ತ್ರಿಶಾ ಕೃಷ್ಣನ್ 
ದೇಶ

The Love Is Always Louder: ವಿಜಯ್ ಸಿಎಂ ಆದ ಬೆನ್ನಲ್ಲೇ ಅಪ್ತೆ ತ್ರಿಶಾ ಕೃಷ್ಣನ್ ಪೋಸ್ಟ್!

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಿಂಚಿದ್ದ ತ್ರಿಶಾ ಸಂಭ್ರಮ, ಸಡಗರ ಭಾರೀ ಕುತೂಹಲ ಕ್ರಿಯೇಟ್ ಮಾಡಿತ್ತು. ಇದೀಗ ಹಾಕಿದ ಪೋಸ್ಟ್ ಮತ್ತೆ ಹಲವು ಅರ್ಥಗಳನ್ನು ಹುಟ್ಟುಹಾಕಿದೆ.

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಅದರ ಬೆನ್ನಲೇ ಅವರ ಆಪ್ತ ಸ್ನೇಹಿತೆಯಾಗಿರುವ ನಟಿ ತ್ರಿಶಾ ಕೃಷ್ಣನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿ ಕುರಿತು ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

The Love Is Always Louder ಎಂದು ಬರೆದುಕೊಂಡಿದ್ದಾರೆ. ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ವಿಜಯ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಧರಿಸಿದ್ದ ಸೀರೆಯಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ The Love Is Always Louder ಎಂದು ಬರೆದುಕೊಂಡಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಿಂಚಿದ್ದ ತ್ರಿಶಾ ಸಂಭ್ರಮ, ಸಡಗರ ಭಾರೀ ಕುತೂಹಲ ಕ್ರಿಯೇಟ್ ಮಾಡಿತ್ತು. ಇದೀಗ ಹಾಕಿದ ಪೋಸ್ಟ್ ಮತ್ತೆ ಹಲವು ಅರ್ಥಗಳನ್ನು ಹುಟ್ಟುಹಾಕಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ತ್ರಿಷಾ ಅವರು ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ್ದರು. ನೀಲಿ ಬಣ್ಣದ ರೇಷ್ಮೆ ಸೀರೆ ಧರಿಸಿ, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದರು.

ವಿಜಯ್‌ಗೆ ಶುಭಕೋರಿದ್ದ ತ್ರಿಶಾ, ಈ ಕ್ಷಣ ತುಂಬಾ ಹೆಮ್ಮೆ ಎನಿಸುತ್ತಿದೆ. ವಿಜಯ್ ಅವರಿಗೆ ಬೆಂಬಲಿಸಿದ ತಮಿಳುನಾಡಿನ ಜನತೆಗೂ ಅಭಿನಂದನೆ ಸಲ್ಲಿಸುತ್ತೇನೆʼ ಎಂದಿದ್ದರು. ವಿಜಯ್ ಹಾಗೂ ತ್ರಿಶಾ ಅವರು ಗಿಲ್ಲಿ, ತಿರುಪಾಚಿ, ಆತಿ, ಕುರುವಿ, ಲಿಯೋ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!