ಚಂದಾ ಕೊಚ್ಚರ್  
ದೇಶ

ICICI ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್!

ಐಸಿಐಸಿಐ ಬ್ಯಾಂಕ್ ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಆರೋಪಿಸಿ ಚಂದಾ ಕೊಚ್ಚರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ.

ವೇಣುಗೋಪಾಲ್ ಧೂತ್ ನೇತೃತ್ವದ ವಿಡಿಯೋಕಾನ್ ಗ್ರೂಪ್‌ಗೆ ಸಾಲ ಮಂಜೂರು ಮಾಡಿದ್ದರಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಮಾಜಿ ಸಿಇಒ ಚಂದಾ ಕೊಚ್ಚರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಬಾಂಬೆ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರಿದ್ದ ಏಕಸದಸ್ಯ ಪೀಠವು, ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡಿದ ಪ್ರಾಧಿಕಾರವು ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಷಯವನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂದು ಹೇಳಿದೆ.

ಪ್ರಾಧಿಕಾರವು ಸಮರ್ಥವಾಗಿಲ್ಲದ ಕಾರಣ ಮತ್ತು ತನ್ನ ಮುಂದೆ ಲಭ್ಯವಿರುವ ದಾಖಲೆಗಳನ್ನು ಸರಿಯಾಗಿ ಪರಿಗಣಿಸಲು ವಿಫಲವಾದ ಕಾರಣ, ಚಂದಾ ಕೊಚ್ಚರ್ ಅವರನ್ನು ವಿಚಾರಣೆಗೆ ಒಳಪಡಿಸಲು ನೀಡಿದ್ದ ಅನುಮೋದನೆ ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

'ಮೇ 15, 2023 ರಂದು ಹೊರಡಿಸಲಾದ ಆಕ್ಷೇಪಾರ್ಹ ಅನುಮೋದನೆ ಕಾನೂನುಬಾಹಿರವಾಗಿದ್ದು, ಅದನ್ನು ನೀಡಿದ ಪ್ರಾಧಿಕಾರವು ಸಕ್ಷಮ ಪ್ರಾಧಿಕಾರವಲ್ಲ. ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡುವ ಮೊದಲು ಲಭ್ಯವಿರುವ ದಾಖಲೆಗಳು ಮತ್ತು ಪುರಾವೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಲ್ಲಿ ಪ್ರಾಧಿಕಾರ ವಿಫಲವಾಗಿದೆ. ಈ ಕಾರಣದಿಂದ ಅನುಮೋದನೆ ರದ್ದುಗೊಳಿಸಲು ಅರ್ಹವಾಗಿದೆ' ಎಂದು ನ್ಯಾಯಾಲಯ ಹೇಳಿದೆ.

ಐಸಿಐಸಿಐ ಬ್ಯಾಂಕ್ ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಆರೋಪಿಸಿ ಚಂದಾ ಕೊಚ್ಚರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ.

ಸಾಲ ವಂಚನೆ ಪ್ರಕರಣದಲ್ಲಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಡಿಸೆಂಬರ್ 2022 ರಲ್ಲಿ ಬಂಧಿಸಿತ್ತು. 2023ರ ಜನವರಿಯಲ್ಲಿ ದಂಪತಿಗೆ ಮಧ್ಯಂತರ ಜಾಮೀನು ನೀಡಲಾಯಿತು.

ಐಸಿಐಸಿಐ ಬ್ಯಾಂಕಿನಿಂದ ವಿಡಿಯೋಕಾನ್ ಸಾಲ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ಚಂದಾ ಕೊಚ್ಚರ್ ಕೆಲವು ವೈಯಕ್ತಿಕ ಲಾಭ ಪಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಮೊಕದ್ದಮೆ ಹೂಡಲು ಬ್ಯಾಂಕ್ ಅನುಮತಿ ನೀಡಿದೆ ಎಂದು ಜೂನ್ 2023 ರಲ್ಲಿ ಸಿಬಿಐ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿತ್ತು.

ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಯಾವುದೇ ಉದ್ಯೋಗಿ ವಿರುದ್ಧ ವಿಚಾರಣೆ ನಡೆಸಲು ಅಂತಹ ಅನುಮೋದನೆ ಕಡ್ಡಾಯವಾಗಿದೆ. ಏಕೆಂದರೆ, ಬ್ಯಾಂಕ್ ಉದ್ಯೋಗಿಯನ್ನು ಸಾರ್ವಜನಿಕ ಸೇವಕ ಎಂದು ಪರಿಗಣಿಸಲಾಗುತ್ತದೆ.

ಈ ಪ್ರಕರಣವು 2012ರಲ್ಲಿ ಚಂದಾ ಕೊಚ್ಚರ್ ಬ್ಯಾಂಕ್ ಮುಖ್ಯಸ್ಥರಾಗಿದ್ದಾಗ ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಗ್ರೂಪ್‌ಗೆ ನೀಡಿದ 3,250 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದೆ. ಸಾಲ ಮಂಜೂರು ಮಾಡುವಲ್ಲಿ ವಂಚನೆ ಮತ್ತು ಅಕ್ರಮಗಳು ನಡೆದಿವೆ ಎಂದು ಸಿಬಿಐ ಆರೋಪಿಸಿದೆ.

ತನಿಖಾ ಸಂಸ್ಥೆಯ ಪ್ರಕಾರ, ಕೊಚ್ಚರ್ ಅವರ ಪತಿ ಮತ್ತು ಕುಟುಂಬವು ಅಂತಹ ವಹಿವಾಟುಗಳಿಂದ ಲಾಭ ಪಡೆಯಬಹುದೆಂಬ ಕಾರಣಕ್ಕಾಗಿ ಅವರು ವಿಡಿಯೋಕಾನ್ ಗ್ರೂಪ್‌ಗೆ ಸಾಲ ಮಂಜೂರು ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ, ಅವರ ಪತಿಯ ಕಂಪನಿಯಾದ ನು ರಿನ್ಯೂವಬಲ್, ವಿಡಿಯೋಕಾನ್‌ನಿಂದ ಹೂಡಿಕೆಯನ್ನು ಪಡೆದಿದೆ ಎಂದು ಸಿಬಿಐ ಹೇಳಿದೆ.

ಸಾಲವು ನಂತರ ಕಾರ್ಯನಿರ್ವಹಿಸದ ಆಸ್ತಿ (ಎನ್‌ಪಿಎ) ಆಗಿ ಬದಲಾಯಿತು ಮತ್ತು ಬ್ಯಾಂಕ್ ವಂಚನೆ ಪ್ರಕರಣ ಎಂದು ವರ್ಗೀಕರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಬೇಡ': ಸ್ವಂತ ಖರ್ಚಿನಲ್ಲೇ ಭಾಗವಹಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಪತ್ರ

ಜಾರ್ಖಂಡ್‌: NTPCಯಲ್ಲಿ 'ಟೇಕ್-ಅಪ್ ಟ್ರಾಲಿ' ಕುಸಿದು ಮೂವರು ಕಾರ್ಮಿಕರು ಸಾವು; ನಾಲ್ವರಿಗೆ ಗಾಯ

'ಜಟಾಯು' ಎಫೆಕ್ಟ್: ಕೇರಳಂನಲ್ಲಿ ಕಳೆದ ನಾಲ್ಕೇ ದಿನದಲ್ಲಿ 20 ಕೋಟಿ ಸೇರಿ ಒಟ್ಟಾರೆ ದಾಖಲೆಯ 50 ಕೋಟಿಗೂ ಹೆಚ್ಚು ಕಲೆಕ್ಷನ್!

IPLಗೆ ಧೋನಿ ನಿವೃತ್ತಿ; ರೋಹಿತ್ ಶರ್ಮಾ, ಬುಮ್ರಾ ಭಾವುಕ ವಿದಾಯ; ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ! RCB ಹೇಳಿದ್ದೇನು?

Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!