ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಶಾಂಗ ಸಚಿವ ಎಸ್ ಜೈಶಂಕರ್. 
ದೇಶ

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: Quad ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ನವದೆಹಲಿ: ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತ ಮತ್ತು ಅಮೆರಿಕ ದೇಶಗಳು ಅತ್ಯಗತ್ಯ ಖನಿಜಗಳು ಮತ್ತು ಅಪರೂಪದ ಖನಿಜ ಪೂರೈಕೆ ಹಾಗೂ ಸಂಸ್ಕರಣೆಗೆ ಸಂಬಂಧಿಸಿದಂತೆ ಐತಿಹಾಸಿಕ ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಿವೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಕ್ವಾಡ್ (Quad) ವಿದೇಶಾಂಗ ಸಚಿವರ ಸಭೆಯ ನೇಪಥ್ಯದಲ್ಲಿ ಈ ದ್ವಿಪಕ್ಷೀಯ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಒಪ್ಪಂದದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಎಸ್. ಜೈಶಂಕರ್, ಈ ಒಪ್ಪಂದವು ಅತ್ಯಗತ್ಯವಾಗಿದ್ದು, ಗಣಿಗಾರಿಕೆ, ಸಂಸ್ಕರಣೆ, ಮರುಬಳಕೆ (Recycling) ಮತ್ತು ಸಂಬಂಧಿತ ಹೂಡಿಕೆ ಸೇರಿದಂತೆ ಸಮಗ್ರ ಖನಿಜ ಪೂರೈಕೆ ಸರಪಳಿಯಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಮಾತನಾಡಿ, “ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಿಗೆ ದೀರ್ಘಾವಧಿಯ ವಿಶ್ವಾಸಾರ್ಹ ಖನಿಜ ಸರಬರಾಜು ಅತ್ಯಂತ ಅಗತ್ಯ. ನಮ್ಮ ನವೀನ ಆರ್ಥಿಕ ವ್ಯವಸ್ಥೆಗಳಿಗೆ ಅವು ಬೆನ್ನೆಲುಬಿನಂತಿವೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ “Pax Silica” ಯೋಜನೆಯನ್ನೂ ಉಲ್ಲೇಖಿಸಿದ ಅವರು, “ಫೆಬ್ರವರಿ 4ರಂದು ವಾಷಿಂಗ್ಟನ್‌ನಲ್ಲಿ ನಡೆದ ಕ್ರಿಟಿಕಲ್ ಮಿನರಲ್ಸ್ ಫೋರಂನಲ್ಲಿ ಭಾರತ ಭಾಗವಹಿಸಿದ ಬಳಿಕ ಈ ಸಹಕಾರಕ್ಕೆ ಅಡಿಪಾಯ ಹಾಕಲಾಯಿತು. ನಂತರ ಭಾರತ Pax Silica ಯೋಜನೆಗೆ ಸೇರ್ಪಡೆಯಾದ ಬಳಿಕ ಇದಕ್ಕೆ ಮತ್ತಷ್ಟು ವೇಗ ಸಿಕ್ಕಿತು” ಎಂದು ತಿಳಿಸಿದರು.

ನಮ್ಮಂತಹ ತಂತ್ರಜ್ಞಾನ ಆಧಾರಿತ ಆರ್ಥಿಕ ವ್ಯವಸ್ಥೆಗಳು ಪ್ರಮುಖ ಕೈಗಾರಿಕೆಗಳಿಗೆ ಅಗತ್ಯವಿರುವ ಮೂಲ ಸಂಪನ್ಮೂಲಗಳನ್ನು ಒಂದೇ ದೇಶದ ಏಕಸ್ವಾಮ್ಯಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ. ಯುದ್ಧದ ಸಮಯದಲ್ಲಷ್ಟೇ ಅಲ್ಲ, ರಾಜಕೀಯ ಒತ್ತಡದ ಸಾಧನವಾಗಿಯೂ ಅವು ಬಳಸಲ್ಪಡುವ ಅಪಾಯವಿದೆ ಎಂದು ಹೇಳಿದರು.

ಈ ಒಪ್ಪಂದವನ್ನು ಭಾರತ-ಅಮೆರಿಕ ತಂತ್ರಾತ್ಮಕ ಪಾಲುದಾರಿಕೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

ಜಾಗತಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಿಗೆ ಅಗತ್ಯವಿರುವ ಅಪರೂಪದ ಖನಿಜ ಸಂಪನ್ಮೂಲಗಳ ಮೇಲಿನ ಅವಲಂಬನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಚೀನಾದ ಪ್ರಭಾವಕ್ಕೆ ಪರ್ಯಾಯ ವ್ಯವಸ್ಥೆ ನಿರ್ಮಿಸಲು ಈ ಒಪ್ಪಂದ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಅದ್ಧೂರಿಯಾಗಿ ನಡೆಯಲಿದೆ ಶರ್ಮಿಳಾ ಮಾಂಡ್ರೆ ಮದುವೆ; ದಿನಾಂಕ, ಸ್ಥಳ ಫಿಕ್ಸ್; ಗ್ಲಾಮರಸ್‌ ನಟಿಯ ಮ್ಯಾರೇಜ್ ಎಲ್ಲಿ ಗೊತ್ತಾ?

ನಟ ಪ್ರಕಾಶ್ ರೈಗೆ ಜಾಮೀನು ಮಂಜೂರು; ಬಂಧನ ಭೀತಿಯಿಂದ ಪಾರು!

ಬ್ಯಾಕ್ ಟು ಬ್ಯಾಕ್ ಸರಣಿ ಸೋಲು: ಕೋಚ್ Gautam Gambhir ರೆಕ್ಕೆಪುಕ್ಕ ಕಟ್? BCCI ಮಹತ್ವದ ರೀವ್ಯೂ ಮೀಟಿಂಗ್!

ರಾಕೆಟ್ ಮರು ಬಳಕೆ: SpaceX ಬಳಿಕ ಇದೀಗ ಹೊಸ ಮೈಲುಗಲ್ಲು ತಲುಪಿದ ಚೀನಾ!