ತರಗತಿ ಕೊಠಡಿಯಲ್ಲಿ ಕುಸಿದು ಬಿದ್ದು 9 ವರ್ಷದ ಬಾಲಕಿ ಸಾವು online desk
ದೇಶ

ತರಗತಿ ಕೊಠಡಿಯಲ್ಲಿ ಕುಸಿದು ಬಿದ್ದು 9 ವರ್ಷದ ಬಾಲಕಿ ಸಾವು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತರಗತಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ, 9 ವರ್ಷದ ಬಾಲಕಿ ತರಗತಿಯೊಳಗೆ ನಿಂತಿದ್ದು, ತನ್ನ ಶಿಕ್ಷಕರ ಬಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದು ಕಂಡುಬಂದಿದೆ.

ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಶಾಲೆಯೊಂದರಲ್ಲಿ, 3ನೇ ತರಗತಿಯಲ್ಲಿ ಓದುತ್ತಿದ್ದ ಒಂಬತ್ತು ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದ ಬಗ್ಗೆ ದೆಹಲಿ ಪೊಲೀಸರಿಗೆ ಬೆಳಿಗ್ಗೆ 9.52ರ ಸುಮಾರಿಗೆ ಕರೆ (PCR call) ಬಂದಿದೆ.

ಬುಧವಾರ ಬೆಳಿಗ್ಗೆ ತರಗತಿಯೊಳಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈ ಘಟನೆಯು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತರಗತಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ, 9 ವರ್ಷದ ಬಾಲಕಿ ತರಗತಿಯೊಳಗೆ ನಿಂತಿದ್ದು, ತನ್ನ ಶಿಕ್ಷಕರ ಬಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದು ಕಂಡುಬಂದಿದೆ.

ಶಿಕ್ಷಕರು ಆಕೆಯನ್ನು ಎತ್ತಿಕೊಂಡರು, ಈ ವೇಳೆ ಇತರ ವಿದ್ಯಾರ್ಥಿಗಳು ಆಕೆಯ ಸುತ್ತಲೂ ಜಮಾಯಿಸಿದರು. ಬಾಲಕಿಯ ಸಹಪಾಠಿಗಳಲ್ಲಿ ಕೆಲವರು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಲು ತರಗತಿಯಿಂದ ಹೊರಗೆ ಓಡಿಹೋದರು.

ಆಕೆಯನ್ನು ನಿರ್ಮಾಣ ವಿಹಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ತರಗತಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ಅದರಲ್ಲಿ ಬಾಲಕಿ ತರಗತಿಯೊಳಗೆ ಇದ್ದಕ್ಕಿದ್ದಂತೆ ಕುಸಿದು ಬೀಳುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಕುಸಿದು ಬೀಳಲು ಕಾರಣವಾದ ಸನ್ನಿವೇಶಗಳು ಇನ್ನೂ ತಿಳಿದುಬಂದಿಲ್ಲ.

ಸಾವಿಗೆ ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆಯ ಭಾಗವಾಗಿ, ಬಾಲಕಿಯ ಪೋಷಕರು ಮತ್ತು ಸಂಬಂಧಪಟ್ಟ ಶಾಲಾ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀಪಾವಳಿಗೂ ಮುನ್ನ ಅಗ್ನಿವೀರರಿಗೆ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ!

US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್‌; ಕರ್ನಾಟಕದೊಂದಿಗೂ ನಂಟು!

ಬಸ್‌ನಲ್ಲಿ ತನ್ನದೇ ಪಕ್ಷದ ಸಂಸದೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ: ವಿಡಿಯೋ ವೈರಲ್; ಖರ್ಗೆ, ರಾಹುಲ್ ಗಾಂಧಿಗೆ ದೂರು!

'ಮೂರ್ ಕತ್ತೆ ವಯಸ್ಸಾದ್ರು ಹೀಗೆ ಮಾತಾಡ್ತೀರಲ್ಲ': BJP ಹಿರಿಯ ನಾಯಕ ಸುರೇಶ್ ಕುಮಾರ್`ಗೆ ತಿವಿದ ಕಾಂಗ್ರೆಸ್ ನಾಯಕಿ!

India vs New Zealand, 1st ODI: ವಿರಾಟ್ ಕೊಹ್ಲಿ ಅಬ್ಬರ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ