ಅಖಿಲೇಶ್ ಯಾದವ್-ಯೋಗಿ ಆದಿತ್ಯನಾಥ 
ದೇಶ

ಸಾಮಾಜಿಕ ಮಾಧ್ಯಮಗಳಲ್ಲಿ ಅಖಿಲೇಶ್ ಯಾದವ್ ಪುತ್ರಿ ವಿರುದ್ಧ ಅಶ್ಲೀಲ ಕಾಮೆಂಟ್‌: ಸಿಎಂ ಯೋಗಿ ಖಂಡನೆ

"ಒಬ್ಬ ಮಗಳು ಎಲ್ಲರಿಗೂ ಮಗಳೇ. ಹಳ್ಳಿಯಲ್ಲಿರುವ ಮಗಳು ಎಲ್ಲರ ಮಗಳು ಮತ್ತು ಹಳ್ಳಿಯಲ್ಲಿರುವ ಸಹೋದರಿ ಎಲ್ಲರ ಸಹೋದರಿ ಎಂಬ ಮೌಲ್ಯಗಳೊಂದಿಗೆ ನಾವು ಬೆಳೆದಿದ್ದೇವೆ. ನಾವು ಎಂದಿಗೂ ಯಾವುದೇ ತಾರತಮ್ಯ ಮಾಡಿಲ್ಲ" ಎಂದು ಅವರು ಹೇಳಿದರು.

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಅವಹೇಳನಕಾರಿ ಕಾಮೆಂಟ್‌ ಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಖಂಡಿಸಿದ್ದಾರೆ ಮತ್ತು ಯಾವುದೇ ಪುತ್ರಿಯ ವಿರುದ್ಧ ಅಂತಹ ಕಾಮೆಂಟ್‌ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇಂದು ಅಜಮ್‌ಗಢದಲ್ಲಿ 955 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 39 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಅಖಿಲೇಶ್ ಯಾದವ್ ಪುತ್ರಿ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದರು.

"ಇತ್ತೀಚೆಗೆ ಕೆಲವರು ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದ ತಕ್ಷಣ, ಪೊಲೀಸರಿಗೆ, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೇಳಿದೆ" ಎಂದು ಅವರು ಹೇಳಿದರು.

ಯಾರೂ ಸಹ ಹೆಣ್ಣುಮಕ್ಕಳನ್ನು ಗುರಿಯಾಗಿಸಬಾರದು ಮತ್ತು ಸಮಾಜವು ಸಾರ್ವಜನಿಕ ಚರ್ಚೆಯಲ್ಲಿ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

"ಒಬ್ಬ ಮಗಳು ಎಲ್ಲರಿಗೂ ಮಗಳೇ. ಹಳ್ಳಿಯಲ್ಲಿರುವ ಮಗಳು ಎಲ್ಲರ ಮಗಳು ಮತ್ತು ಹಳ್ಳಿಯಲ್ಲಿರುವ ಸಹೋದರಿ ಎಲ್ಲರ ಸಹೋದರಿ ಎಂಬ ಮೌಲ್ಯಗಳೊಂದಿಗೆ ನಾವು ಬೆಳೆದಿದ್ದೇವೆ. ನಾವು ಎಂದಿಗೂ ಯಾವುದೇ ತಾರತಮ್ಯ ಮಾಡಿಲ್ಲ" ಎಂದು ಅವರು ಹೇಳಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥರನ್ನು ಟೀಕಿಸಿದ ಆದಿತ್ಯನಾಥ್, "ಅಖಿಲೇಶ್ ಜಿ, ನೀವು ಇತರರಿಗೆ ಸಲಹೆ ನೀಡುತ್ತೀರಿ. ಆದರೆ ನಿಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಸರಿಯಾದ ಭಾಷೆಯನ್ನು ಸಂಯಮದಿಂದ ಬಳಸುವಂತೆ ಸಲಹೆ ನೀಡಿ" ಎಂದು ತಿರುಗೇಟು ನೀಡಿದರು.

ಜನರು ಇತರರ ಬಗ್ಗೆ ಹೇಳಿಕೆ ನೀಡುವ ಮೊದಲು ಯೋಚಿಸಬೇಕು ಮತ್ತು ಮಹಿಳೆಯರು, ವೃದ್ಧರು, ಮೃತ ವ್ಯಕ್ತಿಗಳು ಮತ್ತು ಹಿರಿಯ ನಾಯಕರ ವಿರುದ್ಧ ಯಾವ ರೀತಿಯ ಭಾಷೆಯನ್ನು ಬಳಸಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದರು.

ಸಾಮಾಜಿಕ ಮಾಧ್ಯಮದಲ್ಲಿ ಅಖಿಲೇಶ್ ಯಾದವ್ ಅವರ ಪುತ್ರಿ ಆದಿತಿ ಯಾದವ್ ಅವರನ್ನು ಟ್ರೋಲಿಂಗ್ ಮಾಡಲಾಗಿದೆ ಮತ್ತು ಅವರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಲಾಗಿದ್ದು, ಇದರ ವಿರುದ್ಧ ಸಮಾಜವಾದಿ ಪಕ್ಷ ಪೊಲೀಸರಿಗೆ ದೂರು ನೀಡಿದೆ.

ಕಾನ್ಪುರ ಸೇರಿದಂತೆ ಕೆಲವು ಜಿಲ್ಲೆಗಳ ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಚ್ಚಿನ ನಡುವೆಯೇ ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ! ಹಾರಂಗಿ ಭರ್ತಿ, Video

ಏರ್ಪೋರ್ಟ್ to ಸೆಮಿಕಂಡಕ್ಟರ್‌, ಆಂಧ್ರಕ್ಕೆ ಬಂಪರ್ ಗಿಫ್ಟ್: ವಿಮಾನ ನಿಲ್ದಾಣ ಉದ್ಘಾಟನೆ ಸೇರಿ 17,900 ಕೋಟಿ ರೂ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ನೀವು ಮಾಡಿದರೆ ರಾಜತಂತ್ರ? ಮತಗಳ ಮೈಲೇಜ್‌ಗಾಗಿ ತಾಯಿ ಹೆಸರನ್ನು ಬಳಸುವುದು ಪ್ರೀತಿಯಲ್ಲ, ಕ್ರೂರ: PM ಮೋದಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿಗರೇ ಎಚ್ಚರ! ಎಲ್ಲೆಂದರಲ್ಲಿ ಕಸ ಸುರಿಯುವ ವಾಹನಗಳನ್ನು ಮುಲಾಜಿಲ್ಲದೇ ಸೀಜ್ ಮಾಡಿ; ಪೊಲೀಸರಿಗೆ CM ಡಿಕೆಶಿ ಖಡಕ್ ಸೂಚನೆ

NSA ಅಜಿತ್ ದೋವಲ್ ಗೆ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ಅಮಿತ್ ಶಾ