ದೇಶ

ಪಂಚರಾಜ್ಯ ಚುನಾವಣೆಗೆ ಮೊದಲೇ ಬಿಜೆಪಿಗೆ ಭಾರೀ ಹೊಡೆತ: ಅಸ್ಸಾಂ ಸಚಿವೆ ನಂದಿತಾ ಕಾಂಗ್ರೆಸ್ ಗೆ ಸೇರ್ಪಡೆ!

ನಂದಿತಾ ಗರ್ಲೋಸಾ ಅವರು ಈಗ ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್ ಸ್ಥಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.

ಗುವಾಹಟಿ: ಚುನಾವಣಾ ಪೂರ್ವ ರಾಜಕೀಯ ಬೆಳವಣಿಗೆಯಲ್ಲಿ, ಅಚ್ಚರಿಯ ಬೆಳವಣಿಗೆ ಎಂಬಂತೆ ಮುಂಬರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಟಿಕೆಟ್ ನಿರಾಕರಿಸಿದ ನಂತರ, ಅಸ್ಸಾಂ ಸರ್ಕಾರದ ಸಚಿವೆ ನಂದಿತಾ ಗರ್ಲೋಸಾ ಭಾನುವಾರ (ಮಾರ್ಚ್ 22) ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ನಂದಿತಾ ಗರ್ಲೋಸಾ ಅವರು ಈಗ ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್ ಸ್ಥಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ. ನಂದಿತಾ ಗರ್ಲೋಸಾ ಅವರು 2022 ರಿಂದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರದಲ್ಲಿ ವಿದ್ಯುತ್, ಸಹಕಾರ, ಗಣಿ, ಖನಿಜ, ಸ್ಥಳೀಯ ಮತ್ತು ಬುಡಕಟ್ಟು ನಂಬಿಕೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗಾರ್ಲೋಸಾ ಅವರು ಹಾಫ್ಲೋಂಗ್‌ನಲ್ಲಿ ಪಕ್ಷ ಸೇರುತ್ತಿರುವ ಫೋಟೋವನ್ನು ಅಸ್ಸಾಂ ಕಾಂಗ್ರೆಸ್ ಮಾಧ್ಯಮ ವಿಭಾಗ ಶೇರ್ ಮಾಡಿದೆ. ನಂದಿತಾ ಗರ್ಲೋಸಾ ಅವರು ಕಾಂಗ್ರೆಸ್ ಸೇರಿದ್ದಾರೆ ಎಂಬುದನ್ನು ಘೋಷಣೆ ಮಾಡಲು ನಮಗೆ ಸಂತೋಷವಾಗಿದೆ. ಅವರು ಕಳೆದ ಐದು ವರ್ಷಗಳಿಂದ ದಿಮಾ ಹಸಾವೊ ಜನರ ಧ್ವನಿಯಾಗಿದ್ದಾರೆ. ಯಾವಾಗಲೂ ತಮ್ಮ ನಂಬಿಕೆ ಮತ್ತು ತತ್ವಗಳಿಗಾಗಿ ನಿಂತವರು ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ರಾಜ್ಯ ಕ್ರೀಡಾ ಮತ್ತು ಯುವ ಕಲ್ಯಾಣ ಖಾತೆ ಸಚಿವರಾಗಿದ್ದ ನಂದಿತಾ ಬಿಜೆಪಿಯಲ್ಲಿ ಇದಕ್ಕಾಗಿಯೇ ಬೆಲೆ ತೆರಬೇಕಾಯಿತು. ಹಿಮಂತ ಬಿಸ್ವಾ ಶರ್ಮಾ ಬುಡಕಟ್ಟು ಜನಾಂಗದವರ ಭೂಮಿಯನ್ನು ದೊಡ್ಡ ನಿಗಮಗಳಿಗೆ ಮಾರಾಟ ಮಾಡುವಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಇದೇ ವೇಳೆ ಟೀಕಿಸಿದೆ.

ಕಾಂಗ್ರೆಸ್ ಈ ಹಿಂದೆ ತನ್ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಲ್ಯಾಂಗ್ಥಾಸಾ ಅವರನ್ನು ಹಫ್ಲಾಂಗ್ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಅವರು ಇದೀಗ ಗಾರ್ಲೋಸಾ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ನಂದಿತಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಫ್ಲಾಂಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಮುಂಬರುವ ಚುನಾವಣೆಗೆ ಬಿಜೆಪಿ ಇವರ ಬದಲು ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ರೂಪಾಲಿ ಲ್ಯಾಂಗ್ಥಾಸಾ ಅವರನ್ನು ಆಯ್ಕೆ ಮಾಡಿದೆ.

ಮುಖ್ಯಮಂತ್ರಿ ಹಿಮಂತ ಶರ್ಮಾ ಭಾನುವಾರ ಹಾಫ್ಲೋಂಗ್‌ನಲ್ಲಿರುವ ಗಾರ್ಲೋಸಾ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ, ಈ ಮಾತುಕತೆಯ ಫಲಿತಾಂಶದ ಬಗ್ಗೆ ಶರ್ಮಾ ಮತ್ತು ಸಚಿವೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಕ್ಕೆ ಸೆಡ್ಡು: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪ್ರಮುಖ ಹೆಜ್ಜೆ; ಹೊಸ ಪ್ರಾಧಿಕಾರ ರಚನೆ!

ಭಾರತದ ಮೊದಲ ಬುಲೆಟ್ ರೈಲಿನ 'ಫಸ್ಟ್ ಲುಕ್' ರಿಲೀಸ್‌: ಸಂಚಾರ ಯಾವಾಗಿಂದ ಆರಂಭ?

ಇರಾನ್‌ನ ಪರಿಷ್ಕೃತ 14 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಸಲ್ಲಿಸಿದ ಪಾಕಿಸ್ತಾನ; ಒಪ್ಪಿಕೊಳ್ಳುತ್ತಾರಾ ಟ್ರಂಪ್?

'ಅಮ್ಮ ಕ್ಯಾಂಟೀನ್‌' ಆಧುನೀಕರಿಸಲು ತಮಿಳುನಾಡು ಸಿಎಂ ವಿಜಯ್ ಆದೇಶ; ಅಚ್ಚರಿ ಮೂಡಿಸಿದ ದಳಪತಿ ನಡೆ

ಮ್ಯಾಜಿಕ್ ವ್ಯಾನ್-ಟ್ರಕ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 10 ಮಂದಿ ಸಾವು; ಪರಿಹಾರ ಘೋಷಿಸಿದ ಪ್ರಧಾನಿ

SCROLL FOR NEXT