ಸೌರವ್ ದಾಸ್ - ಕಂಗನಾ - ಹೃತಿಕ್ ರೋಷನ್ 
ದೇಶ

'ನಾನು ಯಂಗ್ ಹೃತಿಕ್ ರೋಷನ್ ತರಹ ಕಾಣುತ್ತೇನೆ ಅಂತ...': ಕಂಗನಾಗೆ CJP ವಕ್ತಾರ ಸೌರವ್ ದಾಸ್ ತಪರಾಕಿ!

Gen-Zಗಳನ್ನು "ಜನರೇಷನ್ ಗಟರ್" ಎಂದು ಟೀಕಿಸಿದ್ದ ಬಿಜೆಪಿ ಸಂಸದೆ ಕಂಗನಾ ಹಾಗೂ ಸಿಜೆಪಿ ವಕ್ತಾರ ಸೌರವ್ ದಾಸ್ ನಡುವಿನ ವಾಕ್ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ: ಇತ್ತೀಚಿಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಮುಗಿದಿರಬಹುದು, ಆದರೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಮತ್ತು ಸಿಜೆಪಿ ವಕ್ತಾರ ಸೌರವ್ ದಾಸ್ ನಡುವಿನ ಮಾತಿನ ಚಕಮಕಿ ಮತ್ತಷ್ಟು ತೀವ್ರವಾಗಿದೆ.

Gen-Zಗಳನ್ನು "ಜನರೇಷನ್ ಗಟರ್" ಎಂದು ಟೀಕಿಸಿದ್ದ ಬಿಜೆಪಿ ಸಂಸದೆ ಕಂಗನಾ ಹಾಗೂ ಸಿಜೆಪಿ ವಕ್ತಾರ ಸೌರವ್ ದಾಸ್ ನಡುವಿನ ವಾಕ್ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸೌರವ್ ದಾಸ್ ಒಬ್ಬ "ನಿಷ್ಪ್ರಯೋಜಕ" ಮತ್ತು "ನಿರುದ್ಯೋಗಿ" ಎಂದು ಕರೆದ ಕಂಗನಾಗೆ ಸಿಜೆಪಿ ವಕ್ತಾರ ನೀಡಿರುವ ತಮಾಷೆಯ ಉತ್ತರವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ದಿ ಮೋಜೊ ಸ್ಟೋರಿಯಲ್ಲಿ ಬರ್ಖಾ ದತ್ ಅವರೊಂದಿಗೆ ಮಾತನಾಡಿದ ಸೌರವ್ ದಾಸ್, ನಟಿಯ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ ಕಂಗನಾ ಅವರು ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಆಶ್ಚರ್ಯ ತಂದಿದೆ. ನನ್ನ ಸ್ನೇಹಿತರೊಬ್ಬರು ಮೆಸೇಜ್ ಮಾಡಿ, 'ನೀನು ಯುವ ಹೃತಿಕ್ ರೋಷನ್ ತರ ಕಾಣಿಸುತ್ತೀಯಾ, ಬಹುಶಃ ಅದಕ್ಕೆ ಕಂಗನಾ ನಿನ್ನ ಬೆನ್ನಿಗೆ ಬಿದ್ದಿರಬಹುದು ಎಂದು ರೇಗಿಸಿದರು. ಸ್ನೇಹಿತರ ಈ ಮಾತು ಕೇಳಿ ನನಗೆ ನಗು ಬಂತು ಎಂದು ತಮಾಷೆಯಾಗಿ ಹೇಳಿದ್ದಾರೆ.

ಈ ಮೂಲಕ ಈ ಹಿಂದೆ ಬಾಲಿವುಡ್​ನಲ್ಲಿ ಹೃತಿಕ್​ ಮತ್ತು ಕಂಗನಾ ಅವರ ನಡುವೆ ಇದ್ದಂತಹ ಹಳೆಯ ವಿವಾದವನ್ನು ಪರೋಕ್ಷವಾಗಿ ನೆನಪಿಸುವಂತೆ ಸೌರವ್ ದಾಸ್ ಮಾತನಾಡಿದ್ದಾರೆ.

ಕಂಗನಾ ವಿರುದ್ಧ ತಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿರುವ ಸೌರವ್​ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ವೈಯಕ್ತಕ ನಿಂದನೆಗಳ ಮೂಲಕ ಅಲ್ಲ, ಬದಲಿಗೆ ಮಾತುಕತೆ ಮತ್ತು ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

ಬಿಜೆಪಿಗೆ ಆಘಾತ! ಉಪಸಭಾಪತಿ ಎಂ.ಕೆ ಪ್ರಾಣೇಶ್ ಆಯ್ಕೆ ಅಸಿಂಧು; ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿಜಯಭೇರಿ

'ನಾನು ಫಿಟ್ ಆಗಿರಲಿಲ್ಲ, ನನ್ನ ತೂಕ 100 KG ಆಗಿತ್ತು; ಆದ್ರೆ ಥಾಯ್ಲೆಂಡ್​ ಪ್ರವಾಸ ಎಲ್ಲವನ್ನು ಬದಲಿಸಿತು': ನಟಿ ವಿಸ್ಮಯ ಮೋಹನ್​ಲಾಲ್​

ಕಾವೇರಿ ಜಲ ವಿವಾದ: ತಮಿಳುನಾಡು CM Vijay ಭೇಟಿಗೆ ಬ್ರೇಕ್! ಎಲ್ಲ ಅಂಕಿ-ಅಂಶ ನ್ಯಾಯಾಲಯದಲ್ಲಿದೆ, ಮೇಲ್ಮನವಿ ಸಲ್ಲಿಸಿದ್ದೇವೆ; Video

ಬೆಳ್ಳಂಬೆಳಗ್ಗೆ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಬೆಚ್ಚಿಬಿದ್ದ ಕುಂದಾಪುರ