ಪ್ರಧಾನಿ ನರೇಂದ್ರ ಮೋದಿ  online desk
ದೇಶ

ಆಸಿಯಾನ್-ಭಾರತ ಶೃಂಗಸಭೆ ಬೆನ್ನಲ್ಲೇ ಸಂಪುಟ ಸಭೆ; ಗದ್ಗದಿತರಾದ ಪ್ರಧಾನಿ ಮೋದಿ, ಸಹೋದ್ಯೋಗಿಗಳೊಂದಿಗೆ ಮಹತ್ವದ ಚರ್ಚೆ!

ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಅಗತ್ಯವನ್ನು ಪ್ರಧಾನಿ ಮೋದಿ ಅವರು ಸಚಿವ ಸಂಪುಟದ ಸಭೆಯಲ್ಲಿ ಒತ್ತಿ ಹೇಳಿದರು.

ನವದೆಹಲಿ: ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಂಡು ಫಿಲಿಪ್ಪೀನ್ಸ್‌ನಿಂದ ಹಿಂತಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟ ಸಭೆ ನಡೆಸಿದ್ದು, ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಪ್ರಸಂಗ ನಡೆದಿದೆ.

ಸಚಿವ ಸಂಪುಟ ಸಭೆಯಲ್ಲಿ ಡ್ರಗ್ಸ್ ಹಾವಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮೋದಿ ಭಾವೋದ್ವೇಗಕ್ಕೆ ಒಳಗಾದರು.

ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಅಗತ್ಯವನ್ನು ಪ್ರಧಾನಿ ಮೋದಿ ಅವರು ಸಚಿವ ಸಂಪುಟದ ಸಭೆಯಲ್ಲಿ ಒತ್ತಿ ಹೇಳಿದರು.

ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರ ಮಾದಕ ದ್ರವ್ಯ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಮಹತ್ವ ಪಡೆದಿವೆ.

ಭಾವೋದ್ವೇಗದ ಧ್ವನಿಯಲ್ಲಿದ್ದ ಪ್ರಧಾನಿ ಮೋದಿ, ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ.

ನಕ್ಸಲಿಸಂ ತೊಡೆದುಹಾಕಲು ಸಾಧ್ಯವಾದರೆ, ಡ್ರಗ್ಸ್ ಸಮಸ್ಯೆಯನ್ನೂ ನಿರ್ಮೂಲನೆ ಮಾಡಬಹುದು ಎಂದು ಪ್ರಧಾನಿ ಪ್ರತಿಪಾದಿಸಿದರು.

ಇನ್ನು CRPF ಛತ್ತೀಸ್‌ಗಢದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಥಿಯೇಟರ್‌ನಿಂದ 1,000 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ ಬೆಟಾಲಿಯನ್ ನ್ನು ಹಿಂಪಡೆದು ಮಣಿಪುರಕ್ಕೆ ನಿಯೋಜಿಸಲು ಕಳುಹಿಸಿದೆ. ಭಾರತದಲ್ಲಿ ನಕ್ಸಲಿಸಂ ಮಾರ್ಚ್‌ನಲ್ಲಿ ಕೊನೆಗೊಂಡಿತು ಎಂದು ಕೇಂದ್ರ ಸರ್ಕಾರದ ಘೋಷಣೆಯ ನಂತರ ಯಾವುದೇ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಘಟಕದ ಮೊದಲ ಡಿ-ಇಂಡಕ್ಷನ್ ನ್ನು ಈ ಬೆಳವಣಿಗೆ ಗುರುತಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖುದ್ದು ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಿದ ಚೀನಾ ಅಧ್ಯಕ್ಷ; ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್!

ಶ್ರೇಯಾಂಕಾ ಪಾಟೀಲ್ ಸ್ಫೋಟಕ ಬ್ಯಾಟಿಂಗ್: 5 ಸಿಕ್ಸರ್, 7 ಬೌಂಡರಿ, 29 ಎಸೆತಗಳಲ್ಲಿ 76 ರನ್; ಆಯ್ಕೆದಾರರಿಗೆ ಕಠಿಣ ಸಂದೇಶ!

ಟೀಂ ಇಂಡಿಯಾ ವಿರುದ್ಧ ICC ಕಠಿಣ ಕ್ರಮ: ಆಟಗಾರರ ಪಂದ್ಯ ಶುಲ್ಕ ಶೇ. 35ರಷ್ಟು ಕಟ್; ಇಲ್ಲಿದೆ ಕಾರಣ...

ಡೌಟೇ ಇಲ್ಲ, 2027ರ ಚುನಾವಣೆಯಲ್ಲಿ 320ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: UP CM ಯೋಗಿ ಆದಿತ್ಯನಾಥ್

UP Elections 2027: ನಾವು ಕಳೆದ ಬಾರಿ ಗೆದ್ದಿರುವ, 2ನೇ ಸ್ಥಾನದಲ್ಲಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲ್ಲ; ಮೈತ್ರಿ ಸಭೆಗೂ ಮುನ್ನ ಕಾಂಗ್ರೆಸ್ ಗೆ SP ಶಾಕ್!