ಸಾಂದರ್ಭಿಕ ಚಿತ್ರ 
ದೇಶ

ಮದುವೆಗೆ ಸಿದ್ಧರಾಗಿದ್ದೀರಾ? ಆರೋಗ್ಯಕರ ದಾಂಪತ್ಯ ಜೀವನಕ್ಕಾಗಿ ಗೋವಾದ ಕಾಲೇಜಿನಿಂದ ವಿಶೇಷ ಕೋರ್ಸ್!

ಮದುವೆ ಎಂದರೆ ಕೇವಲ ಅದ್ಧೂರಿ ಸಮಾರಂಭವಲ್ಲ. ಬದಲಾಗಿ ಪರಸ್ಪರ ಅರ್ಥಮಾಡಿಕೊಳ್ಳುವುದು, ಹೊಂದಾಣಿಕೆ, ಬದ್ಧತೆ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವುದೂ ಮುಖ್ಯ.

ಪಣಜಿ: ವೃತ್ತಿಜೀವನ ರೂಪಿಸಿಕೊಳ್ಳಲು ನಾವು ಸುಮಾರು 20 ವರ್ಷಗಳ ಕಾಲ ಶಿಕ್ಷಣ ಪಡೆಯುತ್ತೇವೆ. ಆದರೆ ಜೀವನದ ಬಹುಮುಖ್ಯ ಭಾಗವಾಗಿರುವ ವೈವಾಹಿಕ ಜೀವನಕ್ಕೆ ಸಿದ್ಧರಾಗಲು ಎಷ್ಟು ಸಮಯ ಮೀಸಲಿಡುತ್ತೇವೆ? ಇಂತಹ ಮಹತ್ವದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಗೋವಾದ ಕಾಲೇಜೊಂದು ಯುವಜನರಿಗೆ ವಿಶೇಷ ಪ್ರಮಾಣಪತ್ರ ಕೋರ್ಸ್ ಆರಂಭಿಸಿದೆ.

ಮದುವೆ ಎಂದರೆ ಕೇವಲ ಅದ್ಧೂರಿ ಸಮಾರಂಭವಲ್ಲ. ಬದಲಾಗಿ ಪರಸ್ಪರ ಅರ್ಥಮಾಡಿಕೊಳ್ಳುವುದು, ಹೊಂದಾಣಿಕೆ, ಬದ್ಧತೆ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವುದೂ ಮುಖ್ಯ. ಆರೋಗ್ಯಕರ ಹಾಗೂ ದೀರ್ಘಕಾಲದ ದಾಂಪತ್ಯ ಜೀವನ ನಡೆಸಲು ಬೇಕಾದ ಸಿದ್ಧತೆಯನ್ನು ಈ ಕೋರ್ಸ್ ಮೂಲಕ ಕಲಿಸಲಾಗುತ್ತದೆ ಎಂದು ಗೋವಾ ಕಾಲೇಜ್ ಆಫ್ ಹೋಮ್ ಸೈನ್ಸ್ ಪ್ರಾಂಶುಪಾಲ ಮಹೇಶ್ ಪೈ ತಿಳಿಸಿದ್ದಾರೆ.

ಕಾಲೇಜಿನ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗವು 'ಮ್ಯಾರೇಜ್ ರೆಡಿನೆಸ್: ಪ್ರಿಪೇರಿಂಗ್ ಫಾರ್ ಹೆಲ್ದಿ ಆ್ಯಂಡ್ ಲಾಸ್ಟಿಂಗ್ ರಿಲೇಷನ್‌ಶಿಪ್ಸ್' (ಆರೋಗ್ಯಕರ ಮತ್ತು ದೀರ್ಘಕಾಲದ ಸಂಬಂಧಗಳಿಗೆ ಮದುವೆಯ ಸಿದ್ಧತೆ) ಎಂಬ ಹೆಸರಿನಲ್ಲಿ ಈ ಪ್ರಮಾಣಪತ್ರ ಕೋರ್ಸ್ ಪರಿಚಯಿಸಿದೆ. ಡಿಸೆಂಬರ್ 2ರಿಂದ 17ರವರೆಗೆ 15 ದಿನಗಳ ಕಾಲ ತರಗತಿಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯಾದ್ಯಂತ ಮದುವೆಪೂರ್ವ ಸಮಾಲೋಚನೆ (Pre-marriage Counselling) ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದ್ದರು. ವಿಚ್ಛೇದನ ಪ್ರಕರಣಗಳನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಲೇಜು ಈ ಕೋರ್ಸ್ ಆರಂಭಿಸಿರುವುದು ಗಮನ ಸೆಳೆದಿದೆ.

ರಾಜ್ಯ ಕಾನೂನು ಇಲಾಖೆಯ ಅಂಕಿಅಂಶಗಳ ಪ್ರಕಾರ, 2022ರಿಂದ 2025ರ ನಡುವೆ ಗೋವಾದ ಸಿವಿಲ್ ನ್ಯಾಯಾಲಯಗಳಲ್ಲಿ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ 3,000ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿವೆ. 2024ರಲ್ಲೇ 947 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಕಾಲೇಜು ಬಿಡುಗಡೆ ಮಾಡಿರುವ ಕೋರ್ಸ್‌ನ ಕರಪತ್ರದಲ್ಲೂ ಮಹತ್ವದ ಪ್ರಶ್ನೆಯೊಂದನ್ನು ಮುಂದಿಡಲಾಗಿದೆ. "ವೃತ್ತಿಜೀವನಕ್ಕಾಗಿ ನಾವು ಸುಮಾರು 20 ವರ್ಷಗಳನ್ನು ಹೂಡಿಕೆ ಮಾಡುತ್ತೇವೆ. ಆದರೆ ವೃತ್ತಿಜೀವನಕ್ಕಿಂತಲೂ ಹೆಚ್ಚಿನ ಅವಧಿಯನ್ನು ಹೊಂದಿರುವ ವೈವಾಹಿಕ ಮತ್ತು ಕುಟುಂಬ ಜೀವನಕ್ಕೆ ಸಿದ್ಧರಾಗಲು ಎಷ್ಟು ಸಮಯ ನೀಡುತ್ತೇವೆ?" ಎಂದು ಪ್ರಶ್ನಿಸಲಾಗಿದೆ.

ಮದುವೆಗೆ ಸಿದ್ಧತೆ ಎಂದರೆ ಮದುವೆಯ ದಿನದ ಸಿದ್ಧತೆ ಮಾತ್ರವಲ್ಲ. ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದು, ಸಂಗಾತಿಯ ಭಾವನೆಗಳನ್ನು ತಿಳಿದುಕೊಳ್ಳುವುದು, ಸಂಬಂಧಗಳ ಮಹತ್ವ, ಪರಸ್ಪರ ಬದ್ಧತೆ ಹಾಗೂ ವೈವಾಹಿಕ ಜೀವನದ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಕೂಡ ಮುಖ್ಯ ಎಂದು ಮಹೇಶ್ ಪೈ ಹೇಳಿದ್ದಾರೆ.

ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಮದುವೆಯಾಗದ ಯುವಜನರು ಸೇರಿದಂತೆ ಆರೋಗ್ಯಕರ ಸಂಬಂಧಗಳನ್ನು ಬೆಳೆಸಲು ಹಾಗೂ ಮದುವೆಗೆ ಸಿದ್ಧರಾಗಲು ಆಸಕ್ತಿ ಹೊಂದಿರುವ ಎಲ್ಲರೂ ಈ ಕೋರ್ಸ್‌ಗೆ ಸೇರಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀಪಾವಳಿಗೂ ಮುನ್ನ ಅಗ್ನಿವೀರರಿಗೆ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ!

US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್‌; ಕರ್ನಾಟಕದೊಂದಿಗೂ ನಂಟು!

ಬಸ್‌ನಲ್ಲಿ ತನ್ನದೇ ಪಕ್ಷದ ಸಂಸದೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ: ವಿಡಿಯೋ ವೈರಲ್; ಖರ್ಗೆ, ರಾಹುಲ್ ಗಾಂಧಿಗೆ ದೂರು!

'ಮೂರ್ ಕತ್ತೆ ವಯಸ್ಸಾದ್ರು ಹೀಗೆ ಮಾತಾಡ್ತೀರಲ್ಲ': BJP ಹಿರಿಯ ನಾಯಕ ಸುರೇಶ್ ಕುಮಾರ್`ಗೆ ತಿವಿದ ಕಾಂಗ್ರೆಸ್ ನಾಯಕಿ!

India vs New Zealand, 1st ODI: ವಿರಾಟ್ ಕೊಹ್ಲಿ ಅಬ್ಬರ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ