ನಿಶಿಕಾಂತ್ ದುಬೆ, ಸೋನಿಯಾ ಗಾಂಧಿ 
ದೇಶ

‘50% Owner Of Maruti’: ಸೋನಿಯಾ ಗಾಂಧಿಯೇ 'ಮಾರುತಿ ಕಂಪನಿಯ ನಿಜವಾದ ಮಾಲೀಕರು'; ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಗಳ ಸುರಿಮಳೆ! Video

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದರೂ 'ಮಾರುತಿ'ಗೆ ಸಂಬಂಧಿಸಿದ ಕಂಪನಿಗಳಲ್ಲಿ ಶೇಕಡಾ 50ರಷ್ಟು ಪಾಲುದಾರಿಕೆಯನ್ನು ಹೇಗೆ ಹೊಂದಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಿ ಪ್ರಜೆಯಾಗಿದ್ದರೂ 'ಮಾರುತಿ'ಗೆ ಸಂಬಂಧಿಸಿದ ಕಂಪನಿಗಳಲ್ಲಿ ಶೇಕಡಾ 50ರಷ್ಟು ಪಾಲುದಾರಿಕೆಯನ್ನು ಹೇಗೆ ಹೊಂದಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ. ಮಾರುತಿ ಸಂಬಂಧಿತ ಕಂಪನಿಗಳ ಮಾಲೀಕತ್ವ, ಷೇರು ಪಾಲುದಾರಿಕೆ ಮತ್ತು ಕಾರ್ಯನಿರ್ವಹಣೆಯ ಕುರಿತು ಅವರು ಶನಿವಾರ ಸರಣಿ ಆರೋಪಗಳನ್ನು ಮಾಡಿದ್ದಾರೆ.

ಮಾರುತಿಯ ನಿಜವಾದ ಮಾಲೀಕರು! ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಸೋನಿಯಾ ಗಾಂಧಿ ಅವರನ್ನು "ಮಾರುತಿಯ ನಿಜವಾದ ಮಾಲೀಕರು" ಎಂದು ಕರೆದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಕಂಪನಿಯ ಸ್ಥಾಪನೆ, ಸರ್ಕಾರಿ ಅನುಮತಿಗಳು, ಭೂಮಿ ಹಂಚಿಕೆ ಮತ್ತು ಆರ್ಥಿಕ ನೆರವು ಪಡೆಯುವ ಪ್ರಕ್ರಿಯೆಗಳ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಆರೋಪಗಳು ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರಿಗೆ ಸಂಬಂಧಿಸಿದ 'ಮಾರುತಿ ಯೋಜನೆ'ಯ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿವೆ. ಈ ಯೋಜನೆಯ ಬಗ್ಗೆ 1977ರಲ್ಲಿ ವಿಚಾರಣಾ ಆಯೋಗವೊಂದು (Commission of Enquiry) ತನಿಖೆ ನಡೆಸಿತ್ತು.

ಸೋನಿಯಾ ಗಾಂಧಿಯ ಷೇರು ಪಾಲುದಾರಿಕೆ ಬಗ್ಗೆ ದುಬೆ ಪ್ರಶ್ನೆ: ನವೆಂಬರ್ 21, 1970ರ ಒಪ್ಪಂದವೊಂದನ್ನು ಉಲ್ಲೇಖಿಸಿರುವ ದುಬೆ, ಸಂಜಯ್ ಗಾಂಧಿ ಅವರು 'ಮಾರುತಿ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಕಂಪನಿಯು ಸೋನಿಯಾ ಗಾಂಧಿ ಅವರೊಂದಿಗೆ ನಂಟು ಹೊಂದಿತ್ತು ಎಂದು ಅವರು ಆರೋಪಿಸಿದ್ದಾರೆ.

ವಿದೇಶಿ ಪ್ರಜೆಯಾಗಿದ್ದರೂ, ಸೋನಿಯಾ ಗಾಂಧಿ ಅವರು ಮಾರುತಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಶೇಕಡಾ 50ರಷ್ಟು ಷೇರುಗಳನ್ನು ಹೊಂದಿದ್ದರು ಎಂಬುದು ನಿಮಗೆ ತಿಳಿದಿದೆಯೇ? ನವೆಂಬರ್ 21, 1970ರಂದು ಸಂಜಯ್ ಗಾಂಧಿ ಅವರು ಸೋನಿಯಾ ಗಾಂಧಿ ಅವರ 'ಮಾರುತಿ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್' ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಸೋನಿಯಾ ಗಾಂಧಿ ಅವರೇ ಮಾರುತಿಯ ನಿಜವಾದ ಮಾಲೀಕರಾಗಿದ್ದರು. ಮಾರುತಿ ಕಂಪನಿಯು 1970ರಲ್ಲಿ ಸ್ಥಾಪನೆಯಾಯಿತು, ಆದರೆ ಅದಕ್ಕೂ ಮುನ್ನವೇ, ಅಂದರೆ 1968ರಲ್ಲಿಯೇ, ಕಾರುಗಳನ್ನು ತಯಾರಿಸಲು ಅನುಮತಿ ನೀಡುವ ಪತ್ರವನ್ನು ಭಾರತ ಸರ್ಕಾರದಿಂದ ಈ ಕಂಪನಿ ಪಡೆದಿತ್ತು ಎಂದು ದುಬೆ ಬರೆದುಕೊಂಡಿದ್ದಾರೆ.

1970ರಲ್ಲಿ ಸ್ಥಾಪನೆಯಾದ ಈ ಕಂಪನಿಯು, ಅದಕ್ಕೂ ಎರಡು ವರ್ಷಗಳ ಮೊದಲು ಅಂದರೆ 1968ರಲ್ಲೇ ಕಾರುಗಳನ್ನು ತಯಾರಿಸಲು ಸರ್ಕಾರದ ಅನುಮತಿಯನ್ನು ಪಡೆಯಲು ಹೇಗೆ ಸಾಧ್ಯವಾಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಈ ಉದ್ಯಮವು ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವ ಮೊದಲೇ ಇಂದಿರಾ ಗಾಂಧಿಯವರ ಸರ್ಕಾರವು ಅದಕ್ಕೆ ಅಧಿಕೃತ ಬೆಂಬಲವನ್ನು ನೀಡಿತ್ತು ಎಂದು ದುಬೆ ಆರೋಪಿಸಿದ್ದಾರೆ. 1969ರಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸೊಸೆ ಸೋನಿಯಾ ಗಾಂಧಿಯವರ ಕಂಪನಿಗೆ ಕಾರುಗಳನ್ನು ತಯಾರಿಸಲು ಅನುಮತಿ ನೀಡುವ ಕ್ಯಾಬಿನೆಟ್ ಆದೇಶವನ್ನು ಹೊರಡಿಸಿದರು. 1972ರ ಏಪ್ರಿಲ್ 3ರಂದು, ಸಂಜಯ್ ಗಾಂಧಿಯವರು ಈ ಕಂಪನಿಗಾಗಿ ಭಾರತ ಸರ್ಕಾರದ ವೆಚ್ಚದಲ್ಲಿ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಎಂದು ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ಕಚೇರಿಯ (PMO) ಪಾತ್ರ ಮತ್ತು ಆರ್.ಕೆ. ಧವನ್ ಅವರ ನಂಟು: ಈ ಕಂಪನಿಯ ಕಾರ್ಯಾಚರಣೆಗಳಲ್ಲಿ ಪ್ರಧಾನ ಮಂತ್ರಿ ಕಚೇರಿಯು (PMO)ಭಾಗಿಯಾಗಿತ್ತು ಎಂಬ ಆರೋಪದ ಬಗ್ಗೆಯೂ ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ. ಖಾಸಗಿ ಕಂಪನಿಯೊಂದರ ಕಚೇರಿಯು ಪ್ರಧಾನ ಮಂತ್ರಿ ಕಚೇರಿಯಿಂದಲೇ ಹೇಗೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಇಂದಿರಾ ಗಾಂಧಿಯವರ ಆಪ್ತ ಸಹಾಯಕ ಮತ್ತು ಖಾಸಗಿ ಕಾರ್ಯದರ್ಶಿಯಾಗಿದ್ದ ಆರ್.ಕೆ. ಧವನ್ ಅವರಿಗೆ ಈ ಉದ್ಯಮದೊಂದಿಗೆ ಇದ್ದ ಸಂಬಂಧದ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಖಾಸಗಿ ಕಂಪನಿಯ ಕಚೇರಿಯನ್ನು ಹೇಗೆ ತೆರೆಯಲಾಯಿತು? ಪ್ರಧಾನ ಮಂತ್ರಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದ ಧವನ್, ಅದರ ನಿರ್ದೇಶಕರಾಗಿದ್ದು ಹೇಗೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಭೂಮಿ ಹಂಚಿಕೆ ಮತ್ತು ಬ್ಯಾಂಕ್ ಸಾಲಗಳ ಬಗ್ಗೆ ದುಬೆ ಪ್ರಶ್ನೆಗಳು: ಮಾರುತಿ ಕಂಪನಿಯ ಯೋಜನೆಗೆ ಭೂಮಿಯನ್ನು ಹಂಚಿಕೆ ಮಾಡಲಾದ ಆರೋಪದ ಬಗ್ಗೆಯೂ ದುಬೆ ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಹರಿಯಾಣ ಸರ್ಕಾರದ ನಿಯಮಗಳ ಪ್ರಕಾರ, ವಿದೇಶಿ ಪ್ರಜೆಗಳ ಹೆಸರಿನಲ್ಲಿ ಭೂಮಿಯನ್ನು ಹೊಂದುವಂತಿರಲಿಲ್ಲ. "ಆ ಕಾಲದ ಹರಿಯಾಣ ಸರ್ಕಾರದ ನಿಯಮಗಳ ಅನ್ವಯ, ವಿದೇಶಿ ಪ್ರಜೆಯ ಹೆಸರಿನಲ್ಲಿ ಭೂಮಿಯನ್ನು ಹಂಚಿಕೆ ಮಾಡಲು ಅವಕಾಶವಿರಲಿಲ್ಲ. ಹಾಗಿದ್ದರೂ, 1970ರಲ್ಲಿ ಸೋನಿಯಾ ಗಾಂಧಿಯವರಿಗೆ ಭೂಮಿಯನ್ನು ಹೇಗೆ ಹಂಚಿಕೆ ಮಾಡಲಾಯಿತು?" ಎಂದು ಅವರು ಕೇಳಿದ್ದಾರೆ. ಅಲ್ಲದೆ, ಈ ವಿವಾದವನ್ನು ಬ್ಯಾಂಕುಗಳ ರಾಷ್ಟ್ರೀಕರಣದೊಂದಿಗೆ ಜೋಡಿಸಿದ ಅವರು, ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?

ನಿಲ್ಲಿಸಿದ್ದ ರೈಲಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ; ಗೋಲ್ಡ್ ರಿಂಗ್ ಕ್ಲೂ; ಪೊಲೀಸರು ಪ್ರಕರಣ ಭೇದಿಸಿದ್ದೆ ರೋಚಕ!

ಹಾವೇರಿ: ಮಧ್ಯರಾತ್ರಿ ಆಸ್ಪತ್ರೆ ವಾರ್ಡ್ ಗೆ ನುಗ್ಗಿದ ಕಾಮುಕ, ಮಹಿಳೆಯ ಬ್ಲೌಸ್ ಒಳಗೆ ಕೈ ಹಾಕಿ ಮೊಬೈಲ್, ಪರ್ಸ್ ಕದಿಯಲು ಯತ್ನ, CCTVಯಲ್ಲಿ ಕಳ್ಳಾಟ ಸೆರೆ!

BJP ಕೈಗೊಂಬೆಯಾಗದೆ ಧೈರ್ಯ ತೋರಿಸಿ; META ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ; ಅಕೌಂಟ್ ಮರುಸ್ಥಾಪನೆಗೆ ಆಗ್ರಹ..!