ಮದರ್ ಡೈರಿ ಹಾಲು ದರ ಹೆಚ್ಚಳ 
ದೇಶ

Mother Dairy: ಮತ್ತೆ ಹಾಲಿನ ದರ ಏರಿಕೆ, ಲೀಟರ್`ಗೆ ಬರೊಬ್ಬರಿ 4 ರೂ ಹೆಚ್ಚಳ, ನಾಳೆಯಿಂದಲೇ ನೂತನ ದರ ಜಾರಿ!

ಮದರ್ ಡೈರಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತದೆ. ದೇಶದ ವಿವಿಧ ಮಾರುಕಟ್ಟೆಗಳನ್ನು ಸೇರಿಸಿದರೆ ಸಂಸ್ಥೆಯ ಒಟ್ಟು ದೈನಂದಿನ ಹಾಲು ಮಾರಾಟ 50 ಲಕ್ಷ ಲೀಟರ್‌..

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈರಾಣಿಗಿರುವ ಜನತೆಗೆ ಮತ್ತೊಂದು ದರ ಏರಿಕೆ ತಲೆನೋವು ಶುರುವಾಗಿದ್ದು, ಹಾಲಿನ ದರ 2 ರೂಯಿಂದ 4 ರೂವರೆಗೆ ಏರಿಕೆಯಾಗಲಿದೆ.

ಮದರ್ ಡೈರಿ ಸಂಸ್ಥೆ ತನ್ನ ವಿವಿಧ ಹಾಲಿನ ಉತ್ಪನ್ನಗಳ ಬೆಲೆಯನ್ನು ಪ್ರತಿ ಲೀಟರ್‌ಗೆ ₹2ರಿಂದ ₹4ರವರೆಗೆ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ನವೆಂಬರ್ 12ರ ಗುರುವಾರದಿಂದ ಜಾರಿಗೆ ಬರಲಿವೆ.

ಹಾಲು ಸಂಗ್ರಹಣೆ ವೆಚ್ಚ, ಪಶು ಆಹಾರ ಸೇರಿದಂತೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರಿಂದ ಹಾಲು ಖರೀದಿಸಲು ನೀಡುವ ಹಣವೂ ಹೆಚ್ಚಾಗಿದ್ದು, ಅದರ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಈ ದರ ಏರಿಕೆ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದ ಗ್ರಾಹಕರಿಗೆ ಅನ್ವಯವಾಗಲಿದೆ. ಫುಲ್ ಕ್ರೀಮ್, ಟೋನ್ಡ್, ಡಬಲ್ ಟೋನ್ಡ್ ಹಾಗೂ ಹಸುವಿನ ಹಾಲಿನ ದರಗಳನ್ನು ಪರಿಷ್ಕರಿಸಲಾಗಿದೆ.

ಹಾಲು ಖರೀದಿ ವೆಚ್ಚ ಹೆಚ್ಚಳ

ರೈತರಿಂದ ಹಾಲು ಖರೀದಿಸಲು ನೀಡುವ ದರ ಹೆಚ್ಚಳ ಹಾಗೂ ಉತ್ಪಾದನಾ ವೆಚ್ಚದಲ್ಲಿನ ಏರಿಕೆಯಿಂದಾಗಿ ಸಂಸ್ಥೆಯ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿ ವೆಚ್ಚದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಮದರ್ ಡೈರಿ ನಿರ್ಧರಿಸಿದೆ.

ಮದರ್ ಡೈರಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತದೆ. ದೇಶದ ವಿವಿಧ ಮಾರುಕಟ್ಟೆಗಳನ್ನು ಸೇರಿಸಿದರೆ ಸಂಸ್ಥೆಯ ಒಟ್ಟು ದೈನಂದಿನ ಹಾಲು ಮಾರಾಟ 50 ಲಕ್ಷ ಲೀಟರ್‌ಗಿಂತ ಹೆಚ್ಚಿದೆ ಎಂದು ವರದಿಯಾಗಿದೆ.

ಮದರ್ ಡೈರಿ ಹಾಲಿನ ಹೊಸ ದರಗಳ ವಿವರ

ಹಾಲಿನ ವಿಧ ಹಳೆಯ ದರ ಹೊಸ ದರ

ಫುಲ್ ಕ್ರೀಮ್ ಹಾಲು ₹72 ₹76

ಟೋನ್ಡ್ ಹಾಲು (ಪ್ಯಾಕೆಟ್) ₹60 ₹62

ಟೋನ್ಡ್ ಹಾಲು (ಬಲ್ಕ್) ₹58 ₹60

ಡಬಲ್ ಟೋನ್ಡ್ ಹಾಲು ₹54 ₹56

ಹಸುವಿನ ಹಾಲು ₹62 ₹65

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

ಅಮೆರಿಕ ರಾಜಕೀಯದಲ್ಲಿ ಹೈಡ್ರಾಮಾ: ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಸೋಲು, Trump ಬೆಂಬಲಕ್ಕೆ ನಿಂತ ರಿಪಬ್ಲಿಕನ್ನರು..!

'ಗಂಡು ಎಷ್ಟು ಮದುವೆಯಾದರೂ ತಪ್ಪಿಲ್ಲ, ಹೆಣ್ಣು ಮರುಮದುವೆಯಾಗಬಾರದಾ?': ಟ್ರೋಲಿಗರಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಖಡಕ್ ತಿರುಗೇಟು!

ಪಡಿತರ ಚೀಟಿದಾರರಿಗೆ ಸಿಹಿಸುದ್ದಿ: ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ; ಮೊಬೈಲ್‌ನಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...

ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ: ಮೆಹ್ರೌಲಿ ತೋಟದಲ್ಲಿ ನಡೆದಿತ್ತು ಆ ಪುಟ್ಟ ಕಂದನ ಅಂತ್ಯಕ್ರಿಯೆ, 57 ವರ್ಷಗಳ ಬಳಿಕ ಮನದ ನೋವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ..!