ತಂದೆ ಮಗಳ ಮೇಲೆ ಹರಿದ ರೋಡ್ ರೋಲರ್ 
ದೇಶ

ಭೀಕರ: ಸ್ಕೂಟರ್ ನಿಂದ ಬಿದ್ದ ತಂದೆ-ಮಗಳ ಮೇಲೆ ಹರಿದ ರೋಡ್ ರೋಲರ್! Video

ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿತ್ತು, ರಸ್ತೆ ಮರುಹಾಸು ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಆಗಷ್ಟೇ ಹಾಕಿದ್ದ ಟಾರಿನ ಮೇಲೆ ಸಾಗಿ ಅದನ್ನು ಸಮತಟ್ಟು ಮಾಡುತ್ತಿತ್ತು.

ಚಂಡೀಗಢ: ಪಂಜಾಬ್‌ನ ಬಠಿಂಡಾ ಜಿಲ್ಲೆಯ ಗಣೇಶ್ ಬಸ್ತಿ ಪ್ರದೇಶದ ಲೇನ್ ನಂಬರ್ 9ರಲ್ಲಿ ಸಂಭವಿಸಿದ ಭೀಕರ ರೋಡ್ ರೋಲರ್ ಅಪಘಾತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ನಿಯಂತ್ರಣ ತಪ್ಪಿ ದ್ವಿಚಕ್ರವಾಹನದಿಂದ ಬಿದ್ದ ತಂದೆ-ಮಗಳ ಮೇಲೆ ರೋಡ್ ರೋಲರ್ ಹರಿದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಇಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿತ್ತು, ರಸ್ತೆ ಮರುಹಾಸು ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಆಗಷ್ಟೇ ಹಾಕಿದ್ದ ಟಾರಿನ ಮೇಲೆ ಸಾಗಿ ಅದನ್ನು ಸಮತಟ್ಟು ಮಾಡುತ್ತಿತ್ತು.

ಈ ವೇಳೆ ಅದೇ ರಸ್ತೆಯಲ್ಲಿ ಬಂದ ದ್ವಿಚಕ್ರವಾಹನವೊಂದು ರೋಡ್ ರೋಲರ್ ಹಿಂಭಾಗದಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ದ್ವಿಚಕ್ರವಾಹನದಲ್ಲಿದ್ದ 9 ವರ್ಷದ ಮಗಳು ಮತ್ತು ಆಕೆಯ ತಂದೆ ಕೆಳಕ್ಕೆ ಬಿದ್ದಿದ್ದು, ಕೂಡಲೇ ಹಿಂದಿನಿಂದ ಬಂದ ರೋಡ್ ರೋಲರ್ ಅವರ ಮೇಲೆ ಹರಿದಿದೆ.

ಈ ಪೈಕಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ 9 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವ್ಯಾಪಕ ಆಕ್ರೋಶ

ಸ್ಥಳೀಯ ನಿವಾಸಿಗಳ ಆರೋಪದಂತೆ, ಕಾಮಗಾರಿ ಸ್ಥಳದಲ್ಲಿ ಯಾವುದೇ ಎಚ್ಚರಿಕೆ ಫಲಕಗಳು, ತಡೆಗೋಡೆಗಳು ಅಥವಾ ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಲಾಗಿರಲಿಲ್ಲ. ಪಾದಚಾರಿಗಳು ಮತ್ತು ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚು ಜನವಸತಿ ಇರುವ ನಿವಾಸಿ ಪ್ರದೇಶದಲ್ಲಿ ಭಾರಿ ಯಂತ್ರೋಪಕರಣ ಚಾಲಕ ಸಮರ್ಪಕ ಎಚ್ಚರಿಕೆ ವಹಿಸಿದ್ದಾನೆಯೇ ಎಂಬುದರ ಕುರಿತೂ ಪ್ರಶ್ನೆಗಳು ಕೇಳಿಬರುತ್ತಿವೆ.

ಈ ದುರಂತದ ಬಳಿಕ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುರಕ್ಷತಾ ಕ್ರಮಗಳ ಕೊರತೆಗೆ ಸಂಬಂಧಿಸಿದಂತೆ ನಾಗರಿಕ ಆಡಳಿತ ಮತ್ತು ಗುತ್ತಿಗೆದಾರರ ವಿರುದ್ಧ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ. ಘಟನೆಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

ಪೊಲೀಸ್ ತನಿಖೆ

ಅಪಘಾತದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಈ ದುರಂತಕ್ಕೆ ಕಾರಣವಾದ ಪರಿಸ್ಥಿತಿಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಂತೆಯೇ ರಸ್ತೆ ಕಾಮಗಾರಿ ಯೋಜನೆಯಲ್ಲಿ ಭಾಗವಹಿಸಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಅದ್ಧೂರಿಯಾಗಿ ನಡೆಯಲಿದೆ ಶರ್ಮಿಳಾ ಮಾಂಡ್ರೆ ಮದುವೆ; ದಿನಾಂಕ, ಸ್ಥಳ ಫಿಕ್ಸ್; ಗ್ಲಾಮರಸ್‌ ನಟಿಯ ಮ್ಯಾರೇಜ್ ಎಲ್ಲಿ ಗೊತ್ತಾ?

ನಟ ಪ್ರಕಾಶ್ ರೈಗೆ ಜಾಮೀನು ಮಂಜೂರು; ಬಂಧನ ಭೀತಿಯಿಂದ ಪಾರು!

ಬ್ಯಾಕ್ ಟು ಬ್ಯಾಕ್ ಸರಣಿ ಸೋಲು: ಕೋಚ್ Gautam Gambhir ರೆಕ್ಕೆಪುಕ್ಕ ಕಟ್? BCCI ಮಹತ್ವದ ರೀವ್ಯೂ ಮೀಟಿಂಗ್!

ರಾಕೆಟ್ ಮರು ಬಳಕೆ: SpaceX ಬಳಿಕ ಇದೀಗ ಹೊಸ ಮೈಲುಗಲ್ಲು ತಲುಪಿದ ಚೀನಾ!