ಏರ್ ಇಂಡಿಯಾ 
ದೇಶ

Air India ವಿಮಾನಕ್ಕೆ Hijack ಬೆದರಿಕೆ: ಶೌಚಾಲಯದ ಕನ್ನಡಿಯಲ್ಲಿ ಸಂದೇಶ ಪತ್ತೆ; Kolkata ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ..!

ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಪ್ರೋಟೋಕಾಲ್‌ಗಳನ್ನು ತಕ್ಷಣವೇ ಜಾರಿಗೊಳಿಸಲಾಗಿದ್ದು, ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ.

ಕೋಲ್ಕತಾ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಮುಂಬೈಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ (ಅಪಹರಣ) ಬೆದರಿಕೆ ಸಂದೇಶ ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಮಾನ ಹೊರಡುವುದಕ್ಕೂ ಕೆಲವೇ ಕ್ಷಣಗಳ ಮೊದಲು ಶೌಚಾಲಯದಲ್ಲಿ ವಿಮಾನವನ್ನು ಅಪಹರಿಸುವುದಾಗಿ ಎಚ್ಚರಿಕೆ ನೀಡಿದ್ದ ಪತ್ರವೊಂದು ಪತ್ತೆಯಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ವಿಮಾನವು ಬೆಳಗ್ಗೆ 10.20ಕ್ಕೆ ಟೇಕ್‌ಆಫ್ ಆಗಬೇಕಿತ್ತು. ಆದರೆ, ಪತ್ತೆಯಾದ ಪತ್ರದಲ್ಲಿ ಬೆಳಗ್ಗೆ 11.10ಕ್ಕೆ ವಿಮಾನವನ್ನು ಅಪಹರಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಪತ್ರ ಪತ್ತೆಯಾದ ತಕ್ಷಣ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ವಿಮಾನವನ್ನು ವಿಮಾನ ನಿಲ್ದಾಣದ ಪ್ರತ್ಯೇಕ ತಪಾಸಣಾ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಪ್ರೋಟೋಕಾಲ್‌ಗಳನ್ನು ತಕ್ಷಣವೇ ಜಾರಿಗೊಳಿಸಲಾಗಿದ್ದು, ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ’: ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ?; JDU ತೀವ್ರ ಆಕ್ರೋಶ..!

Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

'ಭಕ್ತಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ', '1,200 ಕೊಟ್ಟು Ramayana ನೋಡಲ್ಲ, ನಿರ್ಮಾಪಕರಿಗೆ ದುಡ್ಡು ಕೊಡಲ್ಲ': ನಟ ಮುಕೇಶ್ ಖನ್ನಾ

'2 ರೂಪಾಯಿ ವಿಮರ್ಶಕ'.. 'ಬಂಗಲೆ ಕಟ್ಟಿಕೊಂಡಿದ್ದಾನೆ'!; KRKಗೆ ರಾಮಾಯಣ ನಿರ್ದೇಶಕರಿಂದ ಲೀಗಲ್ ನೋಟಿಸ್, ನೆಟ್ಟಿಗರ ತಿರುಗೇಟು

Mother Dairy: ಮತ್ತೆ ಹಾಲಿನ ದರ ಏರಿಕೆ, ಲೀಟರ್`ಗೆ ಬರೊಬ್ಬರಿ 4 ರೂ ಹೆಚ್ಚಳ, ನಾಳೆಯಿಂದಲೇ ನೂತನ ದರ ಜಾರಿ!