಿ ಬಳಸಿಕೊಂಡ ಕೆಲವು ದಿನಗಳ ನಂತರ ಈ ಸಭೆ ಕರೆಯಲಾಗಿದೆ.

ಸರ್ಕಾರ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡ ನಂತರ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 36 ದಿನಗಳ ಸಿಜೆಪಿ ಪ್ರತಿಭಟನೆ ಶನಿವಾರ ಕೊನೆಗೊಂಡಿತು.

ಮಂಗಳವಾರ ಹೊರಡಿಸಲಾದ ನೋಟಿಸ್ ಪ್ರಕಾರ, ಕಾರ್ಯಸೂಚಿಯಲ್ಲಿ"(i) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, (ii) ಗೃಹ ವ್ಯವಹಾರ ಸಚಿವಾಲಯ; (iii) ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳು - ಸ್ನ್ಯಾಪ್‌ಚಾಟ್, ಗೂಗಲ್, ಎಕ್ಸ್ (ಹಿಂದೆ ಟ್ವಿಟರ್), ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್) ಪ್ರತಿನಿಧಿಗಳು 'ಸಾಮಾಜಿಕ ಮತ್ತು ಡಿಜಿಟಲ್ ವೇದಿಕೆಗಳು ಮತ್ತು ಅವುಗಳ ನಿಯಂತ್ರಣ' ವಿಷಯದ ಕುರಿತು ವಿವರಣೆ ಒಳಗೊಂಡಿದೆ."

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಬಳಕೆದಾರರ ಗೌಪ್ಯತೆಯನ್ನು ಹೇಗೆ ರಕ್ಷಿಸುತ್ತಾರೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅವರ ಕೊಡುಗೆ ಏನು ಎಂಬುದನ್ನು ವಿವರಿಸುವಂತೆ ಸಮಿತಿಯು ಕಂಪನಿಗಳನ್ನು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

"ಆಗಸ್ಟ್ 3, 2026 ರಂದು ಸಂಜೆ 4 ಗಂಟೆಗೆ ಸಭೆಗೆ ಹಾಜರಾಗುವಂತೆ, ನಮ್ಮ ಐಟಿ ಮತ್ತು ಸಂವಹನದ ಸಂಸದೀಯ ಸಮಿತಿಯು ಮೆಟಾ (ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್), ಎಕ್ಸ್ (ಟ್ವಿಟರ್), ಸ್ನ್ಯಾಪ್‌ಚಾಟ್ ಮತ್ತು ಗೂಗಲ್‌ಗೆ ಸಮನ್ಸ್ ನೀಡಿದೆ" ಎಂದು ದುಬೆ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ