ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಮನೆಗೆ ಬಂದ ಇಬ್ಬರು ಕಾಂಗ್ರೆಸ್ ಶಾಸಕರು 
ದೇಶ

ಆಹ್ವಾನವಿಲ್ಲದೆ BSP ಮುಖ್ಯಸ್ಥೆ ಮಾಯಾವತಿ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು; ಹಿಂದಕ್ಕೆ ಕಳುಹಿಸಿದ ಭದ್ರತಾ ಸಿಬ್ಬಂದಿ!

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂದೇಶವನ್ನು ತಿಳಿಸಲು ಮಾಯಾವತಿ ಅವರನ್ನು ಸಂಪರ್ಕಿಸಲು ಮುಂದಾಗಿದ್ದರು ಎಂಬ ವರದಿಗಳನ್ನು ಪುನಿಯಾ ನಿರಾಕರಿಸಿದರು.

ಲಖನೌ: ಅಪಾಯಿಂಟ್ಮೆಂಟ್ ಇಲ್ಲದೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರ ಲಕ್ನೋದ ಮನೆಗೆ ಬಂದ ಇಬ್ಬರು ಕಾಂಗ್ರೆಸ್ ನಾಯಕರನ್ನು ಭದ್ರತಾ ಸಿಬ್ಬಂದಿ ಮಂಗಳವಾರ ವಾಪಸ್ ಕಳುಹಿಸಿದೆ.

ಕಾಂಗ್ರೆಸ್ ನಾಯಕರಾದ ರಾಜೇಂದ್ರ ಪಾಲ್ ಗೌತಮ್ ಮತ್ತು ಬಾರಾಬಂಕಿ ಸಂಸದ ತನುಜ್ ಪುನಿಯಾ ಮಂಗಳವಾರ ಬಿಎಸ್‌ಪಿ ಮುಖ್ಯಸ್ಥೆಯ ಮನೆಗೆ ತಲುಪಿ ಅವರೊಂದಿಗೆ ಭೇಟಿಗೆ ವಿನಂತಿಸಿದರು. ಭದ್ರತಾ ತಂಡವು ಮಾಯಾವತಿ ಅವರಿಗೆ ಈ ಸಂದೇಶವನ್ನು ರವಾನಿಸಿತು. ಆದರೆ, ಅವರು ಕಾಂಗ್ರೆಸ್ ನಾಯಕರೊಂದಿಗಿನ ಭೇಟಿಗೆ ನಿರಾಕರಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಇಬ್ಬರು ಕಾಂಗ್ರೆಸ್ ನಾಯಕರು, ರಾಜಕಾರಣಿಯ ಆರೋಗ್ಯದ ಬಗ್ಗೆ ವಿಚಾರಿಸಲು ಸೌಜನ್ಯದ ಭೇಟಿ ಇದಾಗಿತ್ತು. ಮಾಯಾವತಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಹೋಗಿದ್ದೆವು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂದೇಶವನ್ನು ತಿಳಿಸಲು ಮಾಯಾವತಿ ಅವರನ್ನು ಸಂಪರ್ಕಿಸಲು ಮುಂದಾಗಿದ್ದರು ಎಂಬ ವರದಿಗಳನ್ನು ಪುನಿಯಾ ನಿರಾಕರಿಸಿದರು.

'ಅದು ಸರಿಯಲ್ಲ. ನಾನು ಸದ್ಯ ರಾಯ್‌ಬರೇಲಿಯಲ್ಲಿದ್ದೇನೆ, ರಾಹುಲ್ ಜಿ ಅವರ ಕಾರ್ಯಕ್ರಮದಲ್ಲಿ ಇದ್ದೇನೆ' ಎಂದು ಪುನಿಯಾ ಪಿಟಿಐಗೆ ತಿಳಿಸಿದರು.

ಅನಧಿಕೃತ ಸಭೆ ಎಂದ ಕಾಂಗ್ರೆಸ್

ಈ ಸಭೆ ಅನಧಿಕೃತ ಎಂದು ಹೇಳಿರುವ ಕಾಂಗ್ರೆಸ್, ಇಬ್ಬರು ನಾಯಕರಿಂದ ವಿವರಣೆ ಕೇಳಿದೆ. ಈ ಭೇಟಿಯನ್ನು ಪಕ್ಷ ಗಮನಿಸಿದೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ.

'ಇದು ಪಕ್ಷದ ಅಧಿಕೃತ ನಿಯೋಗವಾಗಿರಲಿಲ್ಲ. ಪಕ್ಷವು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಗೆ ಹೋದ ನಾಯಕರಿಗೆ ಶೋಕಾಸ್ ನೋಟಿಸ್ ನೀಡಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಕೂಡ ಭೇಟಿಗೆ ಅನುಮತಿ ನೀಡಿಲ್ಲ. ಅಂತಹ ಭೇಟಿಗಳನ್ನು ಉನ್ನತ ನಾಯಕತ್ವವು ಮೊದಲೇ ನಿರ್ಧರಿಸಿ ಅನುಮೋದನೆ ನೀಡುತ್ತದೆ' ಎಂದು ಪಾಂಡೆ ಹೇಳಿದರು.

ದಲಿತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮಾಯಾವತಿಯವರ ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದರಿಂದ ಮುಸ್ಲಿಂ, ದಲಿತ ಮತ್ತು ಒಬಿಸಿ ಮತಗಳ ವಿಭಜನೆಯನ್ನು ತಡೆಯಲು ಬಣಕ್ಕೆ ಸಹಾಯವಾಗುತ್ತದೆ ಎನ್ನಲಾಗಿದೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜಂಟಿಯಾಗಿ ಹೋರಾಡಿ ಆಡಳಿತ ಪಕ್ಷವನ್ನು ಎದುರಿಸಿದ್ದವು. ಎರಡೂ ಪಕ್ಷಗಳು ರಾಜ್ಯದ 80 ಸ್ಥಾನಗಳಲ್ಲಿ ಗೆದ್ದವು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಯಾವತಿ ತಮ್ಮ ಬದ್ಧ ವೈರಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಲಾಭ ಪಡೆದರು. ಅವರ ಪಕ್ಷ 10 ಲೋಕಸಭಾ ಸ್ಥಾನಗಳನ್ನು ಗೆದ್ದರೆ, ಅಖಿಲೇಶ್ ಯಾದವ್ ಕೇವಲ 5 ಸ್ಥಾನಗಳನ್ನು ಗೆದ್ದರು. ಆದಾಗ್ಯೂ, ಅಂದಿನಿಂದ, ಅವರು ಎಲ್ಲ ಮೈತ್ರಿಗಳಿಂದ ದೂರ ಉಳಿದಿದ್ದಾರೆ ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ಇಂಡಿಯಾ ಒಕ್ಕೂಟ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel