ಮುಸಾದಿಕ್ ಮಲಿಕ್ 
ದೇಶ

ಪಾಕ್ ಸಚಿವ ಮುಸಾದಿಕ್ ಮಲಿಕ್ ತಾಜ್ ಮಹಲ್ ಭೇಟಿಗೆ ಅನುಮತಿ; ಆದ್ರೆ ನಿಜಾಮುದ್ದೀನ್ ದರ್ಗಾಕ್ಕೆ ನೋ ಎಂದ ಕೇಂದ್ರ!

ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡುವ ಪ್ರಸ್ತಾವನೆಗೆ ಭದ್ರತಾ ಸಂಸ್ಥೆಗಳು ಹಾಗೂ ವಿದೇಶಾಂಗ ಸಚಿವಾಲಯವು ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.

ನವದೆಹಲಿ: ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಅವರು ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ದೆಹಲಿಯ ನಿಜಾಮುದ್ದೀನ್ ದರ್ಗಾಗೆ ಭೇಟಿ ನೀಡುವ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿರುವುದಾಗಿ ಶನಿವಾರ ಎಎನ್‌ಐ (ANI) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಲಿಕ್ ನೇತೃತ್ವದ ಪಾಕಿಸ್ತಾನಿ ನಿಯೋಗಕ್ಕೆ, ಹುಮಾಯೂನ್ ಸಮಾಧಿ ಮತ್ತು ದೆಹಲಿ ಹಾತ್ ಸೇರಿದಂತೆ ದೆಹಲಿಯ ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ನವೆಂಬರ್ 20 ರಿಂದ 22 ರವರೆಗೆ ನಡೆಯಲಿರುವ ಮೊದಲ SCO ನಾಗರಿಕ ಸಂವಾದ ವೇದಿಕೆಯಲ್ಲಿ ಭಾಗವಹಿಸಲು ಪಾಕ್ ಸಚಿವ ಮುಸಾದಿಕ್ ಮಲಿಕ್ ಅವರ ನಿಯೋಗ ಭಾರತಕ್ಕೆ ಆಗಮಿಸಿದೆ. ಬಂದ ದಿನವೇ ತಾಜ್ ಮಹಲ್ ಮತ್ತು ಹುಮಾಯೂನ್ ಸಮಾಧಿ ಸೇರಿದಂತೆ ಭಾರತದ ಹಲವಾರು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಬಯಕೆಯನ್ನು ಪಾಕ್ ಸಚಿವರು ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತ್ತು. ಇಂದು ಅವರಿಗೆ ತಾಜ್​ ಮಹಲ್​ಗೆ ಭೇಟಿ ನೀಡಲು ಅನುಮತಿಸಿದೆ.

ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡುವ ಪ್ರಸ್ತಾವನೆಗೆ ಭದ್ರತಾ ಸಂಸ್ಥೆಗಳು ಹಾಗೂ ವಿದೇಶಾಂಗ ಸಚಿವಾಲಯವು ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.

ವಿಶೇಷವೆಂದರೆ, 2025ರ ಮೇ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಸೇನಾ ಕಾರ್ಯಾಚರಣೆಯ ನಂತರ ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಅಧಿಕೃತ ನಿವಾಸ 'ಗಂಗಾ' ನವೀಕರಣಕ್ಕೆ ₹100 ಕೋಟಿ ಖರ್ಚು!: ವಿಜಯೇಂದ್ರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ಸುಪ್ರೀಂ ಕೋರ್ಟ್ ಜಡ್ಜ್ ಎಂದು ಭಾವಿಸಿ ಓವೈಸಿಗೆ 'ಗಾರ್ಡ್ ಆಫ್ ಆನರ್': UP ಪೊಲೀಸರ ವಿರುದ್ಧ ತನಿಖೆಗೆ ಆದೇಶ! Video

Senior Women’s T20 Trophy: ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದ ಕರ್ನಾಟಕದ ವನಿತೆಯರು! ಸಿಎಂ ಡಿಕೆಶಿ ಅಭಿನಂದನೆ, Video

'ಬಸವ ಮಂಟಪ' ಕೃತಿ ವಿವಾದ: 'ಲಿಂಗಹತ' ಎಂದು ಬರೆದ ರವಿ ಹಂಜ್ ಹತ್ಯೆಗೆ 5 ಲಕ್ಷ ರೂ. ಬಹುಮಾನ ಘೋಷಣೆ!

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ