ಹಿಮಂತ ಬಿಸ್ವಾ ಶರ್ಮಾ 
ದೇಶ

Assam: ಶಾಸಕಾಂಗ ಪಕ್ಷದ ನಾಯಕರಾಗಿ Himanta Biswa Sarma ಆಯ್ಕೆ; ಸತತ 2ನೇ ಬಾರಿಗೆ ಸಿಎಂ!

ಹಿಮಂತ ಶರ್ಮಾ ಅವರು ಹೊಸ ಸರ್ಕಾರದ ಮುಖ್ಯಮಂತ್ರಿಯಾಗಿ ನೇಮಕವಾಗಲು ದಾರಿ ಸುಗಮವಾಗಿದ್ದು, ಸತತ 2ನೇ ಬಾರಿಗೆ ಅಸ್ಸಾಂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭುವನೇಶ್ವರ: ಹಿಮಂತ ಬಿಸ್ವಾ ಶರ್ಮಾ ಅವರನ್ನು ಭಾನುವಾರ ಬಿಜೆಪಿ ವಿಧಾನಮಂಡಲ ಪಕ್ಷದ ನಾಯಕ ಹಾಗೂ ಎನ್‌ಡಿಎ ವಿಧಾನಮಂಡಲ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಈ ಮೂಲಕ ಹಿಮಂತ ಶರ್ಮಾ ಅವರು ಹೊಸ ಸರ್ಕಾರದ ಮುಖ್ಯಮಂತ್ರಿಯಾಗಿ ನೇಮಕವಾಗಲು ದಾರಿ ಸುಗಮವಾಗಿದ್ದು, ಸತತ 2ನೇ ಬಾರಿಗೆ ಅಸ್ಸಾಂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿಯ ಕೇಂದ್ರ ವೀಕ್ಷಕ ಜಗತ್ ಪ್ರಕಾಶ್ ನಡ್ಡಾ ಹಾಗೂ ಸಹ ವೀಕ್ಷಕ ನಯಾಬ್ ಸಿಂಗ್ ಸೈನಿ ಅವರು ಹಿಮಂತ ಬಿಸ್ವಾ ಶರ್ಮಾ ಅವರ ಆಯ್ಕೆ ಪ್ರಕ್ರಿಯೆಯ ವೇಳೆ ಉಪಸ್ಥಿತರಿದ್ದರು. ಆಯ್ಕೆಯಾದ ಬಳಿಕ ಸಂಕ್ಷಿಪ್ತವಾಗಿ ಮಾತನಾಡಿದ ಶರ್ಮಾ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಮೂರನೇ ಬಾರಿ ನಿರಂತರವಾಗಿ ಗೆಲುವು ನೀಡಿದ ಅಸ್ಸಾಂ ಜನತೆಗೆ ಧನ್ಯವಾದ ಅರ್ಪಿಸಿದರು.

'ಅಸ್ಸಾಂ ಅಭಿವೃದ್ಧಿಯನ್ನು ನಾವು ಊಹಿಸದ ಮಟ್ಟಕ್ಕೆ ಕೊಂಡೊಯ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಚುನಾವಣಾ ಫಲಿತಾಂಶಗಳು ಅಭಿವೃದ್ಧಿ ಕಾರ್ಯಗಳ ಪ್ರತಿಫಲವಾಗಿವೆ. ಬಿಜೆಪಿ, ಅಸೋಂ ಗಣ ಪರಿಷತ್ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಒಳಗೊಂಡ ಎನ್‌ಡಿಎಯ ಪ್ರಮುಖ ಗುರಿ ಅಸ್ಸಾಂನ ನಿರಂತರ ಅಭಿವೃದ್ಧಿಯಾಗಿರುತ್ತದೆ ಎಂದು ಅವರು ಹಿಮಂತಾ ಭರವಸೆ ನೀಡಿದರು

ಅಸ್ಸಾಂನಲ್ಲಿ ಪ್ರಸ್ತುತ ಶಾಂತಿ ನೆಲೆಸಲು ಕಾರಣವಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಎನ್‌ಡಿಎ ಪಕ್ಷಗಳ ನಾಯಕರು ಶೀಘ್ರದಲ್ಲೇ ಲೋಕಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿ ಶರ್ಮಾ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

ಇದು ಮುಖ್ಯಮಂತ್ರಿಯಾಗಿ ಅವರ ಸತತ ಎರಡನೇ ಅವಧಿಯಾಗಲಿದ್ದು, ಶರ್ಮಾ ಮೊದಲ ಬಾರಿಗೆ 2001ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು ಮತ್ತು ಅದರ ಬಳಿಕ ಒಂದೇ ಚುನಾವಣೆಯಲ್ಲೂ ಸೋತಿಲ್ಲ. ಮೇ 12ರಂದು ಶರ್ಮಾ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅದರಲ್ಲಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಗೊಗೋಯ್ ಸರ್ಕಾರದಲ್ಲಿ ಸಚಿವರಾಗಿದ್ದ ಶರ್ಮಾ

ಹಳೆಯ ಕಾಂಗ್ರೆಸ್ ಮುಖ್ಯಮಂತ್ರಿ Tarun Gogoi ಅವರ ಮೂರು ಅವಧಿಗಳಲ್ಲೂ (2001-16) ಹಿಮಂತ ಶರ್ಮಾ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಗೋಗೊಯಿ ಅವರ ಮೂರನೇ ಅವಧಿಯಲ್ಲಿ ನಾಯಕತ್ವದ ವಿಚಾರವಾಗಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು.

2015ರಲ್ಲಿ ಸರ್ಮಾ ಹಾಗೂ ಅವರಿಗೆ ಆಪ್ತರಾಗಿದ್ದ ಹಲವು ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರು. ಮುಂದಿನ ವರ್ಷ ಬಿಜೆಪಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರ ರಚಿಸಿತ್ತು. 24x7 ನಾಯಕ ಎಂದು ಕರೆಯಲ್ಪಡುವ ಶರ್ಮಾ ರಾಜಕೀಯ ತಂತ್ರಜ್ಞನಾಗಿ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ. ಈ ವರ್ಷದ ಅಸ್ಸಾಂ ಚುನಾವಣೆಯಲ್ಲೂ ಅವರ ಬಲಿಷ್ಠ ನಾಯಕತ್ವ ಮತ್ತೊಮ್ಮೆ ಪ್ರದರ್ಶನ ಕಂಡಿದ್ದು, ಎನ್‌ಡಿಎ 126 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'ಪ್ರಧಾನಿಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರಿ ಶಾಲೆಗಳ ಸುಧಾರಣೆಗೆ 'ಪಿಎಂ ಕೇರ್ಸ್ ಫಂಡ್' ಬಳಸಲಿ: ಅಭಿಜಿತ್ ದೀಪ್ಕೆ ಆಗ್ರಹ

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

Ind Vs SL: ಮಾನವ್ ಸುತಾರ್ ದಾಖಲೆ; 600ನೇ ಟೆಸ್ಟ್ ಪಂದ್ಯದ ಗೆದ್ದು ಸಂಭ್ರಮಿಸಿದ ಟೀಂ ಇಂಡಿಯಾ!