ನಟಿ ಅತುಲ್ಯ ಚಂದ್ರನ್ ಮತ್ತು ನಟ ಬಿಬಿನ್ ಪೆರುಂಬಿಳ್ಳಿ Online Desk
ದೇಶ

ಚಿಕ್ಕಮ್ಮನಿಗೆ ಹುಷಾರಿಲ್ಲ ಎಂದು ಕರೆಸಿ ವೈದ್ಯರ ಮೇಲೆ ಹಲ್ಲೆ ಮತ್ತು ಸುಲಿಗೆ! ಖ್ಯಾತ ನಟ, ನಟಿ ಸೇರಿದಂತೆ ಮೂವರ ಬಂಧನ

ಕೇರಳಂ ಹನಿಟ್ರ್ಯಾಪ್ ಪ್ರಕರಣ: ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾದರಿಯಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು, ಹಲ್ಲೆ ನಡೆಸಿ ಹಣಕ್ಕಾಗಿ ದರೋಡೆ & ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ನಟಿ ಅತುಲ್ಯ ಚಂದ್ರನ್, ನಟ ಬಿಬಿನ್ ಪೆರುಂಬಿಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕೊಚ್ಚಿ (ಕೇರಳಂ): ಕೇರಳಂನ ಕೊಚ್ಚಿಯಲ್ಲಿ ವೈದ್ಯರೊಬ್ಬರಿಗೆ ತುರ್ತು ಚಿಕಿತ್ಸೆಯ ನೆಪವೊಡ್ಡಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು, ಅವರ ಮೇಲೆ ಹಲ್ಲೆ ನಡೆಸಿ ದರೋಡೆ ಹಾಗೂ ಬ್ಲ್ಯಾಕ್‌ಮೇಲ್ ಮಾಡಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಅತುಲ್ಯಾ ಚಂದ್ರ (32), ಮತ್ತೊಬ್ಬ ನಟ ಬಿಬಿನ್ ಪೆರುಂಬಳ್ಳಿ (43) ಸೇರಿದಂತೆ ಮೂವರನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ವೈದ್ಯರನ್ನು ಕರೆಸಿಕೊಂಡಿದ್ದು ಹೇಗೆ?

ಪೊಲೀಸ್ ಮೂಲಗಳ ಪ್ರಕಾರ, ನವೆಂಬರ್ 2 ರ ರಾತ್ರಿ ನಟಿ ಅತುಲ್ಯ ಚಂದ್ರನ್ ಅವರು ತಮಗೆ ಪರಿಚಿತರಾಗಿದ್ದ 41 ವರ್ಷದ ಖ್ಯಾತ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾರೆ. ಈ ವೇಳೆ, "ನಮ್ಮ ಚಿಕ್ಕಮ್ಮನಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ತುರ್ತು ಚಿಕಿತ್ಸೆ ನೀಡಲು ಬರಬೇಕು" ಎಂದು ಸುಳ್ಳು ಹೇಳಿ ಕೊಚ್ಚಿಯ ಕಡವಂತ್ರ ಪ್ರದೇಶದಲ್ಲಿರುವ ಚಲನಚಿತ್ರ ಕಲಾವಿದರು ತಂಗುವ ಅಪಾರ್ಟ್‌ಮೆಂಟ್‌ಗೆ ಬರುವಂತೆ ವಿನಂತಿಸಿದ್ದಾರೆ. ಇದನ್ನು ನಂಬಿ ವೈದ್ಯರು ಫ್ಲ್ಯಾಟ್‌ಗೆ ಧಾವಿಸಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು?

ವೈದ್ಯರು ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸುತ್ತಿದ್ದಂತೆ, ನಟ ಬಿಬಿನ್ ಪೆರುಂಬಿಳ್ಳಿ ಮತ್ತು ಅವರ ಚಾಲಕ ವಿಷ್ಣು (ಈತನ ಮೇಲೆ ಈಗಾಗಲೇ 8 ಕ್ರಿಮಿನಲ್ ಪ್ರಕರಣಗಳಿವೆ) ಸೇರಿದಂತೆ ಅಲ್ಲಿದ್ದ ಗ್ಯಾಂಗ್ ವೈದ್ಯರನ್ನು ಕುರ್ಚಿಗೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಬಿಬಿನ್ ವೈದ್ಯರ ಕಿವಿ ಮತ್ತು ಪಕ್ಕೆಲುಬಿಗೆ ಕುರ್ಚಿಯಿಂದ ಹೊಡೆದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ವೈದ್ಯರ ಬಳಿಯಿದ್ದ ಸುಮಾರು ₹3.25 ಲಕ್ಷ ಮೌಲ್ಯದ ಎರಡು ದುಬಾರಿ ಮೊಬೈಲ್ ಫೋನ್‌ಗಳು, ಒಂದು ಸ್ಮಾರ್ಟ್‌ವಾಚ್ ಮತ್ತು ಏರ್‌ಪಾಡ್ಸ್‌ಗಳನ್ನು ಆರೋಪಿಗಳು ಕಿತ್ತುಕೊಂಡಿದ್ದಾರೆ.

ಜೊತೆಗೆ, "ನೀವು ಚಿಕ್ಕಮ್ಮನಿಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದೀರಿ" ಎಂದು ಆರೋಪಿಸಿ, ದೊಡ್ಡ ಮೊತ್ತದ ಹಣ ನೀಡುವಂತೆ ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಹಾಗೂ ಕೊಲೆ ಮಾಡುವುದಾಗಿ ನಟಿ ಅತುಲ್ಯ ಅಶ್ಲೀಲ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮುಂದುವರೆದು, ಗ್ಯಾಂಗ್‌ಗೆ ಹೆದರಿ ಎರಡು ದಿನ ಸುಮ್ಮನಿದ್ದ ವೈದ್ಯರು, ನಂತರ ಧೈರ್ಯ ಮಾಡಿ ಕಡವಂತ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ನಟಿ ಅತುಲ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ. ಇದೀಗ ಪ್ರಕರಣದಲ್ಲಿ ಒಟ್ಟು 12 ಜನರ ಕೈವಾಡವಿರುವುದು ಪತ್ತೆಯಾಗಿದ್ದು, ಉಳಿದ 9 ಆರೋಪಿಗಳಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.

ಆದರೆ, ಈ ಕೇಸ್ ದಾಖಲಾದ ಬೆನ್ನಲ್ಲೇ ಬಂಧಿತ ಆರೋಪಿಗಳ ಕಡೆಯಿಂದ ವೈದ್ಯರ ವಿರುದ್ಧ ಅತ್ಯಾಚಾರದ ಪ್ರತಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣ ವಸೂಲಿಗಾಗಿ ನಟಿ ಅತುಲ್ಯ ಈ ಇಡೀ ಸ್ಕೆಚ್ ಹಾಕಿದ್ದಳೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂರನೇ ಮುಖ್ಯಮಂತ್ರಿಯ ಪ್ರಶ್ನೆಯೇ ಇಲ್ಲ, ಡಿಕೆಶಿ CM ಆಗಿ ಮುಂದುವರೆಯುತ್ತಾರೆ: ಕುತೂಹಲ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ!

ಶೇ. 31.2ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟ ಆರೋಪ: ತೈಲ ಕಂಪನಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಆಗ್ರಹ!

ಗಲ್ವಾನ್ ಘರ್ಷಣೆಯ 'ಮಾತೃಭೂಮಿ' ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್; ವಿಳಂಬಕ್ಕೆ ಕಾರಣ ನೀಡಿದ ಸಲ್ಮಾನ್

ಹಳ್ಳಿ ರೈತರ ಸಾಲ ಮನ್ನಾ ಮಾಡಿದ್ದೆ ಅದಕ್ಕೆ ನಾನು ಅವಿವೇಕಿ: ಬುದ್ಧ, ಸಿದ್ದಾರ್ಥನ ಹೆಸರಿನಲ್ಲಿ ಲೂಟಿ, ಪ್ರಿಯಾಂಕ್ ಖರ್ಗೆಗೆ ಎಚ್ ಡಿಕೆ ತಿರುಗೇಟು

'ಬಾಯಿ ಸುಟ್ಟುಕೊಂಡಿದ್ದೆ': ರಾಜೀವ್ ಗಾಂಧಿ ಜೊತೆ ತಂದೂರಿ ಚಿಕನ್ ಸವಿದಿದ್ದನ್ನು ನೆನಪಿಸಿಕೊಂಡ ಸೋನಿಯಾ!