ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ ಬೆಲ್ಟ್ ಬಕಲ್‌ನೊಳಗೆ ಚಾಕು ಪತ್ತೆ; ಚೀನಾ ಮೂಲದ ಪ್ರಯಾಣಿಕ ವಶಕ್ಕೆ, Video

ಪ್ರಯಾಣಿಕನ ಬ್ಯಾಗ್‌ ಅನ್ನು ಎಕ್ಸ್‌ರೇ ತಪಾಸಣೆಗೆ ಒಳಪಡಿಸಿದಾಗ ಬೆಲ್ಟ್‌ನ ಲೋಹದ ಬಕಲ್‌ನಲ್ಲಿ ಅಸಹಜ ವಸ್ತುವೊಂದು ಇರುವುದು ಸಿಐಎಸ್‌ಎಫ್‌ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಅನುಮಾನಗೊಂಡ ಸಿಬ್ಬಂದಿ ಬ್ಯಾಗ್‌ ಅನ್ನು ಪ್ರತ್ಯೇಕವಾಗಿ..

ಬೆಲ್ಚ್ ನಲ್ಲಿ ಚಾಕು ಪತ್ತೆ
Srinivasa Murthy VN
Updated On : 28 Nov 2026, 1:39 pm

ನವದೆಹಲಿ: ಸೊಂಟದ ಬೆಲ್ಟ್‌ನ ಲೋಹದ ಬಕಲ್‌ನೊಳಗೆ ಚಾಕು ಅಡಗಿಸಿಟ್ಟುಕೊಂಡು ಪ್ರಯಾಣಿಸಲು ಯತ್ನಿಸಿದ ಚೀನಾ ಮೂಲದ ಪ್ರಯಾಣಿಕನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಸಿಐಎಸ್‌ಎಫ್‌ ಸಿಬ್ಬಂದಿ ತಡೆದು ವಶಕ್ಕೆ ಪಡೆದಿದ್ದಾರೆ.

ನವೆಂಬರ್ 20ರಂದು ಈ ಘಟನೆ ನಡೆದಿದ್ದು, ಹಾಂಗ್‌ಕಾಂಗ್‌ನಿಂದ ದೆಹಲಿ ಮೂಲಕ ಛತ್ತೀಸ್‌ಗಢದ ರಾಯ್‌ಪುರಕ್ಕೆ ತೆರಳಬೇಕಿದ್ದ 48 ವರ್ಷದ ಪ್ರಯಾಣಿಕನನ್ನು ಭದ್ರತಾ ತಪಾಸಣೆ ವೇಳೆ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕನ ಬ್ಯಾಗ್‌ ಅನ್ನು ಎಕ್ಸ್‌ರೇ ತಪಾಸಣೆಗೆ ಒಳಪಡಿಸಿದಾಗ ಬೆಲ್ಟ್‌ನ ಲೋಹದ ಬಕಲ್‌ನಲ್ಲಿ ಅಸಹಜ ವಸ್ತುವೊಂದು ಇರುವುದು ಸಿಐಎಸ್‌ಎಫ್‌ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಅನುಮಾನಗೊಂಡ ಸಿಬ್ಬಂದಿ ಬ್ಯಾಗ್‌ ಅನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ, ಕಪ್ಪು ಬಣ್ಣದ ಲೋಹದ ಬಕಲ್‌ನೊಳಗೆ ಅಡಗಿಸಿಟ್ಟಿದ್ದ ಚಿಕ್ಕ ಗಾತ್ರದ ಚಾಕು ಪತ್ತೆಯಾಗಿದೆ.

Advertisement

Advertisement

ಮಕ್ಕಳೇ ಬೆಲ್ಟ್‌ ಕೊಡಿಸಿದ್ದರು ಎಂದ ಪ್ರಯಾಣಿಕ!

ವಿಚಾರಣೆ ವೇಳೆ, ಈ ಬೆಲ್ಟ್‌ ಅನ್ನು ತನ್ನ ಮಕ್ಕಳು ಉಡುಗೊರೆಯಾಗಿ ನೀಡಿದ್ದರು. ಅದರ ಬಕಲ್‌ನಲ್ಲಿ ಚಾಕು ಅಡಗಿಸಿರುವುದು ತನಗೆ ತಿಳಿದಿರಲಿಲ್ಲ ಎಂದು ಪ್ರಯಾಣಿಕ ಹೇಳಿದ್ದಾನೆ ಎನ್ನಲಾಗಿದೆ.

ಬಳಿಕ ನಿಷೇಧಿತ ವಸ್ತುವಾಗಿದ್ದ ಚಾಕುವನ್ನು ಆತನ ಬ್ಯಾಗ್‌ನಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಸಿಐಎಸ್‌ಎಫ್‌ ತನ್ನ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಘಟನೆಯ ವಿಡಿಯೋವನ್ನೂ ಪ್ರಕಟಿಸಿದೆ.

“ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದ ಸಿಐಎಸ್‌ಎಫ್‌ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಪ್ರಯಾಣಿಕನ ಬೆಲ್ಟ್‌ನ ಬಕಲ್‌ನಲ್ಲಿ ಅಡಗಿಸಿಟ್ಟಿದ್ದ ಚಾಕುವನ್ನು ಪತ್ತೆಹಚ್ಚಿದ್ದಾರೆ” ಎಂದು ಸಿಐಎಸ್‌ಎಫ್‌ ತಿಳಿಸಿದೆ.

ಎಕ್ಸ್‌ರೇ ತಪಾಸಣೆ ವೇಳೆ ಲೋಹದ ವಸ್ತುವಿನ ಬಗ್ಗೆ ಅನುಮಾನಗೊಂಡ ಸಿಬ್ಬಂದಿ, ಬ್ಯಾಗ್‌ ಅನ್ನು ಭೌತಿಕವಾಗಿ ಪರಿಶೀಲಿಸಿದಾಗ ಚಾಕು ಪತ್ತೆಯಾಗಿದೆ ಎಂದು ಭದ್ರತಾ ಪಡೆ ವಿವರಿಸಿದೆ.

ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಚಾಕು ಸೇರಿದಂತೆ ಹರಿತವಾದ ವಸ್ತುಗಳನ್ನು ಕೊಂಡೊಯ್ಯುವುದನ್ನು ಅಂತಾರಾಷ್ಟ್ರೀಯ ವಿಮಾನಯಾನ ಭದ್ರತಾ ನಿಯಮಗಳ ಪ್ರಕಾರ ನಿಷೇಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement