ಬಂಗಾಳ ಸಿಎಂ ಸುವೇಂದು ಅಧಿಕಾರಿ 
ದೇಶ

ಬಂಗಾಳದಲ್ಲಿ ವಂದೇ ಮಾತರಂ ಕಡ್ಡಾಯ: ಮುಸ್ಲಿಂ ಲಾ ಬೋರ್ಡ್ ತೀವ್ರ ವಿರೋಧ; ಆದೇಶ ಹಿಂಪಡೆಯುವಂತೆ ಆಗ್ರಹ

ವಂದೇ ಮಾತರಂ ಕಡ್ಡಾಯ ಮುಸ್ಲಿಮರ ಸಾಂವಿಧಾನಿಕ ಸ್ವಾತಂತ್ರ್ಯದ "ನೇರ ಉಲ್ಲಂಘನೆ" ಎಂದಿರುವ ಲಾ ಬೋರ್ಡ್, ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಅದರಿಂದ ವಿನಾಯಿತಿ ನೀಡಬೇಕು ಅಥವಾ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಸರ್ಕಾರವು ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದ್ದು, ಇದಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ ಮತ್ತು ಮಂಗಳವಾರ ಈ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದೆ.

ವಂದೇ ಮಾತರಂ ಕಡ್ಡಾಯ ಮುಸ್ಲಿಮರ ಸಾಂವಿಧಾನಿಕ ಸ್ವಾತಂತ್ರ್ಯದ "ನೇರ ಉಲ್ಲಂಘನೆ" ಎಂದಿರುವ ಲಾ ಬೋರ್ಡ್, ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಅದರಿಂದ ವಿನಾಯಿತಿ ನೀಡಬೇಕು ಅಥವಾ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ಈ ನಿರ್ಧಾರವು ಸಂವಿಧಾನಕ್ಕೆ ಮಾತ್ರವಲ್ಲದೆ ಭಾರತದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಹೇಳಿದೆ.

ಕಳೆದ ತಿಂಗಳು, ಪಶ್ಚಿಮ ಬಂಗಾಳ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೆಳಗಿನ ಸಭೆಗಳಲ್ಲಿ 'ವಂದೇ ಮಾತರಂ' ಹಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಿದೆ.

ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮದರಸಾಗಳಲ್ಲೂ ಪ್ರಾರ್ಥನೆ ವೇಳೆ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DCM ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಶಾಕ್! ಒಬ್ಬರಿಗೆ ಮಾತ್ರ ಉಪ ಮುಖ್ಯಮಂತ್ರಿ ಸ್ಥಾನ; ಯಾರೂ ಆ ಪ್ರಭಾವಿ ನಾಯಕ?

ಸಿನಿಮೀಯ ಶೈಲಿಯಲ್ಲಿ ಮಾಜಿ MLC ಕಿಡ್ನ್ಯಾಪ್: 3 ಕೋಟಿ ರೂ ಗೆ ಡಿಮ್ಯಾಂಡ್; ದುಷ್ಟರಿಂದ ದಯಾನಂದ ರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

'Delayed, not denied': ಇಷ್ಟು ವರ್ಷ ಪಟ್ಟ ಪರಿಶ್ರಮ, ಬದ್ಧತೆಗೆ ದೊರೆತ ಪ್ರತಿಫಲ- ನಿಯೋಜಿತ ಸಿಎಂ ಡಿ.ಕೆ ಶಿವಕುಮಾರ್

ವಿಧಾನಸೌಧದಲ್ಲಿರುವ CM ಕಚೇರಿಗೆ ಜ್ಯೋತಿಷಿಗಳ ಭೇಟಿ; ಕುರ್ಚಿ ದಿಕ್ಕು ಬದಲು, ಅಜ್ಜಯ್ಯನ ಫೋಟೋ ಅಳವಡಿಕೆ!

ಸ್ಪೀಕರ್ ಯುಟಿ ಖಾದರ್ ರಿಂದ ಸಿಬ್ಬಂದಿಗೆ ಔತಣಕೂಟ; ಪಕ್ಕಾ ಆಯ್ತಾ ಸಚಿವ ಸ್ಥಾನ?

SCROLL FOR NEXT